ETV Bharat / international

ಹಿನ್ನಡೆಯ ನಂತರ ಈಗ ಸನೋಫಿ - ಜಿಎಸ್ಕೆ ವೈರಸ್ ಲಸಿಕೆಯಲ್ಲಿ ಯಶಸ್ಸು

ಕೊರೊನಾ ಲಸಿಕೆ ಸನೋಫಿ - ಜಿಎಸ್ಕೆ ಯಶಸ್ಸನ್ನು ಕಂಡಿದೆ. ರೋಗದಿಂದ ಚೇತರಿಸಿಕೊಂಡ ಜನರಲ್ಲಿ ಕಂಡು ಬರುವ ರೋಗಗಳಿಗೆ ಅನುಗುಣವಾಗಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಇದು ನಿರ್ಮಾಣ ಮಾಡಲಿದೆ.

author img

By

Published : May 17, 2021, 10:21 PM IST

sanofi-gsk-reports-success-in-virus-vaccine-after-setback

ಪ್ಯಾರಿಸ್ : ಸನೋಫಿ ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನ ಸಂಭಾವ್ಯ ಕೊರೊನಾ ಲಸಿಕೆ ಈಗ ಯಶಸ್ವಿಯಾಗಿ ಹೊರಹೊಮ್ಮಿದೆ.

ಪ್ರಾಥಮಿಕ ಪ್ರಯೋಗಗಳಲ್ಲಿ ಎಲ್ಲ ವಯಸ್ಕ ವಯೋಮಾನದವರಲ್ಲಿ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ, ಈ ವರ್ಷದ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇದೂ ಪ್ರಮುಖ ಲಸಿಕೆಯಾಗಲಿದೆ ಎಂಬ ಆಶಾವಾದವನ್ನು ಹೆಚ್ಚಿಸಿದೆ.

ಲಸಿಕೆಯನ್ನು ವ್ಯಕ್ತಿಯು ಎರಡು ಡೋಸ್​ ಪಡೆದ ನಂತರ ಇದರ ಪರಿಣಾಮ ಏನು ಎಂದು ತಿಳಿದಿದ್ದು, ರೋಗದಿಂದ ಚೇತರಿಸಿಕೊಂಡ ಜನರಲ್ಲಿ ಕಂಡು ಬರುವ ರೋಗಗಳಿಗೆ ಅನುಗುಣವಾಗಿ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ತೋರಿಸಿದೆ. ಮುಂದಿನ ವಾರಗಳಲ್ಲಿ ಕೊನೆಯ ಹಂತದ ಪ್ರಯೋಗಗಳು ಮತ್ತು ಉತ್ಪಾದನೆ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಮತ್ತು 2021 ರ ಅಂತ್ಯದ ಮೊದಲು ಲಸಿಕೆಗಾಗಿ ನಿಯಂತ್ರಕ ಅನುಮೋದನೆಯನ್ನು ಪಡೆಯುವ ಭರವಸೆ ಇದೆ ಎಂದು ಔಷಧ ತಯಾರಕರು ಹೇಳಿದ್ದಾರೆ.

ನಿಯಂತ್ರಕರು ಈಗಾಗಲೇ ಹಲವಾರು ಕೋವಿಡ್​ ಲಸಿಕೆಗಳನ್ನು ಅಧಿಕೃತಗೊಳಿಸಿದ್ದರಾದರೂ ತಜ್ಞರು ಹೇಳುವಂತೆ ವಿಶ್ವದಾದ್ಯಂತ ಈಗಾಗಲೇ 3.3 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ ಹಾಗೆ ಆರ್ಥಿಕ ಹಾನಿಯನ್ನುಂಟುಮಾಡಿದೆ ಎಂದಿದ್ದಾರೆ.

ಸನೋಫಿ - ಜಿಎಸ್​ಕೆ ಲಸಿಕೆ ಯುರೋಪಿಯನ್ ಒಕ್ಕೂಟದ ವ್ಯಾಕ್ಸಿನೇಷನ್ ತಂತ್ರದ ಒಂದು ಪ್ರಮುಖ ಭಾಗವಾಗಿದೆ. ಇದನ್ನು ಮುಖ್ಯವಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸರ್ಕಾರವು ಅನಾವರಣಗೊಳಿಸಿದೆ.

ಆದರೆ, ಆರಂಭಿಕ ಪರೀಕ್ಷೆಯು ವಯಸ್ಸಾದವರಲ್ಲಿ ಅಸಮರ್ಪಕ ರೋಗ ನಿರೋಧಕ ಪ್ರತಿಕ್ರಿಯೆ ಉಂಟುಮಾಡಿದ ನಂತರ ಸಂಶೋಧಕರು ಅದನ್ನು ಮರು ರೂಪಿಸಬೇಕಾದ ಅನಿವಾರ್ಯತೆ ನಿರ್ಮಾಣ ಆಯಿತು.

ಕಂಪನಿಗಳು ವಾರ್ಷಿಕವಾಗಿ 1 ಬಿಲಿಯನ್ ಡೋಸ್‌ಗಳನ್ನು ಉತ್ಪಾದಿಸಲು ಯೋಜಿಸುತ್ತಿವೆ ಮತ್ತು ಯುಎಸ್, ಕೆನಡಾ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೂ ಸರಬರಾಜು ಮಾಡಲು ಅವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಹಲವಾರು ಲಸಿಕೆಗಳು ಬೇಕಾಗುತ್ತವೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಶತಕೋಟಿ ಜನರಿಗೆ ಲಸಿಕೆ ನೀಡಲು ಸಾಕಷ್ಟು ಪ್ರಮಾಣದಲ್ಲಿ ವೇಗವಾಗಿ ಉತ್ಪಾದಿಸುವ ಮತ್ತು ವಿತರಿಸುವ ಸವಾಲುಗಳು ನಿರ್ಮಾಣ ಆಗಿವೆ.

ಅನೇಕ ಲಸಿಕೆಗಳು ಬೇಕಾಗುತ್ತವೆ ಎಂದು ನಮಗೆ ತಿಳಿದಿದೆ. ಅದರಲ್ಲೂ ವಿಶೇಷವಾಗಿ ರೂಪಾಂತರ ಕೊರೊನಾ ಅಲೆ ಹೊರಹೊಮ್ಮುತ್ತಲೇ ಇರುತ್ತವೆ ಇದರ ಜೊತೆಗೆ ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಪರಿಣಾಮಕಾರಿ ಮತ್ತು ಬೂಸ್ಟರ್ ಲಸಿಕೆಗಳ ಅಗತ್ಯವು ಹೆಚ್ಚಾಗುತ್ತದೆ ಎಂದು ಸನೋಫಿಯ ಲಸಿಕೆಗಳ ಘಟಕದ ಮುಖ್ಯಸ್ಥ ಥಾಮಸ್ ಟ್ರಯೋಂಫ್ ಹೇಳಿದರು.

ಯುಎಸ್ ಮತ್ತು ಹೊಂಡುರಾಸ್​ನಲ್ಲಿ ಆಯ್ಕೆಯಾದ 18 ರಿಂದ 95 ವರ್ಷ ವಯಸ್ಸಿನ 722 ಜನರನ್ನು ಒಳಗೊಂಡ 2 ನೇ ಹಂತದ ಪ್ರಯೋಗದಿಂದ ಈ ವರದಿ ಬಂದಿದೆ. ಈ ಲಸಿಕೆಯು ಈಗಾಗಲೇ ವೈರಸ್​ನಿಂದ ಚೇತರಿಸಿಕೊಂಡ ಜನರಲ್ಲಿ ಇನ್ನಷ್ಟು ಬಲವಾದ ಪ್ರತಿಕಾಯ ಫಲಿತಾಂಶಗಳನ್ನು ತೋರಿಸಲಿದೆ. ಈಗಾಗಲೇ ಪ್ರತಿಸ್ಪರ್ಧಿ ಉತ್ಪನ್ನಗಳೊಂದಿಗೆ ಲಸಿಕೆ ಪಡೆದವರಿಗೆ ಭವಿಷ್ಯದಲ್ಲಿ ಬೂಸ್ಟರ್ ಶಾಟ್‌ನಂತೆ ಇದು ಪ್ರಬಲ ಅಭ್ಯರ್ಥಿಯಾಗಿ ಪರಿಣಮಿಸುತ್ತದಂತೆ.

ಕೊನೆಯ ಹಂತದ ಪ್ರಯೋಗದಲ್ಲಿ ವಿಶ್ವದ ಎಲ್ಲಾ ದೇಶದ ಸುಮಾರು 37,000 ಭಾಗವಹಿಸಲಿದ್ದಾರೆ ಎಂದು ಕಂಪನಿಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.