ETV Bharat / international

ಮತ್ತೆ ಲಾಕ್​​ ಆದ ಇಂಗ್ಲೆಂಡ್​​​.. ಕೋವಿಡ್​ ವಿರುದ್ಧ ಒಟ್ಟಾಗಿ ಕೆಲಸ ಮಾಡೋಣ ಎಂದ ಪ್ರಧಾನಿ ಜಾನ್ಸನ್ - ಇಂಗ್ಲೆಂಡ್ ಲಾಕ್​​ಡೌನ್​​ ನ್ಯೂಸ್

ರೂಪಾಂತರಿ ಕೊರೊನಾ ಹಿನ್ನೆಲೆ ಇಂಗ್ಲೆಂಡ್​ನಲ್ಲಿ ಲಾಕ್​​ಡೌನ್​ ಘೋಷಿಸಲಾಗಿದೆ. ವೇಲ್ಸ್ ಮತ್ತು ಉತ್ತರ ಐರ್ಲೆಂಡ್​ನಲ್ಲಿ ಈಗಾಗಲೇ ಲಾಕ್​ಡೌನ್​​ ಜಾರಿಯಲ್ಲಿದೆ.

Boris Johnson
ಪ್ರಧಾನಿ ಬೋರಿಸ್ ಜಾನ್ಸನ್
author img

By

Published : Jan 5, 2021, 6:53 AM IST

ಲಂಡನ್​: ರೂಪಾಂತರಿ ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರದಂದು ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್ ಅನ್ನು ಮತ್ತೆ ಜಾರಿಗೊಳಿಸಿದ್ದಾರೆ.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಬೋರಿಸ್ ಜಾನ್ಸನ್, ಈ ಕೋವಿಡ್​ ಮಹಾಮಾರಿ ಕಳೆದ ವರ್ಷ ಪ್ರಾರಂಭವಾಗಿದ್ದು, ಇದರ ವಿರುದ್ಧ ಇಡೀ ರಾಷ್ಟ್ರವೇ ಹೋರಾಡಿದೆ. ಮಹಾಮಾರಿ ಕೊರೊನಾ ವಿರುದ್ಧ ಸಾಮೂಹಿಕ ಹೋರಾಟ ನಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದೀಗ ಕೊರೊನಾ ರೂಪಾಂತರ ಹೊಂದಿದೆ. ಈ ರೂಪಾಂತರ ಕೊರೊನಾ ಹರಡುವಿಕೆ ವೇಗ ಗಮನಿಸಿದರೆ ಆತಂಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೋವಿಡ್​​ನಿಂದ ಆಸ್ಪತ್ರೆಗಳು ಒತ್ತಡಕ್ಕೊಳಗಾಗಿದೆ. ಇಂಗ್ಲೆಂಡ್​​​ನ ಆಸ್ಪತ್ರೆಗಳಲ್ಲಿ ಕೋವಿಡ್​​ ರೋಗಿಗಳ ಸಂಖ್ಯೆ ಕಳೆದ ವಾರದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 27,000ಕ್ಕೆ ತಲುಪಿದೆ. ಇದು ಕಳೆದ ವರ್ಷ ಏಪ್ರಿಲ್​​ನಲ್ಲಿ ಆದ ಒಟ್ಟು ಸೋಂಕಿತರ ಸಂಖ್ಯೆಗಿಂತ ಶೇ. 40 ರಷ್ಟು ಹೆಚ್ಚಿದೆ ಎಂದು ತಿಳಿಸಿದರು. ಕಳೆದ ಒಂದು ವಾರದಲ್ಲಿ ದೇಶದಲ್ಲಿ ಮೃತರ ಸಂಖ್ಯೆ ಶೇ. 20 ರಷ್ಟು ಏರಿಕೆಯಾಗಿದ್ದು, ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದರು.

ಈ ಸುದ್ದಿಯನ್ನೂ ಓದಿ: ಇಂಗ್ಲೆಂಡ್​ನಲ್ಲಿ ಒಂದೇ ದಿನ 57 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ : ಗುಣಮುಖರಾದವರ ಬಗ್ಗೆ ಇಲ್ಲ ನಿಖರ ಮಾಹಿತಿ

ಈ ಹಿನ್ನೆಲೆ, ಇಂಗ್ಲೆಂಡ್​ನಲ್ಲಿ ಲಾಕ್​​ಡೌನ್​ ಘೋಷಿಸಲಾಗಿದೆ. ವೇಲ್ಸ್ ಮತ್ತು ಉತ್ತರ ಐರ್ಲೆಂಡ್​ನಲ್ಲಿ ಈಗಾಗಲೇ ಲಾಕ್​ಡೌನ್​​ ಜಾರಿಯಲ್ಲಿದೆ.

ಲಸಿಕೆ ವಿತರಣೆ ಮಾಡುವ ಈ ಸಂದರ್ಭದಲ್ಲಿ ರೂಪಾಂತರಿ ಕೊರೊನಾ ಹೆಚ್ಚಾಗಿ ಹರಡುತ್ತಿದ್ದು, ಆತಂಕ ಮತ್ತಷ್ಟು ಹೆಚ್ಚಿಸಿದೆ. ಇದನ್ನು ನಿಯಂತ್ರಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದರರ್ಥ ಸರ್ಕಾರವು ಮತ್ತೊಮ್ಮೆ ಮನೆಯಲ್ಲಿಯೇ ಇರಲು ನಿಮಗೆ ಸೂಚಿಸುತ್ತಿದೆ ಎಂದು ಪ್ರಧಾನಿ ಮನವಿ ಮಾಡಿದರು. ಇನ್ನೂ ಅಗತ್ಯ ಸೇವೆಗಳಿಗಷ್ಟೇ ಹೊರಬರಲು ಅನುಮತಿ ಇದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.