ETV Bharat / international

ಜೂ.27ರವರೆಗೂ ನೀರವ್​ಗಿಲ್ಲ ಮುಕ್ತಿ: ಮತ್ತೆ ಜಾಮೀನು ಅರ್ಜಿ ತಿರಸ್ಕಾರ - undefined

ನೈರುತ್ಯ ಲಂಡನ್​ನ ವಂಡ್ಸ್​ವರ್ತ್​ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನೀರವ್ ಮೂರನೇ ಬಾರಿ ಸಲ್ಲಿಸಿದ ಜಾಮೀನು ಕೋರಿಕೆಯೂ ತಿರಸ್ಕೃತಗೊಂಡಿದೆ. ವೆಸ್ಟ್​ಮಿನ್​​ಸ್ಟರ್​ ​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಮ್ಮ ಅರ್ಬುತ್​ನಾಟ್​ ಈ ಆದೇಶ ನೀಡಿದ್ದಾರೆ.

ನೀರವ್ ಮೋದಿ
author img

By

Published : May 30, 2019, 5:43 PM IST

ಲಂಡನ್​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ನಿಂದ ಸಾವಿರಾರು ಕೋಟಿ ರೂ ಕೊಳ್ಳೆ ಹೊಡೆದು, ಇಂಗ್ಲೆಂಡ್​ನಲ್ಲಿ ಸಿಕ್ಕಿಬಿದ್ದಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಅಲ್ಲಿನ ನ್ಯಾಯಾಲಯ ಜೂನ್​ 27ರವರೆಗೆ ಜೈಲುಶಿಕ್ಷೆ ವಿಸ್ತರಿಸಿದೆ.

ನೈರುತ್ಯ ಲಂಡನ್​ನ ವಂಡ್ಸ್​ವರ್ತ್​ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನೀರವ್ ಮೂರನೇ ಬಾರಿ ಸಲ್ಲಿಸಿದ ಜಾಮೀನು ಕೋರಿಕೆಯೂ ತಿರಸ್ಕೃತಗೊಂಡಿದೆ. ವೆಸ್ಟ್​ಮಿನ್​​ ಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಮ್ಮ ಅರ್ಬುತ್​ನಾಟ್​ ಈ ಆದೇಶ ನೀಡಿದ್ದಾರೆ.

ಅಲ್ಲಿದೆ, ನೀರವ್​ನನ್ನು ಹಸ್ತಾಂತರಿಸುವಂತೆ ಮನವಿ ಸಲ್ಲಿಸಿರುವ ಭಾರತಕ್ಕೆ, ಯಾವ ಜೈಲಿನಲ್ಲಿ ಈತನನ್ನು ಇರಿಸಲಾಗುತ್ತೆ ಎಂಬ ಮಾಹಿತಿಯನ್ನು 14 ದಿನಗಳೊಳಗೆ ನೀಡುವಂತೆ ಸೂಚಿಸಿದೆ.

ಮಾರ್ಚ್​ 19ರಂದು ಮೆಟ್ರೋ ಬ್ಯಾಂಕ್​ನ ಸೆಂಟ್ರಲ್ ಲಂಡನ್ ಬ್ರಾಂಚ್​ನಲ್ಲಿ ಹೊಸದೊಂದು ಖಾತೆ ತೆರಯಲು ಮುಂದಾಗಿದ್ದ ನೀರವ್​ನನ್ನು ಹಸ್ತಾಂತರ ವಾರೆಂಟ್​ ಮೂಲಕ ಸ್ಕಾಟ್​ಲ್ಯಾಂಡ್​ ಯಾರ್ಡ್​ ಅಧಿಕಾರಿಗಳು ಬಂಧಿಸಿದ್ದರು. ಅಂದಿನಿಂದ ನೀರವ್​ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.

Intro:Body:

Nirav Modi 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.