ಜಿನೀವಾ (ಸ್ವಿಟ್ಜರ್ಲೆಂಡ್); ಇನ್ನೂ ಲಸಿಕೆ ಹಾಕಿಸಿಕೊಳ್ಳದ ಜನರು ಒಮಿಕ್ರಾನ್ ಸೋಂಕಿಗೆ ಒಳಗಾದ ಬಳಿಕ ಕೋವಿಡ್ನಿಂದ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ತಾಂತ್ರಿಕ ಮುಖ್ಯಸ್ಥ ಡಾ ಮರಿಯಾ ವ್ಯಾನ್ ಕೆರ್ಕೋವ್, ಹೊಸ ರೂಪಾಂತರಿ ಒಮಿಕ್ರಾನ್ ಅದೊಂದು ಸೌಮ್ಯ ಸ್ವಭಾವದ್ದು ಎಂದು ಪರಿಗಣಿಸುವುದು ಭಾರಿ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಒಮಿಕ್ರಾನ್ ಸೋಂಕಿಗೆ ಒಳಗಾದ ಜನರು ರೋಗದ ಸಂಪೂರ್ಣ ಲಕ್ಷಣಗಳನ್ನು ಹೊಂದಿರುತ್ತಾರೆ, ಲಕ್ಷಣ ರಹಿತ ಸೋಂಕಿನಿಂದ ಹಿಡಿದು ತೀವ್ರತರವಾದ ಕಾಯಿಲೆ ಮತ್ತು ಸಾವಿನ ತನಕವೂ ಇರುತ್ತದೆ. ನಾವು ಕಲಿಯುತ್ತಿರುವ ವಿಷಯವೆಂದರೆ ಲಸಿಕೆ ಹಾಕಿಸಿಕೊಳ್ಳದ ಜನರು Omicron ತಗುಲಿದ ಬಳಿಕ ಕೋವಿಡ್ ಸಂಕಷ್ಟಕ್ಕೆ ಸಿಲುಕುತ್ತಾರೆ. ಮತ್ತು ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಬಹುದು.
ಹಾಗಾಗಿ ಒಮಿಕ್ರಾನ್ ಬಗ್ಗೆ ಎಚ್ಚರಿಕೆಯಿಂದರಬೇಕು. ಇದು ಡೆಲ್ಟಾಕ್ಕಿಂತ ಕಡಿಮೆ ತೀವ್ರತೆ ಹೊಂದಿರಬಹುದು ಆದರೆ ಬಹಳ ಅಪಾಯಕಾರಿ ಮತ್ತು ಇದು ಮೈಲ್ಡ್ ಅಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಾ ಕೆರ್ಕೋವ್ ಎಚ್ಚರಿಕೆ ನೀಡಿದ್ದಾರೆ.
ಎಲ್ಲರಿಗೂ ಒಮಿಕ್ರಾನ್ ಹರಡಿದೆ ಎಂಬುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕೆರ್ಕೋವ್, ಒಮಿಕ್ರಾನ್ ಡೆಲ್ಟಾಗಿಂತ ವೇಗವಾಗಿ ಹರಡುತ್ತಿರುವುದು ನಿಜ. ಆದರೆ ಇದು ಪ್ರತಿಯೊಬ್ಬರಿಗೂ ಹರಡುತ್ತದೆ ಎಂದು ಅರ್ಥವಲ್ಲ ಎಂದೂ ಅವರು ಇದೇ ವೇಳೆ, ಸ್ಪಷ್ಟಪಡಿಸಿದ್ದಾರೆ. ಒಮಿಕ್ರಾನ್ ತೊಲಗಿಸಲು ಮತ್ತು ನಿಯಂತ್ರಿಸಲು ವಾಕ್ಸಿನೇಷನ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತೀವ್ರತರವಾದ ರೋಗ ಮತ್ತು ಸಾವಿನ ವಿರುದ್ಧ ವ್ಯಾಕ್ಸಿನೇಷನ್ ನಂಬಲಾಗದಷ್ಟು ರಕ್ಷಣಾತ್ಮಕವಾಗಿದೆ. ಆದರೆ, ಇದು ಸೋಂಕು ಹಾಗೂ ಸೋಂಕಿನ ವ್ಯಾಪಕ ಪ್ರಸರಣ ತಡೆಯುತ್ತದೆ. ಆದರೆ, ಸೋಂಕುಗಳು ಮತ್ತು ಪ್ರಸರಣ ತಡೆಗಟ್ಟುವಲ್ಲಿ ಇದು ಸಂಪೂರ್ಣ ಪರಿಪೂರ್ಣ ಎಂದು ಭಾವಿಸುವುದು ತಪ್ಪು. ಹೀಗಾಗಿಯೇ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೆರ್ಕೋವ್ ಹೇಳಿದ್ದಾರೆ.
ಡಾ ಕೆರ್ಕೋವ್ ವಿಶ್ಲೇಷಣೆ ಪ್ರಕಾರ, ವಿಶ್ವದ ಕೊರೊನಾ ಪೀಡಿತರ ಸಂಖ್ಯೆ 34.8 ಕೋಟಿಗೆ ತಲುಪಿದೆ. ಸಾವುಗಳ ಸಂಖ್ಯೆ ಕೂಡಾ 55 ಲಕ್ಷದ ಗಡಿ ದಾಟಿದೆ. ಇನ್ನು 900 ಕೋಟಿ ಡೋಸ್ಗಳನ್ನು ಈಗಾಗಲೇ ಜನರಿಗೆ ನೀಡಲಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ ಎಂಬುದನ್ನು ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 6 ರೊಳಗೆ ದೇಶದಲ್ಲಿ ಕೊರೊನಾ 3 ನೇ ಅಲೆ ಉತ್ತುಂಗಕ್ಕೆ: ಅಧ್ಯಯನ