ಮಾಸ್ಕೋ (ರಷ್ಯಾ): ಅಫ್ಘಾನಿಸ್ತಾನದಿಂದ ರಷ್ಯಾ ಗುರುವಾರದವರೆಗೆ 500 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೂಚನೆಯ ಮೇರೆಗೆ ಕಾಬೂಲ್‌ನಿಂದ ರಷ್ಯಾದ ರಕ್ಷಣಾ ಸಚಿವಾಲಯವು 500 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.
ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (CSTO) ಸದಸ್ಯ ರಾಷ್ಟ್ರಗಳ ಜನರನ್ನೂ ರಷ್ಯಾ ವರ್ಗಾಯಿಸಿದೆ. ಬುಧವಾರ ಕಾಬೂಲ್‌ನಿಂದ ರಷ್ಯಾದ 4 ವಿಮಾನಗಳು ಹೊರಟಿದ್ದು, ಇದರಲ್ಲಿ ಕಿರ್ಗಿಸ್ತಾನ್ ಮತ್ತು ತಜಕಿಸ್ತಾನ ನಾಗರಿಕರು ಇದ್ದರು. ಮೊದಲು ಆಯಾಯ ದೇಶಗಳ ಪ್ರಜೆಗಳನ್ನು ಅವರವರ ದೇಶಕ್ಕೆ ಬಿಟ್ಟು, ಬಳಿಕ ಐಎಲ್ -76 ವಿಮಾನ ರಷ್ಯಾದ ಚಕಾಲೋವ್ಸ್ಕಿ ಏರ್ಪೋರ್ಟ್ನಲ್ಲಿ ಬಂದಿಳಿಯಿತು.
ಇದಕ್ಕೂ ಮುನ್ನ ಇನ್ನೆರಡು ವಿಮಾನಗಳು ಬಂದಿಳಿದಿದ್ದು, ಐಎಲ್-76 ವಿಮಾನದಲ್ಲಿ ಆಫ್ಘನ್ ಮೂಲದ 100 ರಷ್ಯಾ ಪ್ರಜೆಗಳಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ಗಾಯದ ಮೇಲೆ ಬರೆ: ಕಾಬೂಲ್ ಏರ್ಪೋರ್ಟ್ನಲ್ಲಿ 1 ಬಾಟಲ್ ನೀರಿಗೆ 3,000, 1 ಪ್ಲೇಟ್ ಊಟಕ್ಕೆ 7000 ರೂ.
ಆಗಸ್ಟ್ 15 ರಂದು ತಾಲಿಬಾನ್, ಕಾಬೂಲ್ನನ್ನು ವಶಕ್ಕೆ ಪಡೆದಿದ್ದು, ಅಲ್ಲಿನ ಸರ್ಕಾರ ಪತನಗೊಂಡಿತು. ಇದರ ಪರಿಣಾಮ ಜನರು ಆಫ್ಘನ್ ತೊರೆದು ಇತರೆ ರಾಷ್ಟ್ರಗಳಿಗೆ ಪಲಾಯನ ಮಾಡುತ್ತಿದ್ದಾರೆ.