ETV Bharat / international

ಬ್ರಿಟನ್‌ನಲ್ಲಿ ಕೊರೊನಾ ಹೊಸ ಸ್ವರೂಪ: ಮೊದಲ ಬಾರಿಗೆ ಅತಿಹೆಚ್ಚು ಸಾವು - ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್

ಅಧಿಕೃತ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ ಬುಧವಾರ 744 ಸೋಂಕಿತರು ಸಾವನ್ನಪ್ಪಿದ್ದು, ಒಂದೇ ದಿನ 39,237 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

UK
ಯುಕೆಯಲ್ಲಿ ಕೊರೊನಾ ಹೊಸ ಸ್ವರೂಪ
author img

By

Published : Dec 24, 2020, 3:42 PM IST

ಲಂಡನ್: ಬ್ರಿಟನ್‌ನಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್ ಸಾವುನೋವುಗಳು ವರದಿಯಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ ಬುಧವಾರ (ಡಿ.23) ಸೋಂಕಿನಿಂದ 744 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಮಾರಕ ಸೋಂಕಿನಿಂದ ಒಟ್ಟು 69,157 ಜನರು ಮೃತಪಟ್ಟಿದ್ದಾರೆ.

ಇನ್ನು ಒಂದೇ ದಿನ 39,237 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ದೇಶದಲ್ಲಿ ಕೊರೊನಾ ಹೊಸ ಸ್ವರೂಪ ಪ್ರಾರಂಭವಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕರಲ್ಲಿ ಈ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,155,996 ಕ್ಕೆ ತಲುಪಿದೆ.

ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಅವರು, ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಇಂಗ್ಲೆಂಡ್‌ನ ಪೂರ್ವ ಮತ್ತು ಆಗ್ನೇಯದ ಹೆಚ್ಚಿನ ಪ್ರದೇಶಗಳನ್ನು ಕಟ್ಟುನಿಟ್ಟಿನ ನಿರ್ಬಂಧಕ್ಕೆ ಒಳಪಡಿಸುವುದಾಗಿ ಘೋಷಿಸಿದ್ದಾರೆ.

ಹೊಸ ಕೋವಿಡ್​ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಈ ಪ್ರದೇಶದ ಜನರಿಗೆ ಸೀಮಿತ ವಿನಾಯಿತಿಗಳನ್ನು ನೀಡಿ ಮನೆಯಲ್ಲಿಯೇ ಇರಬೇಕೆಂದು ಎಚ್ಚರಿಕೆ ನೀಡಲಾಗಿದೆ. ಜನರು ಸಾಧ್ಯವಾದರೆ ಮನೆಯಿಂದ ಕೆಲಸ ಮಾಡುವಂತೆಯೂ ಕೋರಲಾಗಿದೆ.

ಎರಡನೇ ಹೊಸ ರೂಪಾಂತರ ಕೊರೊನಾ ಸೋಂಕು ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಗೆ ಸಂಬಂಧಿಸಿದೆ ಎಂದು ಹ್ಯಾನ್ಕಾಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಎರಡನೇ ಹೊಸ ರೂಪಾಂತರವು ಇನ್ನೂ ಹೆಚ್ಚು ಹರಡಬಲ್ಲದು ಮತ್ತು ಇದು ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ರೂಪಾಂತರಕ್ಕಿಂತ ಹೆಚ್ಚು ಹರಡಬಲ್ಲ ಸಾಧ್ಯತೆಗಳಿದೆ ಎಂದು ಅವರು ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.