ETV Bharat / international

ಟ್ವಿಟರ್​ನಲ್ಲಿ ಪತ್ತೆಯಾಯಿತು ಹೊಸ ಪರಾವಲಂಬಿ ಶೀಲಿಂಧ್ರ..! - ಹೊಸ ಪರಾವಲಂಬಿ ಶೀಲಿಂಧ್ರ

ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹೊಸ ಜಾತಿಯ ಪರಾವಲಂಬಿ ಶಿಲೀಂಧ್ರವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಟ್ವಿಟರ್
ಟ್ವಿಟರ್
author img

By

Published : May 16, 2020, 11:34 PM IST

ಲಂಡನ್: ಜನರು ತಮ್ಮ ಮನರಂಜನೆಗಾಗಿ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಇದೇ ಸಾಮಾಜಿಕ ಜಾಲತಾಣದಿಂದ ವಿಜ್ಞಾನಿಗಳು ಹೊಸದೊದು ಫಂಗಸ್​( Fungus) ಕಂಡುಹಿಡಿದಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹೊಸ ಜಾತಿಯ ಪರಾವಲಂಬಿ ಶಿಲೀಂಧ್ರ ಪತ್ತೆಯಾಗಿದೆ.

ಅಧ್ಯಯನದ ಪ್ರಕಾರ, ಸಂಶೋಧಕರು ಸೈಟ್ ಮೂಲಕ ಸ್ಕ್ರೋಲ್ ಮಾಡುವಾಗ ಮಿಲಿಪೆಡ್‌ನ ಚಿತ್ರವನ್ನು ಗುರುತಿಸಿದರು ಮತ್ತು ಪ್ರಾಣಿಯ ತಲೆಯ ಬಳಿ ಕೆಲವು ಸಣ್ಣ ಚುಕ್ಕೆಗಳನ್ನು ಗಮನಿಸಿದರು. ಇದು ಅಮೆರಿಕನ್ ಮಿಲಿಪೆಡ್‌ಗಳಲ್ಲಿ ಹಿಂದೆಂದೂ ನೋಡಿರದ ಚುಕ್ಕೆಗಳಾಗದ್ದವು.

ಹೊಸದಾಗಿ ಪತ್ತೆಯಾದ ಪರಾವಲಂಬಿ ಶಿಲೀಂಧ್ರಕ್ಕೆ ಈಗ ಟ್ರೊಗ್ಲೋಮೈಸಸ್ ಟ್ವಿಟ್ಟರ್ (Troglomyces twitteri) ಎಂದು ಲ್ಯಾಟಿನ್​ ಭಾಷೆಯಲ್ಲಿ ಹೆಸರು ನೀಡಲಾಗಿದೆ.

ಮಿಲಿಪೆಡ್​ನ ಮೇಲ್ಮೈಯಲ್ಲಿ ಶಿಲೀಂಧ್ರಗಳಂತಹ ಆಕಾರವನ್ನು ನಾನು ಕಂಡೆ. ಅಲ್ಲಿಯವರೆಗೆ, ಈ ಶಿಲೀಂಧ್ರಗಳು ಅಮೆರಿಕನ್ ಮಿಲಿಪೆಡ್​ಗಳಲ್ಲಿ ಕಂಡುಬಂದಿಲ್ಲ. ಆದ್ದರಿಂದ, ನಾನು ನನ್ನ ಸಹೋದ್ಯೋಗಿಯ ಬಳಿಗೆ ಹೋಗಿ ಅವರಿಗೆ ಚಿತ್ರವನ್ನು ತೋರಿಸಿದೆ. ಆ ಸಮಯದಲ್ಲಿ ನಾವು ಮ್ಯೂಸಿಯಂನ ಸಂಗ್ರಹಾಲಯಕ್ಕೆ ತೆರಳಿದೆವು. ಸಲ್ಲಿ ಸಂಶೋಧನೆ ನಡೆಸಿದೆವು ಎಂದು ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ಅಧ್ಯಯನ ಅನಾ ಸೋಫಿಯಾ ರೆಬೋಲೆರಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವುದು ಹೇಗೆ ಸಂಪೂರ್ಣವಾಗಿ ಅನಿರೀಕ್ಷಿತ ಫಲಿತಾಂಶಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಸಂಶೋಧಕರು ಗಮನಸೆಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.