ಕೀವ್: ಉಕ್ರೇನ್ ವಾಯುಪಡೆಯ ವಿಮಾನವು ಶುಕ್ರವಾರ ತಡರಾತ್ರಿ ಪೂರ್ವ ನಗರ ಚುಗುಯೆವ್ ಬಳಿ ಅಪಘಾತಕ್ಕೀಡಾಗಿ 25 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಜನರಲ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಇಲ್ಲಿವರೆಗಿನ ಪ್ರಾಥಮಿಕ ಮಾಹಿತಿಯ ಪ್ರಕಾರ, 25 ಜನರು ಸಾವನ್ನಪ್ಪಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಇಬ್ಬರು ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ. ಇತರರಿಗಾಗಿ ಶೋಧ ಕಾರ್ಯ ಮುದುವರೆದಿದೆ.
ಆನ್ -26 ಮಿಲಿಟರಿ ವಿಮಾನದ ಅಪಘಾತವು ಎಂಜಿನ್ ವೈಫಲ್ಯದಿಂದ ಉಂಟಾಗಿದೆ ಎಂದು ಸ್ಥಳೀಯ ಪತ್ರಿಕೆ ಡಿಪೋ.ಯುವಾ, ಉಕ್ರೇನಿಯನ್ ರಕ್ಷಣಾ ಸಚಿವಾಲಯದ ಮೂಲ ಉಲ್ಲೇಖಿಸಿ ವರದಿ ಮಾಡಿದೆ.
ಜಿನೀವಾ ಮೂಲದ ಬ್ಯೂರೋ ಆಫ್ ಏರ್‌ಕ್ರಾಫ್ಟ್ ಆಕ್ಸಿಡೆಂಟ್ಸ್ ಆರ್ಕೈವ್ಸ್ ಪ್ರಕಾರ, 2017ರಿಂದ ಕನಿಷ್ಠ 10 ಆಂಟೊನೊವ್ ಆನ್ -26 ವಿಮಾನಗಳು ಅಪಘಾತಕ್ಕೀಡಾಗಿವೆ. ವಾಯುವ್ಯ ಸಿರಿಯಾದ ಹ್ಮೈಮಿನ್ ವಾಯುನೆಲೆಗೆ ಇಳಿಯುವ ವೇಳೆ ಸಂಭವಿಸಿದ 2018ರ ಅವಘಡದಲ್ಲಿ 39 ಜನರು ಸಾವನ್ನಪ್ಪಿದ್ದರು. ಆನ್ -26 ಎಂಬುದು ಅವಳಿ ಎಂಜಿನ್ ಟರ್ಬೊಪ್ರೊಪ್ ವಿಮಾನವಾಗಿದ್ದು, 1969ರಿಂದ 1986ರವರೆಗೆ ಉಕ್ರೇನ್‌ನ ಕೀವ್‌ನಲ್ಲಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ ತಯಾರಿಸಲಾಗಿತ್ತು.