ಕೀವ್: ಐದು ದಿನಗಳ ಹಿಂದೆ ರಷ್ಯಾದ ಪಡೆಗಳು ವಶಕ್ಕೆ ಪಡೆದಿದ್ದ ಆಗ್ನೇಯ ಉಕ್ರೇನ್ ನಗರದ ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಉಕ್ರೇನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆಡಳಿತದ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಅವರು ಈ ಸುದ್ದಿಯನ್ನು ಪ್ರಕಟಿಸಿದ್ದಾರೆ. ಆದರೆ, ಮೇಯರ್ ಹೇಗೆ ರಷ್ಯಾ ಪಡೆಗಳಿಂದ ಮುಕ್ತರಾದರು ಎಂಬುದರ ಕುರಿತು ವಿವರಗಳನ್ನು ಬಿಡುಗಡೆ ಮಾಡಲಿಲ್ಲ. ಕಳೆದ ವಾರ ಬಿಡುಗಡೆಯಾಗಿದ್ದ ವೀಡಿಯೊದಲ್ಲಿ ಆಕ್ರಮಿತ ಮೆಲಿಟೊಪೋಲ್ ಮೇಯರ್ ಅನ್ನು ರಷ್ಯಾ ಸೈನಿಕರು ಸುತ್ತುವರಿದಿರುವಂತೆ ಹಾಗೂ ಸಿಟಿ ಹಾಲ್‌ನಿಂದ ಮೆರವಣಿಗೆ ಮಾಡುತ್ತಿದ್ದನ್ನು ತೋರಿಸಲಾಗಿತ್ತು.
ಉಕ್ರೇನ್‌ನಲ್ಲಿ ರಷ್ಯಾ ಯುದ್ಧ ಆರಂಭಿಸುವ ಮುನ್ನವೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರ್ಕಾರ, ಉಕ್ರೇನ್‌ನಲ್ಲಿ ರಷ್ಯಾ ಸೇನೆ ಜನರನ್ನು ಬಂಧಿಸಿ ಇಲ್ಲವೇ ಕೊಲ್ಲುವ ಯೋಜನೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು, ಅಧ್ಯಕ್ಷ ಝೆಲೆನ್‌ಸ್ಕಿ ಅವರು ಕೂಡ ಪ್ರಮುಖ ಗುರಿಯಾಗಿರಬಹುದು ಎಂತಲೂ ಎಚ್ಚರಿಸಿತ್ತು.
ಇದನ್ನೂ ಓದಿ: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಖಂಡಿಸಲು ಭಾರತಕ್ಕೆ ಅಮೆರಿಕ ನಾಯಕರ ಒತ್ತಾಯ..