ಮಾಸ್ಕೋ(ರಷ್ಯಾ): ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ಈಗಾಗಲೇ ಕೆಲವು ನಗರಗಳ ಮೇಲೆ ನಿಯಂತ್ರಣ ಸಾಧಿಸಿದೆ.
ಯುದ್ಧ ಆರಂಭವಾಗಿ ಎಂಟು ದಿನ ಕಳೆಯುತ್ತಾ ಬಂದಿದ್ದು, ಈ ವೇಳೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಉಕ್ರೇನ್ನಲ್ಲಿ ರಷ್ಯಾ ತನ್ನ ಗುರಿ ಸಾಧಿಸಲಿದೆ ಎಂದಿದ್ದಾರೆ. ಫ್ರೆಂಚ್ ನಾಯಕ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಮಾತುಕತೆ ವೇಳೆ ಮಾತನಾಡಿರುವ ಪುಟಿನ್, ಉಕ್ರೇನ್ನಲ್ಲಿ ನಾವು ಅಂದುಕೊಂಡಿರುವುದನ್ನು ಸಾಧಿಸಲಿದ್ದೇವೆ ಎಂದಿದ್ದಾರೆ.
-
Russian President Vladimir Putin on Thursday told his French counterpart Emmanuel Macron that the goals of Russia's operation in Ukraine - its demilitarization and neutral status - will be achieved in any case, the Kremlin said: Reuters #RussianUkrainianCrisis
— ANI (@ANI) March 3, 2022 " class="align-text-top noRightClick twitterSection" data="
(File pics) pic.twitter.com/J6PETkU4fi
">Russian President Vladimir Putin on Thursday told his French counterpart Emmanuel Macron that the goals of Russia's operation in Ukraine - its demilitarization and neutral status - will be achieved in any case, the Kremlin said: Reuters #RussianUkrainianCrisis
— ANI (@ANI) March 3, 2022
(File pics) pic.twitter.com/J6PETkU4fiRussian President Vladimir Putin on Thursday told his French counterpart Emmanuel Macron that the goals of Russia's operation in Ukraine - its demilitarization and neutral status - will be achieved in any case, the Kremlin said: Reuters #RussianUkrainianCrisis
— ANI (@ANI) March 3, 2022
(File pics) pic.twitter.com/J6PETkU4fi
ಉಕ್ರೇನ್ನಲ್ಲಿ ಕೆಟ್ಟ ದಿನಗಳು ಬರಲಿವೆ ಎಂದ ಫ್ರಾನ್ಸ್: ಉಕ್ರೇನ್ ದೇಶವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಳ್ಳುವ ಉದ್ದೇಶ ಪುಟಿನ್ ಹೊಂದಿದ್ದಾರೆ. ಈ ನಿರ್ಧಾರದಿಂದಾಗಿ ಬರುವ ದಿನಗಳು ಉಕ್ರೇನ್ ಪಾಲಿಗೆ ಕೆಟ್ಟದಾಗಿರಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ನಿಷೇಧಿತ ಅಸ್ತ್ರ ಬಳಸುತ್ತಿದೆಯೇ ರಷ್ಯಾ? ಥರ್ಮೋಬ್ಯಾರಿಕ್ ಶಸ್ತ್ರಾಸ್ತ್ರ ಎಂದರೇನು?
ಉಕ್ರೇನ್-ರಷ್ಯಾ ಕದನ ವಿರಾಮ ಮಾತುಕತೆ: ರಷ್ಯಾ ಮತ್ತು ಉಕ್ರೇನ್ ನಡುವೆ ಬೆಲಾರಸ್- ಪೋಲೆಂಡ್ ಗಡಿಯಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಷ್ಯಾ ವಿದೇಶಾಂಗ ಸಚಿವರು, ಸದ್ಯದ ಪರಿಸ್ಥಿತಿ ಕೊನೆಗೊಂಡು ಉಕ್ರೇನ್ನಲ್ಲಿ ಶಾಂತಿಯುತ ಜೀವನ ನಡೆಸಲು ಅಲ್ಲಿನ ಜನರು ಅನುವು ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.
ನನ್ನೊಂದಿಗೆ ನೇರವಾಗಿ ಮಾತುಕತೆ ಬನ್ನಿ: ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಮಾತನಾಡಿದರೆ ಮಾತ್ರ ಈ ಯುದ್ಧ ನಿಲ್ಲುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಭಿಪ್ರಾಯಪಟ್ಟಿದ್ದು, ನನ್ನೊಂದಿಗೆ ನೇರವಾಗಿ ಮಾತುಕತೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದ ಪುಟಿನ್: ಉಕ್ರೇನ್ನಲ್ಲಿ ವ್ಯಾಸಂಗ ಮಾಡ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಗಿಟ್ಟುಕೊಂಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಚೀನಾದವರನ್ನೂ ಉಕ್ರೇನ್ ಒತ್ತೆಯಾಳಾಗಿ ಇಟ್ಟುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದಿದ್ದಾರೆ.