ETV Bharat / international

ಲಾಕ್‌ಡೌನ್ ಸಡಿಲಿಸಿದ್ರೆ ನಿಮ್ಮ ಗುಂಡಿ ನೀವೇ ತೋಡಿಕೊಂಡಂತೆ.. ಡಬ್ಲೂಹೆಚ್ಒ ಎಚ್ಚರಿಕೆ

author img

By

Published : May 12, 2020, 3:07 PM IST

ಕಳೆದ ಕೆಲವು ದಿನಗಳಿಂದ ಜರ್ಮನಿ ಮತ್ತು ವೈರಸ್ ಪತ್ತೆಯಾದ ಚೀನಾದ ವ್ಯೂಹಾನ್‌ ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲಿದೆ. ದಕ್ಷಿಣ ಕೊರಿಯಾದ ಒಂದು ನೈಟ್‌ಕ್ಲಬ್‌ನಲ್ಲಿ ಓರ್ವ ಗ್ರಾಹಕನಿಂದ 85 ಹೊಸ ಪ್ರಕರಣ ಪತ್ತೆಯಾಗಿವೆ.

Risk of transmission will potentially go up: WHO
ಡಬ್ಲೂಎಚ್​ಓ ಎಚ್ಚರಿಕೆ

ಜಿನೀವಾ: ಯಾವುದೇ ದೇಶಗಳು ಲಾಕ್‌ಡೌನ್​ ಸಡಿಲಿಸಲು ಪ್ರಾರಂಭಿಸಿದ್ರೆ ಕೊರೊನಾ ವೈರಸ್ ಮತ್ತಷ್ಟು ಹರಡುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕ್ ರಯಾನ್ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್ ಸಡಿಲಗೊಳಿಸುವ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗುವ ಭೀತಿ ಹೆಚ್ಚಿದೆ. ಕಳೆದ ಕೆಲವು ದಿನಗಳಿಂದ ಜರ್ಮನಿ ಮತ್ತು ವೈರಸ್ ಪತ್ತೆಯಾದ ಚೀನಾದ ವ್ಯೂಹಾನ್‌ ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲಿದೆ. ದಕ್ಷಿಣ ಕೊರಿಯಾದ ಒಂದು ನೈಟ್‌ಕ್ಲಬ್‌ನಲ್ಲಿ ಓರ್ವ ಗ್ರಾಹಕನಿಂದ 85 ಹೊಸ ಪ್ರಕರಣ ಪತ್ತೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕ್ ರಯಾನ್..

ಏನಾದರು ದೇಶಗಳು ಲಾಕ್‌ಡೌನ್ ಸಡಿಲಿಸಿದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಕುರುಡತನ ಪ್ರದರ್ಶಿಸಿದಂತಾಗುತ್ತದೆ ಎಂದು ರಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಂದಿನ ಕೆಲವು ತಿಂಗಳುಗಳಲ್ಲಿ ಕೆಲವು ದೇಶಗಳು ಇಂತಹ ಜಾಣ ಕುರುಡುತನಕ್ಕೆ ಮುಂದಾಗುತ್ತವೆ, ಇವುಗಳ ಬಗ್ಗೆ ನನಗೆ ಕನಿಕರವಿದೆ ಎಂದರು.

ಈ ಜಾಗತಿಕ ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ 2,83,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಆರ್ಥಿಕತೆಯನ್ನು ಕುಂಠಿತಗೊಳಿಸಿದೆ ಎಂದರು.

ಹೆಚ್ಚಿನ ಜನರಲ್ಲಿ ಜ್ವರ, ಕೆಮ್ಮಿನಂತಹ ಮಧ್ಯಮ ರೋಗಲಕ್ಷಣಗಳು ಕಂಡು ಬರುತ್ತದೆ. ಆದರೆ, ಇದು ಎರಡು ಮೂರು ವಾರಗಳಲ್ಲಿ ಗುಣಮುಖವಾಗುತ್ತದೆ. ಆದರೆ, ಇದು ನ್ಯುಮೋನಿಯಾ ಸೇರಿದಂತೆ ಕೆಲವು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು. ಮತ್ತು ಕೆಲವು ಜನರಿಗೆ, ವಿಶೇಷವಾಗಿ ವಯಸ್ಸಾದವರಿಗೆ, ವಯಸ್ಕರಿಗೆ, ಆರೋಗ್ಯ ಸಮಸ್ಯೆಗಳಿರುವವರಿಗೆ ಇದರಿಂದ ಸಾವು ಸಂಭವಿಸುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.