ಲಂಡನ್: ಚೆಲ್ಸಿಯಾ ಫುಟ್ಬಾಲ್ ಕ್ಲಬ್ನ ಆಟಗಾರ ಕ್ಯಾಲಮ್ ಹಡ್ಸನ್-ಒಡೋಯ್ಗೆ ಕೊರೊನಾ ಬಾಧಿಸಿರುವುದು ದೃಢಪಟ್ಟಿದೆ.
ಸೋಂಕು ಬಾಧಿತ ಆಟಗಾರ ಪುರುಷ ಆಟಗಾರರು ತಂಗುವ ಕಟ್ಟಡದಲ್ಲಿ ಇದ್ದರು ಎಂದು ತಿಳಿದು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಕ್ಯಾಲಮ್ ಹಡ್ಸನ್ಗೆ ಯುಕೆ ಆರೋಗ್ಯ ಇಲಾಖೆಯ ನಿದೇಶನಂತೆ ಸ್ವಯಂ ಪ್ರತ್ಯೇಕ ಇರುವಂತೆ ಸೂಚಿಸಿಲಾಗಿದೆ. ಕ್ಯಾಲಮ್ ಜೊತೆ ಸಂಪರ್ಕ ಹೊಂದಿದ್ದ ಇತರ ಆಟಗಾರರಿಗೂ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆಲ್ಸಿಯಾ ಫುಟ್ಬಾಲ್ ಕ್ಲಬ್ನ ಅಧಿಕಾರಿಗಳು, ಕ್ಯಾಲಮ್ ಜೊತೆ ಸಂಪರ್ಕ ಹೊಂದಿದ್ದ ಎಲ್ಲ ಆಟಗಾರರು ಮುಂದಿನ ದಿನಗಳಲ್ಲಿ ಮತ್ತೆ ತಂಡಕ್ಕೆ ಮರಳಲಿದ್ದಾರೆ. ಕ್ಯಾಲಮ್ ಹಡ್ಸನ್ ಇದ್ದ ಕಟ್ಟಡ ನಮ್ಮ ಕ್ಲಬ್ನ ಕಟ್ಟಡಗಳಲ್ಲಿ ಒಂದು. ಅದನ್ನು ಸದ್ಯಕ್ಕೆ ಮುಚ್ಚಲಾಗಿದೆ. ಇನ್ನುಳಿದಂತೆ ಕ್ಲಬ್ನ ಇತರ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಕ್ಯಾಲಮ್ ಹಡ್ಸನ್ಗೆ ಕೊರೊನಾ ಲಕ್ಷಣಗಳಲ್ಲಿ ಒಂದಾದ ಲಘು ಶೀತ ಇತ್ತು, ಹೀಗಾಗಿ ಮುನ್ನೆಚ್ಚರಿಕೆಯಿಂದ ಅವರು ತರಬೇತಿ ಮೈದಾನಕ್ಕೆ ಭೇಟಿ ಕೊಟ್ಟಿರಲಿಲ್ಲ ಎಂದು ಕ್ಲಬ್ನ ಅಧಿಕಾರಿಗಳು ತಿಳಿಸಿದ್ದಾರೆ.