ಕೀವ್(ಉಕ್ರೇನ್): ಉಕ್ರೇನ್‌ನಲ್ಲಿ ಕಳೆದ ವಾರ ಜಪೋರಿಜ್ಜ್ಯಾ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡ ನಂತರ ರಷ್ಯಾದ ಪಡೆಗಳು ಮತ್ತೊಂದು ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳುವ ಪ್ಲಾನ್ ಹೊಂದಿವೆ ಎಂದು ಕೀವ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥರ ಸಲಹೆಗಾರ ಅಲೆಕ್ಸಿ ಅರೆಸ್ಟೋವಿಚ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಷ್ಯಾದ ಪಡೆಗಳು ನಿಕೋಲೇವ್‌ನ ಉತ್ತರಕ್ಕೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಹಾಗೆ ಇದರ ಭಾಗವಾಗಿ ದಕ್ಷಿಣ ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ ಮೃಗಾಲಯದಲ್ಲಿ 7 ಮೃಗಗಳ ಸಾವು: ಕಾರಣ?
ನಿಕೋಲೇವ್‌ನ ಉತ್ತರಕ್ಕೆ ಶತ್ರುಗಳು ಹಾದುಹೋಗುವುದು ಸುಲಭವಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 24 ರಂದು ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ, ರಷ್ಯಾ 11,000 ಕ್ಕೂ ಹೆಚ್ಚು ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಈ ಸಿಬ್ಬಂದಿ ಜೊತೆಗೆ, ರಷ್ಯಾದ 285 ಟ್ಯಾಂಕ್‌ಗಳು, 985 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 109 ಫಿರಂಗಿ ವ್ಯವಸ್ಥೆಗಳು, 50 MLRS, 21 ವಾಯು ರಕ್ಷಣಾ ವ್ಯವಸ್ಥೆಗಳು, 44 ವಿಮಾನಗಳು, 48 ಹೆಲಿಕಾಪ್ಟರ್‌ಗಳು, 447 ವಾಹನಗಳು, ಎರಡು ಲಘು ವೇಗದ ದೋಣಿಗಳು, ಇಂಧನ ಮತ್ತು ಲೂಬ್ರಿಕಂಟ್‌ಗಳೊಂದಿಗೆ 60 ಟ್ಯಾಂಕ್‌ಗಳನ್ನು ಉಕ್ರೇನ್ ಧ್ವಂಸ ಮಾಡಿದೆ ಎಂದು ಹೇಳಲಾಗ್ತಿದೆ.