ETV Bharat / international

ಪುಟಿನ್‌ ಬಂಧಿಸುವ ರಷ್ಯಾ ಅಧಿಕಾರಿಗಳಿಗೆ ₹7.5 ಕೋಟಿ ಬಹುಮಾನ ಘೋಷಿಸಿದ ಉದ್ಯಮಿ

'ಯುದ್ಧಾಪರಾಧಿ' ವಾಡ್ಲಿಮಿರ್​ ಪುಟಿನ್​ ಬಂಧನ ಮಾಡುವವರಿಗೆ 7.5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ರಷ್ಯಾದಿಂದ ವರ್ಷದ ಹಿಂದೆ ಪಲಾಯನಗೈದ ಉದ್ಯಮಿಯೊಬ್ಬರು ಘೋಷಿಸಿದ್ದಾರೆ.

Russia president
Russia president
author img

By

Published : Mar 3, 2022, 5:19 PM IST

ಮಾಸ್ಕೋ(ರಷ್ಯಾ): ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್​ ವಿರುದ್ಧ ಬಹುತೇಕ ದೇಶಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಮಧ್ಯೆ ರಷ್ಯಾದ ಉದ್ಯಮಿಯೋರ್ವರು ಪುಟಿನ್ ಅವರನ್ನು ಹತ್ಯೆಗೈದು ಇಲ್ಲವೇ ಜೀವಂತ ಹಿಡಿದು ತರುವವರಿಗೆ 7.5 ಕೋಟಿ ರೂ(1 ಮಿಲಿಯನ್‌ ಡಾಲರ್) ಬಹುಮಾನ ನೀಡುವುದಾಗಿ ಫೇಸ್‌ಬುಕ್ ಮೂಲಕ ಘೋಷಣೆ ಮಾಡಿದ್ದಾರೆ.

  • Konanykhin posted the announcement on his Facebook page but Facebook removed the post because he included a "wanted dead or alive" image of Putin. Here's his followup post: https://t.co/BKRhcl1KvG

    — Kim Zetter (@KimZetter) March 2, 2022 " class="align-text-top noRightClick twitterSection" data=" ">

ರಷ್ಯಾದ ಮಾಸ್ಕೋದಲ್ಲಿರುವ ಉದ್ಯಮಿ ಅಲೆಕ್ಸ್​ ಕೊನನಿಖಲ್​ ಈ ಬಗ್ಗೆ ಟ್ವೀಟ್​ ಮಾಡಿದ್ದು, ವ್ಲಾಡಿಮಿರ್ ಪುಟಿನ್​​ ಅವರನ್ನು ಯುದ್ಧ ಅಪರಾಧಿ ಎಂದು ಘೋಷಿಸಿ ಹತ್ಯೆ ಅಥವಾ ಜೀವಂತ ಹಿಡಿದು ತರುವವರಿಗೆ 1 ಮಿಲಿಯನ್​ ಡಾಲರ್ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ರಷ್ಯಾ ಮಿಲಿಟರಿ ಪಡೆಯೇ ಈ ಕಾರ್ಯ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ರೀತಿಯ ಘೋಷಣೆ ಬರೆದುಕೊಳ್ಳುತ್ತಿದ್ದಂತೆ ಅವರ ಖಾತೆಯ ಮೇಲೆ ಫೇಸ್‌ಬುಕ್‌ ನಿರ್ಬಂಧ ಹೇರಿದೆ.

ಇದನ್ನೂ ಓದಿ: ರಷ್ಯಾ ಸೈನಿಕರ ತಾಯಂದಿರೇ ಕೀವ್‌ಗೆ ಬಂದು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ: ಉಕ್ರೇನ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.