ETV Bharat / international

ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿಗೆ COVID-19

author img

By

Published : Nov 26, 2020, 4:01 PM IST

ಬಿಲಾವಲ್ ಭುಟ್ಟೋ ಜರ್ದಾರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಫಲಿತಾಂಶ ಪಾಸಿಟಿವ್​ ಬಂದಿದ್ದರಿಂದ ಸ್ವತಃ ಹೋಂ ಕ್ವಾರಂಟೈನ್​ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವೀಟ್​ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Pakistan Peoples Party chairman Bilawal Bhutto Zardari tests positive for COVID-19
ಬಿಲಾವಾಲ್ ಭುಟ್ಟೋ ಜರ್ದಾರಿ

ಇಸ್ಲಾಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಗುರುವಾರ COVID-19 ಪರೀಕ್ಷೆ ಮಾಡಿಸಿಕೊಂಡಿದ್ದು ಫಲಿತಾಂಶ ಪಾಸಿಟಿವ್​ ಬಂದಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನೂ ಓದಿ: ಕೊರೊನಾಗೆ ಬಲಿಯಾದ ಸುಡಾನ್ ಮಾಜಿ ಪ್ರಧಾನಿ ಸಾದಿಕ್ ಮಹ್ದಿ

ಈ ಬಗ್ಗೆ ಟ್ವೀಟ್​ ಮಾಡಿರುವ ಬಿಲಾವಲ್ ಭುಟ್ಟೋ ಜರ್ದಾರಿ, ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದೇನೆ. ಹಾಗಾಗಿ ನಾನು ನನ್ನ ಕೆಲಸವನ್ನು ಮನೆಯಿಂದಲೇ ಮುಂದುವರಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಸುರಕ್ಷಿತ ಮಾಸ್ಕ್​ ಧರಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿ 100 ಸೆಕೆಂಡ್​ಗೆ ಒಂದು ಮಗು ಅಥವಾ ಹದಿಹರೆಯರಿಗೆ ಹೆಚ್​​ಐವಿ: ಯುನಿಸೆಫ್​​​

ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವಂತೆ ಟ್ವೀಟ್​ ಮಾಡಿರುವ ಪಿಪಿಪಿ ಪಕ್ಷದ ಮುಖಂಡರುಗಳು, ಕೊರೊನಾದಿಂದ ಬೇಗ ಗುಣಮುಖರಾಗಿ ಹೊರಬರುವಂತೆ ಶುಭಾಶಯ ತಿಳಿಸಿದ್ದಾರೆ. ಮಂಗಳವಾರ ತಮ್ಮ ರಾಜಕೀಯ ಕಾರ್ಯದರ್ಶಿ ಜಮೀಲ್ ಸೂಮ್ರೊ ಅವರಲ್ಲಿ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಆದ್ದರಿಂದ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಕೋವಿಡ್​ ಪರೀಕ್ಷೆಗೊಳಗಾಗಿದ್ದರು. ಫಲಿತಾಂಶ ಪಾಸಿಟಿವ್​ ಬಂದಿದ್ದರಿಂದ ಸ್ವತಃ ಹೋಂ ಕ್ವಾರಂಟೈನ್​ ಆಗಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.