ETV Bharat / international

ಮತ್ತೊಂದು ಬಾರಿ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದ ಪುಟಿನ್ - ಮತ್ತೊಂದು ಬಾರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ರಷ್ಯಾ ಅಧ್ಯಕ್ಷ ಪುಟಿನ್

ಜುಲೈ 1 ರಂದು ರಷ್ಯಾವು ಸಾಂವಿಧಾನಿಕ ತಿದ್ದುಪಡಿಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಿದೆ. ಜನಾಭಿಪ್ರಾಯದಲ್ಲಿ ಅಂಗೀಕಾರವಾದರೆ, ಪುಟಿನ್ 2024 ರ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

Putin doesn't rules out another presidential run
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
author img

By

Published : Jun 22, 2020, 3:12 PM IST

ಮಾಸ್ಕೋ : ಸಾಂವಿಧಾನಿಕ ತಿದ್ದುಪಡಿ ಅಂಗೀಕಾರವಾದರೆ ಮತ್ತೊಂದು ಅಧ್ಯಕ್ಷೀಯ ಅವಧಿಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ನಾನು ಇನ್ನೂ ಏನನ್ನೂ ನಿರ್ಧರಿಸಿಲ್ಲ. ಇನ್ನೊಂದು ಅವಧಿಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎನ್ನುವುದಿಲ್ಲ . ಸಂವಿಧಾನ ಅವಕಾಶ ನೀಡಿದರೆ ನಾವು ನೋಡುತ್ತೇವೆ ಎಂದು ಪುಟಿನ್ ಭಾನುವಾರ ಪ್ರಸಾರ ಮಾಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಲ್ಲದೇ, ಕೆಲಸ ಮಾಡುವುದು ಅವಶ್ಯಕ, ಉತ್ತರಾಧಿಕಾರಿಗಳನ್ನು ಹುಡುಕಬಾರದು ಎಂದಿದ್ದಾರೆ.

ಜುಲೈ 1 ರಂದು ರಷ್ಯಾವು ಸಾಂವಿಧಾನಿಕ ತಿದ್ದುಪಡಿಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಿದೆ. ಜನಾಭಿಪ್ರಾಯದಲ್ಲಿ ಮಸೂದೆ ಅಂಗೀಕಾರವಾದರೆ, ಪುಟಿನ್ 2024 ರ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಈಗಿನ ನಿಯಮದಂತೆ ಎರಡು ಬಾರಿ ಮಾತ್ರ ಸತತವಾಗಿ ಒಬ್ಬ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. 1999 ರಿಂದ ಅಧಿಕಾರದಲ್ಲಿರುವ ಪುಟಿನ್​ ಎರಡು ಬಾರಿ ಅಧ್ಯಕ್ಷರಾದ ಬಳಿಕ, ಮೂರನೇ ಅವಧಿಗೆ ಸ್ಪರ್ಧಿಸಿರಲಿಲ್ಲ. ಆಗ ತಮ್ಮ ಬಂಟ ಮೆಡ್ವೆಡೇವ್​ ಅವರನ್ನ ಅಧ್ಯಕರನ್ನಾಗಿ ಮಾಡಿ ತಾವು ಪ್ರಧಾನಿಗಳಾಗಿದ್ದರು.

ಅದಾದ ಬಳಿಕ ಈಗ ಮತ್ತೆ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ರಷ್ಯಾದ ಸಂವಿಧಾನದ ಪ್ರಕಾರ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಪರಿಣಾಮ ಪುಟಿನ್​ ಸಂವಿಧಾನದ ಬದಲಾವಣೆಗೆ ಕೈ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.