ಕೀವ್(ಉಕ್ರೇನ್): ರಷ್ಯಾ ಮಿಲಿಟರಿ ಪಡೆಗಳು ದಾಳಿ ನಡೆಸಿರುವ ಪರಿಣಾಮವಾಗಿ ಇಲ್ಲಿಯವರೆಗೆ ಉಕ್ರೇನ್ನಲ್ಲಿ ಮೂವರು ಮಕ್ಕಳು ಸೇರಿದಂತೆ 198 ನಾಗರಿಕರು ಸಾವನ್ನಪ್ಪಿದ್ದು, ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೋ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ರಷ್ಯಾ ಮಿಲಿಟರಿ ಪಡೆಗಳು ಉಕ್ರೇನ್ನ ವಿವಿಧ ನಗರಗಳ ಮೇಲೆ ನಿರಂತರವಾಗಿ ದಾಳಿ ನಡೆಸಿದ್ದು, ಪರಿಣಾಮ ನೂರಾರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಮಕ್ಕಳು ಸೇರಿದಂತೆ ಇಷ್ಟೊಂದು ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂದು ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
-
1,00,000 Ukrainians have crossed the border into Poland, says officials, reports AFP
— ANI (@ANI) February 26, 2022 " class="align-text-top noRightClick twitterSection" data="
">1,00,000 Ukrainians have crossed the border into Poland, says officials, reports AFP
— ANI (@ANI) February 26, 20221,00,000 Ukrainians have crossed the border into Poland, says officials, reports AFP
— ANI (@ANI) February 26, 2022
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಯವರೆಗೆ ಲಕ್ಷಕ್ಕೂ ಅಧಿಕ ನಾಗರಿಕರು ಪೋಲೆಂಡ್ ಗಡಿಗೆ ಬಂದಿದ್ದಾಗಿ ವರದಿಯಾಗಿದೆ. ರಷ್ಯಾ ವಿರುದ್ಧ ತೊಡೆತಟ್ಟಿರುವ ಉಕ್ರೇನ್ ನಾಗರಿಕರು ಸಹ ಸ್ವಯಂಸೇವಕರಾಗಿ ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದು, ರಷ್ಯಾ ದಾಳಿ ಎದುರಿಸಲು ಸಜ್ಜಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಸಾವು-ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿರಿ: 10ನೇ ಕ್ಲಾಸ್ ಅರ್ಧಕ್ಕೆ ಬಿಟ್ಟು ಕೂಲಿ ಕೆಲಸ ; ಆದ್ರೂ ವಿಮಾನ ತಯಾರಿಕೆಯಲ್ಲಿ ಪ್ರವೀಣ ಈ ಜುನೈದ್!
ಮತ್ತೊಂದೆಡೆ ಸುಮಾರು 2,800 ಸೈನಿಕರ ಜೊತೆ 80 ಯುದ್ಧ ಟ್ಯಾಂಕರ್ಗಳು, 516 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 10 ವಿಮಾನ ಮತ್ತು ಏಳು ಹೆಲಿಕಾಪ್ಟರ್‌ಗಳನ್ನು ರಷ್ಯಾ ಕಳೆದುಕೊಂಡಿದೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ಮಾಹಿತಿ ನೀಡಿದ್ದಾರೆ.