ಮ್ಯಾಡ್ರಿಡ್: ಕೊವಿಡ್-19 ನಿಂದಾಗಿ ಸ್ಪೇನ್ನಲ್ಲಿ 24 ಗಂಟೆಗಳಲ್ಲಿ 462 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ಒಂದೇ ದಿನದಲ್ಲಿ ಶೇ.27 ರಷ್ಟು ಸಾವಿನ ಪ್ರಮಾಣ ಹೆಚ್ಚಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 33,089ಕ್ಕೆ ಏರಿಕೆಯಾಗಿದೆ.
ಚೀನಾ ಹಾಗೂ ಇಟಲಿ ಬಳಿಕ ಕೊರೊನಾ ಪೀಡಿತ ರಾಷ್ಟ್ರಗಳ ಸಾಲಲ್ಲಿ ಸ್ಪೇನ್ ಇದೆ.