ETV Bharat / international

ಪಾಕಿಸ್ತಾನಕ್ಕೆ ಇಂದು ಮಹತ್ವದ ದಿನ: ಇಮ್ರಾನ್ ಖಾನ್ ಎದೆಯಲ್ಲಿ ಢವ ಢವ!

author img

By

Published : Oct 18, 2019, 7:55 AM IST

ಪಾಕಿಸ್ತಾನವನ್ನು ಗ್ರೇ ಲಿಸ್ಟ್​​ನಲ್ಲೇ ಉಳಿಸುವ ಮೂಲಕ ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಉಗ್ರ ನಿರ್ಮೂಲನೆ ಮಾಡಬೇಕು ಎನ್ನುವ ಸಂದೇಶವನ್ನು ಎಫ್​ಎ​ಟಿಎಫ್ ರವಾನಿಸಲು ಉದ್ದೇಶಿಸಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪ್ಯಾರಿಸ್: ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ(ಎಫ್​ಎ​ಟಿಎಫ್) ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಮುಂದುವರೆಸುವ ಸಾಧ್ಯತೆ ನಿಚ್ಚಳವಾಗಿದ್ದು, ಇಂದು ಅಧಿಕೃತ ಮಾಹಿತಿ ಹೊರಬೀಳಲಿದೆ.

ಪ್ಯಾರಿಸ್​​ನಲ್ಲಿ ನಡೆದ ಎಫ್​ಎ​ಟಿಎಫ್ ಸಭೆಯ ಅಂತಿಮ ದಿನವಾದ ಇಂದು ಪಾಕಿಸ್ತಾನ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ದೊರೆತಿರುವ ಮಾಹಿತಿ ಪ್ರಕಾರ, 2020 ಫೆಬ್ರವರಿ ತನಕ ಪಾಕಿಸ್ತಾನ ಗ್ರೇ ಲಿಸ್ಟ್​​ನಲ್ಲೇ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.

ಪಾಕ್‌ ಪರಿಸ್ಥಿತಿ ಮತ್ತಷ್ಟು ದುರ್ಬರ! 'ಡಾರ್ಕ್​ ಗ್ರೇ' ಪಟ್ಟಿಯ ಸನಿಹ ಇಮ್ರಾನ್​ 'ನಯಾ ಪಾಕಿಸ್ತಾನ್​​'

ಪಾಕಿಸ್ತಾನವನ್ನು ಗ್ರೇ ಲಿಸ್ಟ್​​ನಲ್ಲೇ ಉಳಿಸುವ ಮೂಲಕ ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡಿ ಉಗ್ರ ಸಂಹಾರ ಮಾಡಬೇಕು ಎನ್ನುವ ಸಂದೇಶವನ್ನು ಎಫ್​ಎ​ಟಿಎಫ್ ರವಾನಿಸಲು ಉದ್ದೇಶಿಸಿದೆ. ಪಾಕಿಸ್ತಾನ ಯಾವುದೇ ಪಟ್ಟಿ ಸೇರಿದರೂ ದೇಶದ ಆರ್ಥಿಕತೆ, ಜಾಗತಿಕ ನೆರವು ಹಾಗೂ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಸ್ಥಾನಮಾನಕ್ಕೆ ದೊಡ್ಡ ಹಿನ್ನಡೆಯುಂಟಾಗಲಿದೆ.

2018 ಜೂನ್​ ತಿಂಗಳಿನಿಂದ ಪಾಕಿಸ್ತಾನ ಉಗ್ರ ನಿಗ್ರಹದಲ್ಲಿ ಹಿಂದುಳಿದ ಪರಿಣಾಮ ಗ್ರೇ ಲಿಸ್ಟ್​ನಲ್ಲಿದೆ. ಎಫ್​ಎ​ಟಿಎಫ್​ 27 ಅಂಶಗಳಲ್ಲಿ ಸುಧಾರಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತ್ತು. ಇದಕ್ಕಾಗಿ 15 ತಿಂಗಳುಗಳ ಕಾಲಾವಕಾಶವನ್ನು ನೀಡಿತ್ತು. ಮುಂದಿನ ಫೆಬ್ರವರೆಗೂ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದಲ್ಲಿ ಸುಧಾರಣೆ ಕಾಣದಿದ್ದಲ್ಲಿ ಇರಾನ್ ಹಾಗೂ ಉತ್ತರ ಕೊರಿಯಾ ಜೊತೆಗೆ ಕಪ್ಪುಪಟ್ಟಿಗೆ ಸೇರುವುದು ನಿಶ್ಚಿತ.

Intro:Body:

ಪ್ಯಾರಿಸ್: ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ(ಎಫ್​ಎ​ಟಿಎಫ್) ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಮುಂದುವರೆಸುವ ಸಾಧ್ಯತೆ ನಿಚ್ಚಳವಾಗಿದ್ದು, ಇಂದು ಅಧಿಕೃತ ಮಾಹಿತಿ ಹೊರಬೀಳಲಿದೆ.

ಪ್ಯಾರಿಸ್​​ನಲ್ಲಿ ನಡೆದ ಎಫ್​ಎ​ಟಿಎಫ್ ಸಭೆಯ ಅಂತಿಮ ದಿನವಾದ ಇಂದು ಪಾಕಿಸ್ತಾನ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ದೊರೆತಿರುವ ಮಾಹಿತಿ ಪ್ರಕಾರ 2020 ಫೆಬ್ರವರಿ ತನಕ ಪಾಕಿಸ್ತಾನ ಗ್ರೇ ಲಿಸ್ಟ್​​ನಲ್ಲೇ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನವನ್ನು ಗ್ರೇ ಲಿಸ್ಟ್​​ನಲ್ಲೇ ಉಳಿಸುವ ಮೂಲಕ ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಉಗ್ರ ನಿರ್ಮೂಲನೆ ಮಾಡಬೇಕು ಎನ್ನುವ ಸಂದೇಶವನ್ನು ಎಫ್​ಎ​ಟಿಎಫ್ ರವಾನಿಸಲು ಉದ್ದೇಶಿಸಿದೆ.

2018 ಜೂನ್​ ತಿಂಗಳಿನಿಂದ ಪಾಕಿಸ್ತಾನ ಉಗ್ರ ನಿಗ್ರಹದಲ್ಲಿ ಹಿಂದುಳಿದ ಪರಿಣಾಮ ಗ್ರೇ ಲಿಸ್ಟ್​ನಲ್ಲಿದೆ. ಎಫ್​ಎ​ಟಿಎಫ್​ 27 ಅಂಶಗಳಲ್ಲಿ ಸುಧಾರಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತ್ತು. ಇದಕ್ಕಾಗಿ 15 ತಿಂಗಳುಗಳ ಕಾಲಾವಕಾಶವನ್ನು ನೀಡಿತ್ತು. ಮುಂದಿನ ಫೆಬ್ರವರಿಗೂ ಪಾಕಿಸ್ತಾನ ಭಯೋತ್ಪಾದನೆ ನಿಗ್ರಹದಲ್ಲಿ ಸುಧಾರಣೆ ಕಾಣದಿದ್ದಲ್ಲಿ ಇರಾನ್ ಹಾಗೂ ಉತ್ತರ ಕೊರಿಯಾ ಜೊತೆಗೆ ಕಪ್ಪುಪಟ್ಟಿಗೆ ಸೇರುವುದು ನಿಶ್ಚಿತ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.