ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ಸೂಪರ್ ಮಾರ್ಕೆಟ್‌ಗೆ ನುಗ್ಗಿ ಆರು ಮಂದಿ ವ್ಯಾಪಾರಿಗಳಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಉಗ್ರನನ್ನು ನ್ಯೂಜಿಲ್ಯಾಂಡ್ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.
ನ್ಯೂಜಿಲ್ಯಾಂಡನ್ ಅತಿದೊಡ್ಡ ನಗರವಾದ ಆಕ್ಲೆಂಡ್‌ನ ಕೌಂಟ್‌ಡೌನ್ ಸೂಪರ್ ಮಾರ್ಕೆಟ್‌ನಲ್ಲಿ ಇಂದು ಬೆಳಗ್ಗೆ ನಡೆದ ಈ ಘಟನೆಯನ್ನು ಪ್ರಧಾನಿ ಜಸಿಂಡಾ ಅರ್ಡೆರ್ನ್ ಖಂಡಿಸಿದ್ದಾರೆ. ಇದೊಂದು ಅರ್ಥಹೀನ ಹಾಗೂ ಭಯೋತ್ಪಾದಕ ದಾಳಿ. ಆ ವ್ಯಕ್ತಿ ಇಸ್ಲಾಮಿಕ್ ಸ್ಟೇಟ್ (ISIS) ಗುಂಪಿನಿಂದ ಪ್ರಭಾವಿತನಾದ ಶ್ರೀಲಂಕಾ ಪ್ರಜೆಯಾಗಿದ್ದು, ನಮ್ಮ ರಾಷ್ಟ್ರದ ಭದ್ರತಾ ಏಜೆನ್ಸಿಗಳಿಗೆ ಈತ ವಾಂಟೆಡ್ ಉಗ್ರನಾಗಿದ್ದ ಎಂದು ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ.
-
An ISIS-inspired terrorist stabbed 6 people at an Auckland supermarket today before police who had him under surveillance shot him dead, New Zealand PM Jacinda Ardern says: AFP
— ANI (@ANI) September 3, 2021 " class="align-text-top noRightClick twitterSection" data="
">An ISIS-inspired terrorist stabbed 6 people at an Auckland supermarket today before police who had him under surveillance shot him dead, New Zealand PM Jacinda Ardern says: AFP
— ANI (@ANI) September 3, 2021An ISIS-inspired terrorist stabbed 6 people at an Auckland supermarket today before police who had him under surveillance shot him dead, New Zealand PM Jacinda Ardern says: AFP
— ANI (@ANI) September 3, 2021
ಇದನ್ನೂ ಓದಿ: ಕಾಶ್ಮೀರದಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ: ತಾಲಿಬಾನ್ ಯೂ ಟರ್ನ್
ಘಟನೆಯಲ್ಲಿ ಗಾಯಗೊಂಡ ಆರು ಮಂದಿಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಉಗ್ರನ ನಿರಂತರ ಮೇಲ್ವಿಚಾರಣೆಯಲ್ಲಿದ್ದ ನಮ್ಮ ಪೊಲೀಸರು ಕೆಲವೇ ಕ್ಷಣಗಳಲ್ಲಿ ಆತನನ್ನು ಹೊಡೆದುರುಳಿಸಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಕೋವಿಡ್ನಿಂದಾಗಿ ಪ್ರಸ್ತುತ ಆಕ್ಲೆಂಡ್ ನಗರದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಕೆಲ ಅಂಗಡಿಗಳು, ಸೂಪರ್ ಮಾರ್ಕೆಟ್ಗಳನ್ನು ತೆರೆಯಲಾಗಿದೆ.