ನಾರ್ವೆ: ಮನಸ್ಸು ಮರ್ಕಟ. ಇಂದ್ರ-ಚಂದ್ರ ಆಗ್ಬೇಕು, ಟಾಟಾ-ಬಿರ್ಲಾನಂತಿರ್ಬೇಕು. ಕ್ರಿಕೆಟರ್-ಕೋಟ್ಯಧಿಪತಿ. ಅಂಬಾನಿ-ಅದಾನಿಗೂ ಸೆಡ್ಡು ಹೊಡೀಬೇಕು ಅಂತಾ ಕನಸು ಕಾಣೋರಿದಾರೆ. ಇನ್ನು ಕೆಲವರಿಗೆ ವಿಚಿತ್ರ ಖಯಾಲಿ, ಹುಚ್ಚುತನ. ಕನ್ಯೆಯೊಬ್ಬಳು ಆಡೋ ಆಟ ನೋಡಿದ್ರೇ ಐಯ್ ನನ್ ಶಿವ್ನಾ ಈಕಿಗೇನಾತು ಅಂತಾದ್ದು ಅಂತಾ ನೀವೇ ಕೇಳದೇ ಇರೋದಿಲ್ಲ.
ಹೆಣ್ಣಾದರೇನು ಈಕೆ ಹಾರ್ಸ್‌ನಂತೆ ಜಂಪಿಂಗ್, ರನ್ನಿಂಗ್ ಮಾಡ್ತಾಳೆ!
ಹಾರ್ಸ್‌ನಂತೆ ಹಾರ್ತಾಳೆ, ಓಡ್ತಾಳೆ. ಹಾಗೇ ಈಕೆ ಜಿಗಿಯೋದು ಗೊತ್ತು. ಸೋಷಿಯಲ್ ಮೀಡಿಯಾದಲ್ಲಂತೂ ಈಕೆ ಸ್ಟಾರ್. ಯುರೋಪ್ ರಾಷ್ಟ್ರ ನಾರ್ವೆಯ ಯುವತಿಯ ವಿಸ್ಮಯಕಾರಿ ಹವ್ಯಾಸವಿದೆ. ತನ್ನ ನಡೆಯ ಮೂಲಕ ಇಂಟರ್ನೆಂಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾಳೆ. ಆಯ್ಲಾ ಕ್ರಿಸ್ಟೈನ್ ಈಕೆಯ ಹೆಸರು. ಕುದುರೆಯಂತೆ ಓಡ್ತಾಳೆ, ನೆಗೆಯುತ್ತಾಳೆ, ಜಿಗಿಯುತ್ತಾಳೆ. ಟ್ವಿಟರ್‌ನಲ್ಲಿ ಅಪ್ಪಿತಪ್ಪಿ ಯಾರೋ ಈಕೆಯ ವಿಡಿಯೋ ಹಾಕ್ಬಿಟ್ರೇ ನೋಡ ನೋಡುತ್ತಿದ್ದಂತೆಯೇ ಅದು ವೈರಲ್ ಆಗ್ಬಿಡುತ್ತೆ. ಕುದುರೆಯೊಂದಿಗೆ ರೇಸ್‌ಗೆ ನಿಂತ್ರೇ ಅದನ್ನೇ ಹಿಂದಕ್ಕೆ ಹಾಕುವಷ್ಟರಮಟ್ಟಿಗೆ ಪಳಗಿದ್ದಾಳೆ ಆಯ್ಲಾ. ಕುದುರೆ ಹಾವ-ಭಾವ, ನಡಿಗೆ, ಜಿಗಿತ, ನೆಗೆತ ಎಲ್ಲವೂ ಸೇಮ್ ಟು ಸೇಮ್ ಹಾಗೇ ಮಾಡ್ತಾಳೆ. ಎದುರು ಎಷ್ಟೇ ಎತ್ತರದ ಅಡೆತಡೆ ಇಲ್ಲ ಗೋಡೆ ಇದ್ರೂ ಅದನ್ನ ಕುದುರೆ ರೀತಿ ಜಿಗಿದು ಪಾರಾಗ್ತಾಳೆ. ಪಾರ್ಕ್‌ವೊಂದರಲ್ಲಿರುವ ಬೆಂಚ್‌ನ ಈಕೆ ಹಾರಿರೋ ವಿಡಿಯೋ ನೋಡಿಬಿಟ್ರೇ ನಿಜಕ್ಕೂ ನೀವು ಮೂಕವಿಸ್ಮಿತರಾಗಿಬಿಡ್ತಿರಿ.
ನಾಲ್ಕು ವರ್ಷದವಳಿದ್ದಾಗಲೇ ಈ ಹುಚ್ಚುತನ ಈಕೆಗೆ ಮೈಗೂಡಿತು!
'ನಾನು 4 ವರ್ಷದವಳಿದ್ದಾಗಲೇ ಈ ರೀತಿ ಕುದುರೆಯಂತೆ ಜಂಪ್ ಮಾಡೋದು, ಜಿಗಿಯೋದು, ಹಾರೋದನ್ನ ಕಲಿತಿರುವೆ. ಮೊದಲು ನನಗೆ ನಾಯಿ ಅಂದ್ರೇ ಪ್ರಾಣ. ನಾನೂ ಕೂಡ ನಾಯಿಯಂತೆಯೇ ಬದುಕಬೇಕು ಅಂತಾ ಆಸೆಪಟ್ಟಿದ್ದೆ. ಅದರಂತೆ ಓಡ್ತಿದ್ದೆ, ನೆಗೆಯುತ್ತಿದ್ದೆ. ನಾಯಿಯ ರೀತಿ ಮಾಡುವ ನಾನ್ಯಾಕೆ ಕುದುರೆಯಂತಾಗಬಾರದು ಅಂತಾ ಅಂದ್ಕೊಂಡು, ಅದರಂತೆಯೇ ಓಡುವ, ಜಿಗಿಯುವ, ಹಾರುವುದನ್ನ ಮಾಡ್ತಾ ಬಂದಿರುವೆ. ಕುದುರೆಯಂತಾಗಬೇಕೆಂದು ಕುದುರೆಯೇ ಆಗ್ಬಿಟ್ಟಿರುವೆ' ಅಂತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ ಆಯ್ಲಾ ಕ್ರಿಸ್ಟೈನ್.
ಸೋಷಿಯಲ್ ಮೀಡಿಯಾದಲ್ಲಂತೂ ಆಯ್ಲಾ ಕ್ರಿಸ್ಟ್ರೈನ್ ಸೆನ್ಸೇಷನ್!
ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಆ್ಯಕ್ಟೀವಾಗಿದ್ದಾಳೆ ಆಯ್ಲಾ. ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ನಿತ್ಯ ಒಂದಿಲ್ಲಾ ಒಂದು ತನ್ನ ವಿಡಿಯೋ ಶೇರ್ ಮಾಡಿರ್ತಾಳೆ. ಇದೇ ವಿಡಿಯೋಗಳನ್ನ ಕೆಲವರು ಮೆಚ್ಚಿ ಒಳ್ಳೇ ರೀತಿಯ ಕಮೆಂಟ್‌ಗಳನ್ನ ಮಾಡ್ತಾರೆ. ಆದರೆ, ಮತ್ತೊಂದಿಷ್ಟು ಜನ ತುಂಬಾ ಕೆಟ್ಟದಾಗಿಯೂ ಕಮೆಂಟ್ ಮಾಡ್ತಾರಂತೆ. ಆದರೆ, ಆ ಬಗ್ಗೆ ಮಾತ್ರ ಆಯ್ಲಾ ಯಾವುದೇ ಕಾರಣಕ್ಕೂ ಬೇಸರಿಸಿಕೊಳ್ಳೋದಿಲ್ವಂತೆ. ಮಿತಿಮೀರಿದ್ರೇ ಅವರನ್ನೇ ಡಿಲೀಟ್ ಮಾಡ್ತಾರಂತೆ ಈಕೆ. ಈ ಚದುರೆ ಇನ್ನೂ ಅವಿವಾಹಿತೆ. ಜಗತ್ತಿನಲ್ಲಿ ಎಂತೆಂಥವರು ಇರ್ತಾರೆ ಅಲ್ವಾ.