ಕಾರ್ಕಿವ್ (ಉಕ್ರೇನ್): ರಷ್ಯಾ ಹಾಗೂ ಉಕ್ರೇನ್ ಯುದ್ಧ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಉಕ್ರೇನ್‌ನ ಎರಡನೇ ದೊಡ್ಡ ನಗರವಾದ ಕಾರ್ಕಿವ್ಗೆ ರಷ್ಯಾ ಪಡೆಗಳು ಪ್ರವೇಶಿಸಿದೆ ಎಂದು ಕಾರ್ಕಿವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥರು ತಿಳಿಸಿದ್ದಾರೆ.
ಕಾರ್ಕಿವ್ ನಗರವು ಉಕ್ರೇನ್ ರಾಜಧಾನಿ ಕೀವ್ನಿಂದ ಸುಮಾರು 480 ಕಿ.ಮೀ ದೂರದಲ್ಲಿದೆ. ಕಾರ್ಕಿವ್ನಲ್ಲಿರುವ ಗ್ಯಾಸ್ ಪೈಪ್‌ಲೈನ್ ಅನ್ನು ರಷ್ಯಾ ಸೇನೆ ಸ್ಫೋಟಿಸಿದ ಬಳಿಕ ಇದೀಗ ನಗರಕ್ಕೆ ನುಗ್ಗಿದೆ. "ರಷ್ಯಾದ ಶತ್ರುಗಳ ಲಘು ವಾಹನಗಳು ಕಾರ್ಕಿವ್ ನಗರಕ್ಕೆ ನುಗ್ಗಿವೆ. ಉಕ್ರೇನಿಯನ್ ಸಶಸ್ತ್ರ ಪಡೆಗಳು ಶತ್ರುಗಳನ್ನು ನಿರ್ಮೂಲನೆ ಮಾಡುತ್ತಿವೆ" ಎಂದು ಅವರು ಹೇಳಿದ್ದಾರೆ.
-
WATCH: Intense battle erupts as Russian forces enter Kharkiv pic.twitter.com/vUdWw9jSgy
— BNO News (@BNONews) February 27, 2022 " class="align-text-top noRightClick twitterSection" data="
">WATCH: Intense battle erupts as Russian forces enter Kharkiv pic.twitter.com/vUdWw9jSgy
— BNO News (@BNONews) February 27, 2022WATCH: Intense battle erupts as Russian forces enter Kharkiv pic.twitter.com/vUdWw9jSgy
— BNO News (@BNONews) February 27, 2022
ಕಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲೇ ಭಾರತದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಲ್ಲಿನ ಮೆಟ್ರೋ ನಿಲ್ದಾಣ ಹಾಗೂ ಬಂಕರ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಎರಡು ನಗರಗಳಿಗೆ ಮುತ್ತಿಗೆ: ಇತ್ತ ಉಕ್ರೇನ್‌ನ ದಕ್ಷಿಣ ಮತ್ತು ಆಗ್ನೇಯದಲ್ಲಿರುವ ಖೆರ್ಸನ್ ಮತ್ತು ಬರ್ಡಿಯಾನ್ಸ್ಕ್ ನಗರಗಳನ್ನು ಮುತ್ತಿಗೆ ಹಾಕಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಕೀವ್ನಲ್ಲಿ ಕೂಡ ಇಂದು ಬೆಳಗ್ಗೆ ಬೃಹತ್ ಸ್ಫೋಟಗಳು ಸಂಭವಿಸಿವೆ.
ಇದನ್ನೂ ಓದಿ: ಉಕ್ರೇನ್‌ನ ಗ್ಯಾಸ್ ಪೈಪ್‌ಲೈನ್ ಸ್ಫೋಟಿಸಿದ ರಷ್ಯಾ; ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಜರ್ಮನಿ
ಈಗಾಗಲೇ ಉಕ್ರೇನ್‌ನಲ್ಲಿ 200ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 1,50,000 ಕ್ಕೂ ಹೆಚ್ಚು ಜನರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಭಾರತ ಸೇರಿದಂತೆ ನಾನಾ ರಾಷ್ಟ್ರಗಳು ಅಲ್ಲಿ ಸಿಲುಕಿರುವ ತಮ್ಮ ವಿದ್ಯಾರ್ಥಿಗಳು ಹಾಗೂ ಪ್ರಜೆಗಳನ್ನು ಕರೆತರುತ್ತಿವೆ.