ETV Bharat / international

ಭಾರತಕ್ಕೆ 22 ಟನ್ ವೈದ್ಯಕೀಯ ಸಾಮಗ್ರಿ ಕಳುಹಿಸಿದ ಆಪತ್ಪಾಂಧವ ರಷ್ಯಾ

author img

By

Published : Apr 29, 2021, 7:19 AM IST

ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಹಲವು ದೇಶಗಳು ಸಹಾಯಹಸ್ತ ಚಾಚಿವೆ. ಇದೀಗ ರಷ್ಯಾ ಕೂಡ ವೈದ್ಯಕೀಯ ನೆರವು ನೀಡಿದೆ.

Russia Sends Emergency Aid To India
ಭಾರತಕ್ಕೆ 22 ಟನ್ ವೈದ್ಯಕೀಯ ಸಾಮಗ್ರಿ ಕಳಿಸಿದ ರಷ್ಯಾ

ಮಾಸ್ಕೋ (ರಷ್ಯಾ): ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ 20 ಆಕ್ಸಿಜನ್ ಉತ್ಪಾದಕಗಳು, 75 ವೆಂಟಿಲೇಟರ್​​ಗಳು ಮತ್ತು 2 ಲಕ್ಷ ಪ್ಯಾಕೆಟ್ ಔಷಧಿಗಳು ಸೇರಿದಂತೆ 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳಿಸಿರುವುದಾಗಿ ರಷ್ಯಾ ತಿಳಿಸಿದೆ.

ರಷ್ಯಾದಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ವಿಮಾನಕ್ಕೆ ಲೋಡ್​ ಮಾಡುತ್ತಿರುವ ದೃಶ್ಯ

ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಎರಡು ವಿಮಾನಗಳು ಈಗಾಗಲೇ ಭಾರತದ ಕಡೆ ಹೊರಟಿವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.

'ಕೋವಿಡ್ ವಿರುದ್ಧ ಹೋರಾಡಲು ಮತ್ತು ಜೀವಗಳನ್ನು ಉಳಿಸಲು ರಷ್ಯಾ ಭಾರತಕ್ಕೆ ಆಮ್ಲಜನಕ ಉತ್ಪಾದಕಗಳು, ವೆಂಟಿಲೇಟರ್‌ಗಳು ಮತ್ತು 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ. ಎರಡು ವಿಮಾನಗಳು ಈಗಾಗಲೇ ಭಾರತದತ್ತ ತೆರಳಿದೆ' ಎಂದು ಸಚಿವಾಲಯ ಟ್ವೀಟ್ ಮಾಡಿದೆ.

#RussiaHelps 🇷🇺🤝🇮🇳 #RussiaIndia#Russia sends oxygen concentrators, ventilators and 22 tonnes of medical supplies to #India to help fight #COVID19 and save lives.

✈️ 2 transport planes are already en route @MEAIndia @IndianDiplomacy

Video by @MchsRussia / @minpromtorg_rus pic.twitter.com/nmjGwVfmTU

— MFA Russia 🇷🇺 (@mfa_russia) April 28, 2021 ">

ಇದನ್ನೂ ಓದಿ: ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ನ್ಯೂಜಿಲ್ಯಾಂಡ್​

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಮಾತನಾಡಿದ ನಂತರ ರಷ್ಯಾದ ವಿದೇಶಾಂಗ ಸಚಿವಾಲಯ ಈ ಘೋಷಣೆ ಮಾಡಿದೆ. ದೂರವಾಣಿ ಮಾತುಕತೆಯ ಸಮಯದಲ್ಲಿ, ಪುಟಿನ್ ಭಾರತಕ್ಕೆ ತುರ್ತು ಮಾನವೀಯ ನೆರವು ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು.

ಕೋವಿಡ್ -19 ವಿರುದ್ಧ ಭಾರತದ ಹೋರಾಟಕ್ಕೆ ರಷ್ಯಾ ನೀಡಿದ ಸಹಾಯ ಮತ್ತು ಬೆಂಬಲಕ್ಕಾಗಿ ಪ್ರಧಾನಿ ಮೋದಿ ಪುಟಿನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮಾಸ್ಕೋ (ರಷ್ಯಾ): ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ 20 ಆಕ್ಸಿಜನ್ ಉತ್ಪಾದಕಗಳು, 75 ವೆಂಟಿಲೇಟರ್​​ಗಳು ಮತ್ತು 2 ಲಕ್ಷ ಪ್ಯಾಕೆಟ್ ಔಷಧಿಗಳು ಸೇರಿದಂತೆ 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳಿಸಿರುವುದಾಗಿ ರಷ್ಯಾ ತಿಳಿಸಿದೆ.

ರಷ್ಯಾದಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ವಿಮಾನಕ್ಕೆ ಲೋಡ್​ ಮಾಡುತ್ತಿರುವ ದೃಶ್ಯ

ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ಎರಡು ವಿಮಾನಗಳು ಈಗಾಗಲೇ ಭಾರತದ ಕಡೆ ಹೊರಟಿವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.

'ಕೋವಿಡ್ ವಿರುದ್ಧ ಹೋರಾಡಲು ಮತ್ತು ಜೀವಗಳನ್ನು ಉಳಿಸಲು ರಷ್ಯಾ ಭಾರತಕ್ಕೆ ಆಮ್ಲಜನಕ ಉತ್ಪಾದಕಗಳು, ವೆಂಟಿಲೇಟರ್‌ಗಳು ಮತ್ತು 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ. ಎರಡು ವಿಮಾನಗಳು ಈಗಾಗಲೇ ಭಾರತದತ್ತ ತೆರಳಿದೆ' ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತ ನ್ಯೂಜಿಲ್ಯಾಂಡ್​

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಮಾತನಾಡಿದ ನಂತರ ರಷ್ಯಾದ ವಿದೇಶಾಂಗ ಸಚಿವಾಲಯ ಈ ಘೋಷಣೆ ಮಾಡಿದೆ. ದೂರವಾಣಿ ಮಾತುಕತೆಯ ಸಮಯದಲ್ಲಿ, ಪುಟಿನ್ ಭಾರತಕ್ಕೆ ತುರ್ತು ಮಾನವೀಯ ನೆರವು ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು.

ಕೋವಿಡ್ -19 ವಿರುದ್ಧ ಭಾರತದ ಹೋರಾಟಕ್ಕೆ ರಷ್ಯಾ ನೀಡಿದ ಸಹಾಯ ಮತ್ತು ಬೆಂಬಲಕ್ಕಾಗಿ ಪ್ರಧಾನಿ ಮೋದಿ ಪುಟಿನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.