ETV Bharat / international

ಮಾತುಕತೆ ಮೂಲಕ ಗಡಿ ವಿವಾದ ಬಗೆಹರಿಸಿಕೊಳ್ಳಲು ಭಾರತ -ಚೀನಾಕ್ಕೆ ಬ್ರಿಟಿಷ್ ಪ್ರಧಾನಿ ಸಲಹೆ

author img

By

Published : Jun 25, 2020, 12:17 PM IST

ಬಹುಶಃ ನಾನು ಹೇಳಬಹುದಾದ ಅತ್ಯುತ್ತಮ ಸಲಹೆ ಎಂದರೆ ಭಾರತ-ಚೀನಾ ಗಡಿ ಸಮಸ್ಯೆಗಳ ಕುರಿತು ಮಾತುಕತೆ ನಡೆಸಬೇಕು. ಇದಕ್ಕಾಗಿ ಎಲ್ಲ ಪ್ರೋತ್ಸಾಹಗಳನ್ನು ನಾವು ನೀಡುತ್ತೇವೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

UK PM terms Sino-India standoff very serious; calls for dialogue
ಭಾರತ- ಚೀನಾ ಗಡಿ ವಿವಾದ ಬಗೆಹರಿಸಿಕೊಳ್ಳಲು ಬ್ರಿಟಿಷ್ ಪ್ರಧಾನಿ ಸಲಹೆ

ಲಂಡನ್ : ಪೂರ್ವ ಲಡಾಖ್‌ನಲ್ಲಿ ಉಲ್ಬಣಗೊಂಡಿರುವ ಗಡಿ ವಿವಾದವು ಅತ್ಯಂತ ಗಂಭೀರವಾದ ಮತ್ತು ಆತಂಕಕಾರಿಯಾದ ವಿಚಾರವಾಗಿದೆ. ಯುಕೆ ಈ ಬಗ್ಗೆ ಗಮನಹರಿಸುತ್ತಿದೆ. ಭಾರತ-ಚೀನಾ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಹೌಸ್​ ಆಫ್​ ಕಾಮ್​​ನಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದ ಫ್ಲಿಕ್ ಡ್ರಮ್ಮೊಂಡ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಬಹುಶಃ ನಾನು ಹೇಳಬಹುದಾದ ಅತ್ಯುತ್ತಮ ಸಲಹೆ ಎಂದರೆ ಗಡಿ ಸಮಸ್ಯೆಗಳ ಕುರಿತು ಮಾತುಕತೆ ನಡೆಸಬೇಕು. ಇದಕ್ಕಾಗಿ ಎಲ್ಲ ಪ್ರೋತ್ಸಾಹಗಳನ್ನು ನಾವು ನೀಡುತ್ತೇವೆ ಎಂದು ಜಾನ್ಸನ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.