ETV Bharat / international

Russia-Ukraine Conflict : ಯುದ್ಧದಲ್ಲೂ ಕಾರ್ಯನಿರ್ವಹಿಸುತ್ತಿವೆ ಉಕ್ರೇನ್​ನ ಬ್ಯಾಂಕ್​ಗಳು - ಉಕ್ರೇನ್ ಮೇಲೆ ರಷ್ಯಾ ಆಕ್ರಮಣ

ಯುದ್ಧದಲ್ಲೂ ಉಕ್ರೇನ್​ನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ರಷ್ಯಾ ಆಕ್ರಮಣಕ್ಕೂ ಮೊದಲೇ ಸಿದ್ಧತೆ ಮಾಡಿಕೊಂಡ ಕಾರಣದಿಂದಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಕೀವ್ ಇಂಡಿಪೆಂಡೆಂಟ್ ಹೇಳಿದೆ..

Ukraine's banking system still functional despite military operations
Russia-Ukraine Conflict: ಯುದ್ಧದಲ್ಲೂ ಕಾರ್ಯನಿರ್ವಹಿಸುತ್ತಿವೆ ಉಕ್ರೇನ್​ನ ಬ್ಯಾಂಕ್​ಗಳು
author img

By

Published : Mar 12, 2022, 7:43 AM IST

ಕೀವ್, ಉಕ್ರೇನ್ : ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್​ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲಕ್ಷಾಂತರ ಮಂದಿ ಉಕ್ರೇನ್​ನಿಂದ ಹೊರನಡೆದಿದ್ದಾರೆ. ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಬಾಂಬ್, ಮಿಸೈಲ್, ಶೆಲ್ ದಾಳಿಗಳು ಆಗಾಗ ಸಂಭವಿಸುತ್ತಿರುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡುತ್ತಿವೆ.

ಕೀವ್​ ಇಂಡಿಪೆಂಡೆಂಟ್ ಎಂಬ ಸುದ್ದಿಸಂಸ್ಥೆ ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದು, ರಾಷ್ಟ್ರೀಯ ಬ್ಯಾಂಕ್​ ಆದ ನ್ಯಾಷನಲ್ ಬ್ಯಾಂಕ್ ಆಫ್ ಉಕ್ರೇನ್ (ಎನ್​ಬಿಯು) ಇಂತಹ ಯುದ್ಧದ ಪರಿಸ್ಥಿತಿಯ ಹೊರತಾಗಿಯೂ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಿದೆ.

  • ⚡️NBU: Banking system remains functional under challenging conditions, no significant outflow of funds.

    The National Bank of Ukraine reported that despite the war, all systems are operating and obligations are met as it made preparations ahead of the invasion.

    — The Kyiv Independent (@KyivIndependent) March 11, 2022 " class="align-text-top noRightClick twitterSection" data=" ">

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗೆ ಮುಂಚಿತವಾಗಿ ಉಕ್ರೇನಿಯನ್ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇದರಿಂದಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದು ಕೀವ್ ಇಂಡಿಪೆಂಡೆಂಟ್ ಹೇಳಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಜೈವಿಕ ಅಸ್ತ್ರಗಳನ್ನು ಉತ್ಪಾದಿಸುತ್ತಿದ್ದು, ಪುರಾವೆಗಳನ್ನು ನಾಶಪಡಿಸಿದೆ : ರಷ್ಯಾ

ಮತ್ತೊಂದೆಡೆ ಪೋಲೆಂಡ್​​ನ ವಾರ್ಸಾ ಮತ್ತು ಕ್ರಾಕೋವ್ ನಗರಗಳು ಸಾಕಷ್ಟು ಉಕ್ರೇನ್​ ನಿರಾಶ್ರಿತರಿಗೆ ಆಹ್ವಾನ ನೀಡಿದ್ದು, ಮತ್ತಷ್ಟು ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದು, ಉಕ್ರೇನ್​ ಸರ್ಕಾರ ಈ ವಿಚಾರವಾಗಿ ಚಿಂತನೆ ನಡೆಸುತ್ತಿದೆ. ಈಗಾಗಲೇ ಎರಡು ವಾರಗಳ ಅವಧಿಯಲ್ಲಿ 1 ಲಕ್ಷ ಉಕ್ರೇನಿಯನ್ನರು ಕ್ರಾಕೋವ್​​ಗೆ ಮತ್ತು 2 ಲಕ್ಷ ಮಂದಿ ವಾರ್ಸಾಗೆ ಆಗಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.