ETV Bharat / international

ಬಿಕ್ಕಟ್ಟು: ಮ್ಯಾನ್ಮಾರ್ ರಾಯಭಾರಿ ಜತೆ ಇಂಗ್ಲೆಂಡ್ ಸರ್ಕಾರ ಚರ್ಚೆ

ಮ್ಯಾನ್ಮಾರ್ ಬಿಕ್ಕಟ್ಟು ಕುರಿತಂತೆ ಕಳವಳ ವ್ಯಕ್ತಪಡಿಸಿರುವ ಇಂಗ್ಲೆಂಡ್​​ ಸರ್ಕಾರ, ಅಲ್ಲಿನ ಪರಿಸ್ಥಿತಿ ಬಗ್ಗೆ ಮ್ಯಾನ್ಮಾರ್ ರಾಯಭಾರಿ ಜತೆ ಚರ್ಚೆ ನಡೆಸಿದೆ ಎಂದು ಬ್ರಿಟಿಷ್ ರಾಯಭಾರಿ ಬಾರ್ಬರಾ ವುಡ್​ವರ್ಡ್​ ತಿಳಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೌನ್ಸಿಲ್, ಮ್ಯಾನ್ಮಾರ್​ನ ರಾಯಭಾರಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವುಡ್​ವರ್ಡ್ ತಿಳಿಸಿದ್ದಾರೆ.

ಚರ್ಚೆ
ಚರ್ಚೆ
author img

By

Published : Feb 2, 2021, 3:52 PM IST

ಲಂಡನ್: ಮ್ಯಾನ್ಮಾರ್‌ನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಗೃಹಬಂಧನದಲ್ಲಿರಿಸಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಂಗ್ಲೆಂಡ್​​ ಸರ್ಕಾರ, ಅಲ್ಲಿನ ಪರಿಸ್ಥಿತಿ ಬಗ್ಗೆ ಮ್ಯಾನ್ಮಾರ್ ರಾಯಭಾರಿ ಜತೆ ಚರ್ಚೆ ನಡೆಸಿದೆ ಎಂದು ಬ್ರಿಟಿಷ್ ರಾಯಭಾರಿ ಬಾರ್ಬರಾ ವುಡ್​ವರ್ಡ್​ ತಿಳಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೌನ್ಸಿಲ್, ಮ್ಯಾನ್ಮಾರ್​ನ ರಾಯಭಾರಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವುಡ್​ವರ್ಡ್ ತಿಳಿಸಿದ್ದಾರೆ.

ಮ್ಯಾನ್ಮಾರ್​​ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಕೌನ್ಸಿಲರ್ ಆಂಗ್ ಸಾನ್ ಸೂಕಿ ಹಾಗೂ ಅಧಿಕಾರಿಗಳ ಬಂಧನವನ್ನು ಖಂಡಿಸಿದರು. ಜೊತೆಗೆ ಜನತೆ ನೀಡಿರುವ ಅಭಿಪ್ರಾಯಗಳನ್ನು ಗೌರವಿಸುವಂತೆ ಕರೆ ನೀಡಿದರು.

ಮತ್ತೊಂದೆಡೆ, ಬಂಧನಕ್ಕೊಳಗಾಗಿರುವ ಮ್ಯಾನ್ಮಾರ್ ನಾಯಕರನ್ನು ತಕ್ಷಣ ಬಿಡುಗಡೆ ಮಾಡುವಂತೆ ನೇಪಾಳ ಕರೆ ನೀಡಿದೆ. ಈ ಬಗ್ಗೆ ನೇಪಾಳ ವಿದೇಶಾಂಗ ಸಚಿವಾಲಯವು, ಅಧ್ಯಕ್ಷ ಯು ವಿನ್ ಮೈಂಟ್ ಮತ್ತು ರಾಜ್ಯ ಕೌನ್ಸಿಲರ್ ದಾವ್ ಆಂಗ್ ಸಾನ್ ಸೂಕಿ ಸೇರಿದಂತೆ ಬಂಧನಕ್ಕೊಳಗಾಗಿರುವವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಮ್ಯಾನ್ಮಾರ್​​​ನಲ್ಲಿ ಪ್ರಜಾಪ್ರಭುತ್ವ ಪುನಃ ಸ್ಥಾಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಬೇಕೆಂದೂ ನೇಪಾಳ ಒತ್ತಾಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.