ಗ್ಲಾಸ್ಗೋ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಯುಕೆಯ ಗ್ಲಾಸ್ಗೋದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಕೋಪ್ 26 ಶೃಂಗಸಭೆಯ ಮಧ್ಯೆ ಮೋದಿ ಮತ್ತು ಬಿಲ್ ಗೇಟ್ಸ್ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಭಾರತದಲ್ಲಿ ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಷನ್ ಮಾಡಿರುವ ಸೇವೆಯ ಬಗ್ಗೆ ಈ ವೇಳೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Prime Minister @narendramodi met @BillGates on the sidelines of the @COP26 Summit in Glasgow. Both discussed ways to further sustainable development and steps to mitigate climate change. pic.twitter.com/Li65b0VKN4
— PMO India (@PMOIndia) November 2, 2021 " class="align-text-top noRightClick twitterSection" data="
">Prime Minister @narendramodi met @BillGates on the sidelines of the @COP26 Summit in Glasgow. Both discussed ways to further sustainable development and steps to mitigate climate change. pic.twitter.com/Li65b0VKN4
— PMO India (@PMOIndia) November 2, 2021Prime Minister @narendramodi met @BillGates on the sidelines of the @COP26 Summit in Glasgow. Both discussed ways to further sustainable development and steps to mitigate climate change. pic.twitter.com/Li65b0VKN4
— PMO India (@PMOIndia) November 2, 2021
ಮಿಷನ್ ಇನೋವೇಷನ್ ಪ್ರಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಲ್ ಗೇಟ್ಸ್ ವಿವರಿಸಿದರು. ಜೊತೆಗೆ ಭಾರತದ ಈ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಿದರು. ಗ್ರೀನ್ ಹೈಡ್ರೋಜನ್, ವಿಮಾನಯಾನ ತೈಲ, ಬ್ಯಾಟರಿ ಸ್ಟೋರೇಜ್ ಮತ್ತು ಲಸಿಕೆ ಸಂಶೋಧನೆ ಬಗ್ಗೆ ಇದೇ ವೇಳೆ ಇಬ್ಬರೂ ಮಾತುಕತೆ ನಡೆಸಿದ್ದಾರೆ.