ಲಂಡನ್ (ಯು.ಕೆ): ರಾಣಿ ಎಲಿಜಬೆತ್ II ಮಾರ್ಚ್ 7ರಂದು ಕಾಮನ್ವೆಲ್ತ್ ದಿನಾಚರಣೆಗೂ ಮುನ್ನ ಯುನೈಟೆಡ್ ಕಿಂಗ್‌ಡಂ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕೋವಿಡ್ -19 ಕಾರಣದಿಂದಾಗಿ ರದ್ದುಗೊಂಡಿರುವ ಕಾಮನ್ವೆಲ್ತ್ ದಿನದ ಆಚರಣೆಯ ಬದಲು ಬಿಬಿಸಿ ಒನ್‌ನಲ್ಲಿ ಪ್ರಸಾರವಾಗಲಿರುವ ವಿಶೇಷ ಕಾರ್ಯಕ್ರಮದಲ್ಲಿ ಯುಕೆ ರಾಣಿ ಜನತೆಗೆ ತಮ್ಮ ಸಂದೇಶ ನೀಡಲಿದ್ದಾರೆ.
ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕ್ಲೆ 2020ರ ಜನವರಿಯಲ್ಲಿ ತಮ್ಮ ರಾಯಲ್ ಕರ್ತವ್ಯದಿಂದ ಕೆಳಗಿಳಿದ ನಂತರ ಅವರ ಮೊದಲ ಸಂದರ್ಶನ ಸಿಬಿಎಸ್ನಲ್ಲಿ ಪ್ರಸಾರವಾಗಲಿದ್ದು, ಅದೆ ದಿನವೇ ರಾಣಿ ಎಲಿಜಬೆತ್ II ಮಾತನಾಡಲಿದ್ದಾರೆ.