ಲಂಡನ್: ಸ್ಕಾಟ್ಲೆಂಡ್ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಹುಕೋಟಿ ವಂಚಕ ನೀರವ್ ಮೋದಿ ಜಾಮೀನು ಅರ್ಜಿ ಮತ್ತೆ ವಜಾ ಆಗಿದ್ದು, ಇಂದಿನ ವಾದ-ವಿವಾದದಲ್ಲಿ ಆಗಿದ್ದೇನು ಎನ್ನುವ ಮಾಹಿತಿ ಇಲ್ಲಿದೆ.
ಲಂಡನ್ ಸಮಯ ಹನ್ನೊಂದು ಗಂಟೆಗೆ ನೀರವ್ ಮೋದಿ ಎರಡನೇ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಪ್ರಮುಖ ವಾಗಿ ನೀರವ್ ಮೋದಿ ಸಾಕ್ಷ್ಯ ನಾಶ, ಸಾಕ್ಷಿದಾರನಿಗೆ ಕೊಲೆ ಬೆದರಿಕೆ, ಲಂಚದ ಆರೋಪ, ಭಾರತದ ಸಾಕ್ಷ್ಯಗಳು ಅಸಮಂಜಸ ಎನ್ನುವ ವಿಚಾರಗಳೇ ಅರ್ಜಿ ವಿಚಾರಣೆಯ ಪ್ರಮುಖ ಹೈಲೈಟ್ಸ್..!
ಮಾರ್ಚ್ 20ರಂದು ಬ್ಯಾಂಕ್ ಖಾತೆ ತೆರೆಯುವ ಸಂದರ್ಭದಲ್ಲಿ ಸ್ಕಾಟ್ಲೆಂಡ್ ಪೊಲೀಸರು ನೀರವ್ ಮೋದಿಗೆ ಕೋಳ ತೊಡಿಸಿದ್ದರು. ತಕ್ಷಣವೇ ಜಾಮೀನು ಅರ್ಜಿ ಸಲ್ಲಿಸಲಾಗಿತ್ತಾದರೂ, ವೆಸ್ಟ್ಮಿನಿಸ್ಟರ್ ಕೋರ್ಟ್ ಅರ್ಜಿಯನ್ನು ತಳ್ಳಿಹಾಕಿತ್ತು. ಹೀಗಾಗಿ ಮಾರ್ಚ್ 29ರವರೆಗೆ ಜೈಲಿನಲ್ಲೇ ನೀರವ್ ಮೋದಿ ಕಾಲ ಕಳೆದಿದ್ದರು.
ಇಂದು ಎರಡನೇ ಜಾಮೀನು ಅರ್ಜಿ ವಿಚಾರಣೆಯನ್ನು ವೆಸ್ಟ್ಮಿನಿಸ್ಟರ್ ಕೋರ್ಟ್ ಕೈಗೆತ್ತಿಕೊಂಡಿತ್ತು. ಭಾರತದ ಅಧಿಕಾರಗಳ ಪರವಾಗಿ ವಾದ ಮಂಡಿಸಿದ್ದ ಲಾಯರ್, ನೀರವ್ ಮೋದಿ ಸಾಕ್ಷಿದಾರರಿಗೆ ಕೊಲೆ ಬೆದರಿಕೆ ಹಾಗೂ 20 ಲಕ್ಷ ಲಂಚದ ಆಮಿಷ ಒಡ್ಡಿದ್ದಾನೆ ಎಂದು ಕೋರ್ಟ್ ಮುಂದೆ ಹೇಳಿದ್ದಾರೆ.
ವಿಚಾರಣೆ ಆರಂಭಕ್ಕೂ ಮುನ್ನ ಭಾರತದ ಮತ್ತಷ್ಟು ದಾಖಲೆಯನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಚೀಫ್ ಮ್ಯಾಜಿಸ್ಟ್ರೇಟ್ ಈ ದಾಖಲೆ ಅಸಮಂಜಸವಾಗಿದೆ ಮತ್ತು ಪರಿಪೂರ್ಣವಾಗಿಲ್ಲ ಎಂದು ಹೇಳಿದ್ದಾರೆ.
In the next hearing at London's Westminster Magistrates' court on 26 April, Nirav Modi will be produced through video conferencing. His bail application has been rejected by the Court today. (file pic) pic.twitter.com/XdM4Rg1Ehh
— ANI (@ANI) March 29, 2019 " class="align-text-top noRightClick twitterSection" data="
">In the next hearing at London's Westminster Magistrates' court on 26 April, Nirav Modi will be produced through video conferencing. His bail application has been rejected by the Court today. (file pic) pic.twitter.com/XdM4Rg1Ehh
— ANI (@ANI) March 29, 2019In the next hearing at London's Westminster Magistrates' court on 26 April, Nirav Modi will be produced through video conferencing. His bail application has been rejected by the Court today. (file pic) pic.twitter.com/XdM4Rg1Ehh
— ANI (@ANI) March 29, 2019
ಸಾಕ್ಷ್ಯನಾಶದ ಸಾಧ್ಯತೆಯನ್ನು ಭಾರತದ ಪರ ಲಾಯರ್ ವ್ಯಕ್ತಪಡಿಸಿರುವುದನ್ನು ನ್ಯಾಯಾಲಯ ಪರಿಗಣಿಸಿದ್ದು ಈ ನಿಟ್ಟಿನಲ್ಲಿ ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತಗೊಳಿಸಿದೆ. ಮುಂದಿನ ವಿಚಾರಣೆಯನ್ನು ಎಪ್ರಿಲ್ 26ಕ್ಕೆ ಮುಂದೂಡಿಕೆ ಮಾಡಿದೆ.