ಮಾರ್ಷಲ್ ಪ್ಲಾನ್ ಅಥವಾ 'ಯುರೋಪಿಯನ್ ರಿಕವರಿ ಪ್ರೋಗ್ರಾಂ' ಎಂದು ಕರೆಯಲ್ಪಡುವ ಯೋಜನೆಯು ಯುಎಸ್ನ ಕಾರ್ಯಕ್ರಮವಾಗಿದ್ದು, ಎರಡನೇ ಮಹಾಯುದ್ಧದ ವಿನಾಶದ ಬಳಿಕ ಪಶ್ಚಿಮ ಯುರೋಪಿಗೆ ನೆರವು ನೀಡಿ ಯುರೋಪ್ ಪುನರ್ನಿರ್ಮಾಣ ಮಾಡುವ ಯೋಜನೆ ಇದಾಗಿದೆ.
1948 ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ಯುರೋಪಿಯನ್ ಖಂಡದ ಪುನರ್ನಿರ್ಮಾಣ ಪ್ರಯತ್ನಗಳಿಗೆ ಹಣಕಾಸು ಸಹಾಯ ಮಾಡಲು 15 ಬಿಲಿಯನ್ಗಿಂತ ಹೆಚ್ಚಿನ ಹಣವನ್ನು ಒದಗಿಸಿತ್ತು.
ಆಗಿನ ಯುಎಸ್ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಸಿ. ಮಾರ್ಷಲ್ ಅವರ 'ಮೆದುಳಿನ ಕೂಸು' ಎಂಬುದಾಗಿ ಈ ಯೋಜನೆಯನ್ನು ಹೆಸರಿಸಲಾಯಿತು. ಯುದ್ಧದ ಸಮಯದಲ್ಲಿ ಹೆಚ್ಚು ಹಾನಿಗೊಳಗಾದ ನಗರಗಳು, ಕೈಗಾರಿಕೆಗಳು ಮತ್ತು ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ಹಾಗೂ ಯುರೋಪಿಯನ್ ನೆರೆಹೊರೆಯವರ ನಡುವಿನ ವ್ಯಾಪಾರ ಅಡೆ - ತಡೆಗಳನ್ನು ತೆಗೆದುಹಾಕಲು ಸುಮಾರು ನಾಲ್ಕು ವರ್ಷಗಳ ಯೋಜನೆಯಾಗಿ ಇದನ್ನು ರಚಿಸಲಾಯಿತು. ಹಾಗೆಯೇ ಆ ದೇಶಗಳು ಮತ್ತು ಅಮೆರಿಕ ನಡುವೆ ಉತ್ತೇಜಕ ವಾಣಿಜ್ಯವಾಗಿ ಕೂಡಾ ಮಾರ್ಪಾಡು ಮಾಡಲಾಯಿತು.
ಮಾರ್ಷಲ್ ಯೋಜನೆಯ ಅನುಷ್ಠಾನವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಅದರ ಯುರೋಪಿಯನ್ ಮಿತ್ರ ರಾಷ್ಟ್ರಗಳು ಹಾಗೂ ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರಕ್ಕೆ ಅಡಿಗಲ್ಲು ಎಂದು ಉಲ್ಲೇಖಿಸಲ್ಪಟ್ಟಿದೆ. ಇದು ಮಧ್ಯ ಮತ್ತು ಪೂರ್ವ ಯುರೋಪಿನ ಹೆಚ್ಚಿನ ಭಾಗವನ್ನು ಪರಿಣಾಮಕಾರಿಯಾಗಿ ಹಿಡಿತದಲ್ಲಿಟ್ಟುಕೊಂಡು, ತನ್ನ ಗಣರಾಜ್ಯಗಳನ್ನು ಕಮ್ಯುನಿಸ್ಟ್ ರಾಷ್ಟ್ರಗಳಾಗಿ ಸ್ಥಾಪಿಸಿತು.
1947ರ ಉತ್ತರಾರ್ಧದಲ್ಲಿ ನಡೆದ ಯುರೋಪಿಯನ್ ರಾಜ್ಯಗಳ ಸಭೆಯ ಬಳಿಕ ಮಾರ್ಷಲ್ ಯೋಜನೆಯಡಿ ಸಮನ್ವಯಗೊಂಡ ರಾಜ್ಯಗಳ ಪುನರ್ ರ್ನಿರ್ಮಾಣವನ್ನು ರೂಪಿಸಲಾಯಿತು.
ಗಮನಾರ್ಹ ಎಂಬಂತೆ, ಸೋವಿಯತ್ ಒಕ್ಕೂಟ ಮತ್ತು ಅದರ ಉಪ ರಾಜ್ಯಗಳಿಗೂ ಕೂಡಾ ಈ ಆಹ್ವಾನಗಳನ್ನು ವಿಸ್ತರಿಸಲಾಯಿತು. ಆದರೆ, ತಮ್ಮ ರಾಷ್ಟ್ರೀಯ ವ್ಯವಹಾರಗಳಲ್ಲಿ ಯು.ಎಸ್ ಮೂಗುತೂರಿಸುತ್ತಿದೆ ಎಂದು ಮನಗಂಡ ಸೋವಿಯತ್ ಅಂಜಿಕೆಯಿಂದಲೇ ಆಹ್ವಾನವನ್ನು ತಿರಸ್ಕರಿಸಿತ್ತು .
ಅಧ್ಯಕ್ಷ ಹ್ಯಾರಿ ಟ್ರೂಮನ್ ಏಪ್ರಿಲ್ 3, 1948 ರಂದು ಮಾರ್ಷಲ್ ಯೋಜನೆಗೆ ಸಹಿ ಹಾಕಿದರು. ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಪಶ್ಚಿಮ ಜರ್ಮನಿ ಹಾಗೂ ನಾರ್ವೆ ಸೇರಿದಂತೆ 16 ಯುರೋಪಿಯನ್ ರಾಷ್ಟ್ರಗಳಿಗೆ ಯೋಜನೆಯಡಿ ನೆರವು ವಿತರಿಸಲಾಯಿತು.
ವಿಶ್ವ ಯುದ್ಧದ ಅಂತ್ಯದ ಬಳಿಕ ಯುರೋಪ್ ಧ್ವಂಸವಾಗಿತ್ತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಬೆಲ್ಜಿಯಂನ ಕೆಲವು ಪ್ರಮುಖ ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರಗಳು ಸೇರಿದಂತೆ ಅನೇಕ ನಗರಗಳು ನಾಶವಾಗಿ ಹೋದವು. ಕೃಷಿ ಮತ್ತು ಇತರ ಆಹಾರ ಉತ್ಪಾದನೆಯು ಹೋರಾಟದ ಕಾರಣದಿಂದ ಸ್ಥಗಿತಗೊಂಡು ಕ್ರಮೇಣ ಖಂಡದ ಕೆಲವು ಪ್ರದೇಶಗಳು ಬರಗಾಲದ ಅಂಚಿಗೆ ಸರಿಯಿತು, ಎಂದು ಮಾರ್ಷಲ್‌ಗೆ ನೀಡಿದ ವರದಿಗಳು ಸೂಚಿಸಿವೆ.
ಅಷ್ಟೇ ಅಲ್ಲದೆ ಈ ಪ್ರದೇಶದ ಸಾರಿಗೆಯ ಮೂಲ ಸೌಕರ್ಯಗಳಾದ ರೈಲ್ವೆಗಳು, ರಸ್ತೆಗಳು, ಸೇತುವೆಗಳು ಹಾಗೂ ಬಂದರುಗಳು ವೈಮಾನಿಕ ದಾಳಿಯ ಸಮಯದಲ್ಲಿ ಅಪಾರ ಹಾನಿಗೊಳಗಾದವು. ಅನೇಕ ದೇಶಗಳ ಹಡಗು, ನೌಕೆಗಳು ಮುಳುಗಿ ಸಮುದ್ರರಾಜನ ಒಡಲು ಸೇರಿಕೊಂಡವು.
ಮಾರ್ಷಲ್ ಯೋಜನೆಯು ಮೂಲಭೂತವಾಗಿ ತಲಾ ಆಧಾರದ ಮೇಲೆ ನೆರವು ನೀಡಿತು. ಅದರಲ್ಲೂ ಅಪಾರ ಹಾನಿಗೊಳಗಾದ ಪಶ್ಚಿಮ ಜರ್ಮನಿ, ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್‌ನಂತಹ ಪ್ರಮುಖ ಕೈಗಾರಿಕಾ ಶಕ್ತಿ ಹೊಂದಿರುವ ರಾಷ್ಟ್ರಗಳಿಗೆ ಹೆಚ್ಚಿನ ಮೊತ್ತವನ್ನು ನೀಡಲಾಯಿತು.
ಒಟ್ಟಾರೆ ಯುರೋಪ್ ಚೇತರಿಕೆಯಾಗಬೇಕಾದರೆ ಈ ದೊಡ್ಡ ರಾಷ್ಟ್ರಗಳ ಚೇತರಿಕೆ ಅತ್ಯಗತ್ಯ ಎಂಬುದು ಮಾರ್ಷಲ್ ಮತ್ತು ಅವರ ಸಲಹೆಗಾರರ ನಂಬಿಕೆಯಾಗಿತ್ತು ಎಂಬುದನ್ನು ಇದು ಆಧರಿಸಿದೆ.
ಫಲಾನುಭವಿಗಳು...?
ಆದ್ರೆ ಈ ಯೋಜನೆಯಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳು ಸಮಾನವಾಗಿ ಪ್ರಯೋಜನ ಪಡೆಯಲಿಲ್ಲ. ಜರ್ಮನಿಯ ನಾಜಿ ಹಾಗೂ ಆಕ್ಸಿಸ್ ಶಕ್ತಿಗಳೊಂದಿಗೆ ಹೋರಾಡಿದ ಇಟಲಿಯಂತಹ ರಾಷ್ಟ್ರಗಳು ಹಾಗೂ ಯಾವುದೇ ಪ್ರತಿಕ್ರಿಯಿಸದೇ ತಟಸ್ಥವಾಗಿ ಉಳಿದಿರುವವರು ( ಸ್ವಿಟ್ಜರ್ಲೆಂಡ್) ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮತ್ತು ಇತರ ಮಿತ್ರ ಶಕ್ತಿಗಳೊಂದಿಗೆ ಹೋರಾಡಿದ ದೇಶಗಳಿಗಿಂತ ತಲಾ ಕಡಿಮೆ ಸಹಾಯವನ್ನು ಪಡೆದವು.
ಇಲ್ಲೊಂದು ಗಮನಾರ್ಹವಾದ ಅಪವಾದ ಎಂದರೆ ಪಶ್ಚಿಮ ಜರ್ಮನಿ. ಎರಡನೇಯ ಮಹಾಯುದ್ಧದ ಅಂತ್ಯದ ವೇಳೆಗೆ ಜರ್ಮನಿ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಆದರೆ, ಪುನರುಜ್ಜೀವನಗೊಂಡ ಪಶ್ಚಿಮ ಜರ್ಮನಿಯ ಪ್ರದೇಶದ ಆರ್ಥಿಕ ಸ್ಥಿರತೆ ಕಾರ್ಯಸಾಧ್ಯವಾದ ಮಾತಾಗಿತ್ತು. ಅಲ್ಲಿ ಆರ್ಥಿಕ ಸ್ಥಿರತೆ ಅತ್ಯಗತ್ಯ ಎಂದು ಪರಿಗಣಿಸಲ್ಪಟ್ಟಿತ್ತಾದರೂ ಕಬ್ಬಿಣದ ಪರದೆಯಂತಿದ್ದ ಪೂರ್ವ ಜರ್ಮನಿ ಹಾಗೂ ಇನ್ನೊಂದು ಮಗ್ಗುಲಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಕಾರಣದಿಂದ ಪಶ್ಚಿಮ ಜರ್ಮನಿಯನ್ನು ಮೇಲೇಳಲು ಬಿಡಲಿಲ್ಲ.
ಒಟ್ಟಾರೆಯಾಗಿ, ಮಾರ್ಷಲ್ ಯೋಜನೆಯಡಿ ಒದಗಿಸಲಾದ ಒಟ್ಟು ನೆರವಿನ ಕಾಲು ಭಾಗದಷ್ಟು ಗ್ರೇಟ್ ಬ್ರಿಟನ್ ಪಡೆದರೆ, ಫ್ರಾನ್ಸ್ಗೆ ಐದನೇ ಒಂದು ಭಾಗಕ್ಕಿಂತ ಕಡಿಮೆ ಹಣವನ್ನು ನೀಡಲಾಯಿತು.
ಯೋಜನೆಯ ಅನುಷ್ಠಾನ:
ಇದು ಜಾರಿಗೆ ಬಂದ ದಶಕಗಳಲ್ಲಿ, ಮಾರ್ಷಲ್ ಯೋಜನೆಯ ನಿಜವಾದ ಆರ್ಥಿಕ ಲಾಭವು ಹೆಚ್ಚು ಚರ್ಚೆಯ ವಿಷಯವಾಗಿತ್ತು. ವಾಸ್ತವವಾಗಿ, ಆ ಸಮಯದಲ್ಲಿನ ವರದಿಗಳ ಯೋಜನೆ ಜಾರಿಗೆ ಬರುವ ಹೊತ್ತಿಗೆ ಪಶ್ಚಿಮ ಯುರೋಪ್ ಆಗಾಗಲೇ ಚೇತರಿಕೆಯ ಹಾದಿಯಲ್ಲಿತ್ತು.
ಯುನೈಟೆಡ್ ಸ್ಟೇಟ್ಸ್ನ ಗಮನಾರ್ಹ ಹೂಡಿಕೆಯ ಹೊರತಾಗಿಯೂ, ಮಾರ್ಷಲ್ ಯೋಜನೆಯಡಿಯಲ್ಲಿ ಒದಗಿಸಲಾದ ನಿಧಿಗಳು ಹಾಗೂ ಅವುಗಳನ್ನು ಸ್ವೀಕರಿಸಿದ ದೇಶಗಳ ಒಟ್ಟು ರಾಷ್ಟ್ರೀಯ ಆದಾಯದ ಶೇ. 3 ಕ್ಕಿಂತ ಕಡಿಮೆ ಪಾಲನ್ನು ಹೊಂದಿವೆ ಎನ್ನಲಾಗಿದೆ. ಯೋಜನೆ ಜಾರಿಯಲ್ಲಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ದೇಶಗಳಲ್ಲಿನ ಜಿಡಿಪಿಯ ಸಾಧಾರಣ ಬೆಳವಣಿಗೆಗೆ ಇದು ಕಾರಣವಾಯಿತು.
ಯುನೈಟೆಡ್ ಸ್ಟೇಟ್ಸ್ನ ರಹಸ್ಯ ಸೇವಾ ಸಂಸ್ಥೆಯಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಮಾರ್ಷಲ್ ಯೋಜನೆಯಡಿ ಹಂಚಿಕೆಯಾದ ಶೇ. 5 ರಷ್ಟು ಹಣವನ್ನು ಪಡೆದುಕೊಂಡಿದೆ ಎಂದೂ ಸಹಾ ಹೇಳಲಾಗಿದೆ. ಸಿಐಎ ಈ ಹಣವನ್ನು ಹಲವಾರು ಯುರೋಪಿಯನ್ ದೇಶಗಳಲ್ಲಿ "ಮುಂಭಾಗದ" ವ್ಯವಹಾರಗಳನ್ನು ಸ್ಥಾಪಿಸಲು ಬಳಸಿಕೊಂಡಿತು. ಯು.ಎಸ್. ಆ ಸಮಯದಲ್ಲಿ ಸೋವಿಯತ್ನ ಉಪರಾಜ್ಯವಾಗಿದ್ದ ಉಕ್ರೇನ್‌ನಲ್ಲಿ ನಡೆದ ಕಮ್ಯುನಿಸ್ಟ್ ವಿರೋಧಿ ದಂಗೆಗೂ ಈ ಸಂಸ್ಥೆ ಹಣಕಾಸು ನೆರವು ನೀಡಿತ್ತು.