ಇಸ್ತಾಂಬುಲ್: ವಿಶ್ವದ ಅಗ್ರ ರಾಷ್ಟ್ರಗಳೂ ಸೇರಿದಂತೆ ಬಹುತೇಕ ಎಲ್ಲ ದೇಶಗಳ ಮೇಲೂ ತನ್ನ ಅಭಿಪ್ರಾಯ ಹೇರಿಕೆ ಮಾಡುವ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದ ಮಾತಿಗೆ ಟರ್ಕಿ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟರ್ಕಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ನಿರ್ದಾಕ್ಷಿಣ್ಯವಾಗಿ ಹರಿದು ಎಸೆದಿದ್ದಾರೆ. ಈ ಮೂಲಕ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗಾನ್, ಟ್ರಂಪ್ ಮಾತನ್ನು ತಳ್ಳಿಹಾಕಿದ್ದಾರೆ.
ಹರಿದು ಎಸೆದ ಪತ್ರದಲ್ಲೇನಿತ್ತು..?
ಅ.9ರ ತಾರೀಖು ನಮೂದಾಗಿದ್ದ ಅಮೆರಿಕ ಅಧ್ಯಕ್ಷ ಪತ್ರದಲ್ಲಿ ಉತ್ತರ ಸಿರಿಯಾದ ಮೇಲೆ ಯಾವುದೇ ರೀತಿಯ ದಾಳಿಯನ್ನು ನಡೆಸದಂತೆ ಟ್ರಂಪ್ ಮನವಿ ಮಾಡಿದ್ದಲ್ಲದೆ, ಟರ್ಕಿಯ ಈ ನಡೆಯನ್ನೂ ಪತ್ರದಲ್ಲಿ ಖಂಡಿಸಿದ್ದರು. ಐಸಿಸ್ ಉಗ್ರರ ವಿರುದ್ಧ ಹೋರಾಟ ಮಾಡುತ್ತಿರುವ ಖುರ್ದಿಷ್ ಹೋರಾಟಗಾರರ ವಿರುದ್ಧ ಟರ್ಕಿಯ ದಾಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಕುಪಿತರಾಗಿದ್ದಾರೆ.