ವಾಷಿಂಗ್ಟನ್ :ಅಮೆರಿಕ ಅಧಿಕಾರಿಗಳು ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಲು, ಮತ್ತು ರಷ್ಯಾದೊಂದಿಗಿನ ಸಾಮಾನ್ಯ ವ್ಯಾಪಾರ ಸಂಬಂಧಗಳನ್ನು ನಿಲ್ಲಿಸುವ ಬಗ್ಗೆ ಸಂಸತ್ತಿನಲ್ಲಿ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಡುಬಂದಿದೆ. ಈ ಬಗ್ಗೆ ಮಹತ್ವದ ಸಭೆ ಕರೆದಿದ್ದು, ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮತ್ತೊಂದು ಕಡೆ, ವಿಶ್ವ ಸಂಸ್ಥೆಯು ಉಕ್ರೇನಿನಲ್ಲಿ ನಡೆಯುತ್ತಿರುವ ಮಕ್ಕಳ ಮತ್ತು ಯುವಜನರ ಮೇಲಿನ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದೆ. ಇವರ ರಕ್ಷಣೆಗಾಗಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಅಲ್ಲದೇ ವಿಶ್ವಸಂಸ್ಥೆಗೆ ಉಕ್ರೇನಿನಲ್ಲಿ ದಾಳಿಗೆ ಸಿಲುಕಿದ ಜನರಿಗೆ ಸಹಾಯ ಮಾಡುವಲ್ಲಿ ವಿಫಲವಾಗಿದೆ. ಆದರೆ ಜನರಿಗೆ ಸುರಕ್ಷತೆಯನ್ನು ಒದಗಿಸಲು ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಅಗತ್ಯ ಮಾನವೀಯ ನೆರವುಗಳನ್ನು ನೀಡುವಲ್ಲಿ ,ಜೊತೆಗೆ ರಷ್ಯಾದೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಿದೆ.
ಐಸೋಟೋಪ್‌ಗಳ ಉತ್ಪಾದನಾ ಕೇಂದ್ರಕ್ಕೆ ಬೆಂಕಿ: ಅಲ್ಲದೇ ಉಕ್ರೇನಿನಲ್ಲಿರುವ ವೈದ್ಯಕೀಯ ಮತ್ತು ಕೈಗಾರಿಕಾ ಬಳಕೆಗಳಿಗಾಗಿ ರೇಡಿಯೊ ಐಸೋಟೋಪ್‌ಗಳನ್ನು ಉತ್ಪಾದಿಸುವ ಹೊಸ ಸಂಶೋಧನಾ ಕೇಂದ್ರವು ಖಾರ್ಕಿವ್‌ನಲ್ಲಿ ಶೆಲ್ ದಾಳಿಯಿಂದ ಹಾನಿಗೊಳಗಾಗಿದೆ ಎಂದು ತಿಳಿಸಿದೆ . ಯಾವುದೇ ವಿಕಿರಣ ಹಾನಿಗಳು ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ನ್ಯೂಯಾರ್ಕ್ನ ಸ್ಟೋಲಿ ಸಂಸ್ಥೆ ತನ್ನ ಸ್ಟೋಲಿಚ್ನಾಯಾ ವೋಡ್ಕಾ ಬ್ರ್ಯಾಂಡ್ ಅನ್ನು ಮರುನಾಮಕರಣ ಮಾಡುತ್ತಿದೆ. ಲಕ್ಸೆಂಬರ್ಗ್ ಮೂಲದ ಸ್ಟೋಲಿ ಗ್ರೂಪ್ ಈಗ ವೋಡ್ಕಾವನ್ನು ಎಂದು ಸ್ಟೋಲಿ ಎಂದು ಮಾರಾಟ ಮಾಡಲಾಗುವುದು ಎಂದು ಹೇಳಿದೆ. ಸ್ಟೋಲಿ ಸಂಸ್ಥೆಯು ಯುರೋಪಿನಲ್ಲಿ ಶಾಂತಿ ನೆಲೆಸಲು ಸಹಕರಿಸುತ್ತದೆ ಎಂದು ಹೇಳಿದೆ.
ಯುದ್ಧ ನಿಲ್ಲಿಸಿ ಎಂದ ಮ್ಯಾಕ್ರೋನ್.. ಬಿಲ್ಕುಲ್ ಇಲ್ಲ ಎಂದ ಪುಟಿನ್: ಫ್ರೆಂಚ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರೋನ್ ರಷ್ಯಾದ ಜೊತೆಗೆ ಯುದ್ಧ ನಿಲ್ಲಿಸುವಂತೆ ಕೇಳಿದ್ದು , ಇದಕ್ಕೆ ಪುಟಿನ್ ನಿರಾಕರಿಸದ್ದಾಗಿ ಹೇಳಿದ್ದಾರೆ. ಯುಧ್ದದ ಮೂಲಕ ಐತಿಹಾಸಿಕ ಪ್ರಮಾದವನ್ನು ಮಾಡುತ್ತಿರುವುದಾಗಿ ಮ್ಯಾಕ್ರೋನ್ ಅಭಿಪ್ರಾಯಪಟ್ಟಿದ್ದಾರೆ.
ಅಲಬೇನಿಯಾವು ರಷ್ಯಾದ ನಡೆಯನ್ನು ಖಂಡಿಸಿದ್ದು, ತನ್ನ ಆಕ್ರಮಣಕಾರಿತನವನ್ನು ನಿಲ್ಲಿಸುವಂತೆ ಒತ್ತಾಯಿಸಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಮೂರನೇ ಸುತ್ತಿನ ಮಾತುಕತೆ ನಡೆದಿದ್ದು, ಉಕ್ರೇನ್ ನಾಗರೀಕರಿಗೆ ನಗರಗಳಿಂದ ಪಲಾಯನ ಮಾಡಲು ಕಾರಿಡಾರ್ಗಳನ್ನು ತೆರೆಯುವುದಾಗಿ ತಿಳಿದುಬಂದಿದೆ.
ಓದಿ : ಉಕ್ರೇನ್ ಯುದ್ಧ: ರೊಮೇನಿಯಾದಿಂದ ನವದೆಹಲಿಗೆ ಬಂದ 200 ಭಾರತೀಯ ನಾಗರಿಕರು