ಲಂಡನ್: ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಂಗ್ಲೆಂಡ್ನಲ್ಲಿ ಮುಂದಿನ 6 ತಿಂಗಳು ಕಠಿಣ ಕೋವಿಡ್ ನಿಯಮಗಳನ್ನು ವಿಸ್ತರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಹೌಸ್ ಆಫ್ ಕಾಮನ್ಸ್ ನಲ್ಲಿ ನಡೆದ ಚರ್ಚೆಯಲ್ಲಿ ಸೆಪ್ಟೆಂಬರ್ ವರೆಗೆ ಕೋವಿಡ್ ನಿಯಮಗಳನ್ನು ವಿಸ್ತರಿಸುವಂತೆ ಮತ ಚಲಾಯಿಸಿ, ಕೊರೊನಾವೈರಸ್ ತುರ್ತು ಕ್ರಮಗಳನ್ನು ಆರು ತಿಂಗಳವರೆಗೆ ಮುಂದುವರಿಸಲು ಬ್ರಿಟಿಷ್ ಶಾಸಕರು ಒಪ್ಪಿಗೆ ಸೂಚಿಸಿದರು. ಹೀಗಾಗಿ ಮುಂದಿನ 3 ತಿಂಗಳು ಮತ್ತೆ ಲಾಕ್‌ಡೌನ್ ಜಾರಿಮಾಡಲು ಸರ್ಕಾರ ಮುಂದಾಗಿದೆ.
ಕೊರೊನಾದಿಂದ ಇಡೀ ಜಗತ್ತು ತತ್ತರಿಸಿದ್ದು, ಸೋಂಕಿತರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವ ಸೂಚನೆ ಕಂಡು ಬಂತಾದರೂ ನಂತರದಲ್ಲಿ ರೂಪಾಂತರಗೊಂಡ ಹೊಸ ವೈರಸ್ ಜನರಲ್ಲಿ ಮತ್ತಷ್ಟು ಭೀತಿ ಉಂಟು ಮಾಡಿದೆ. ಇದೀಗ ಇಂಗ್ಲೆಂಡ್ ನಲ್ಲಿ ರೂಪಾಂತರ ವೈರಸ್ ಹಾವಳಿ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ.