ಖಾರ್ಕಿವ್(ಉಕ್ರೇನ್): ರಷ್ಯಾದ ಶೆಲ್ ದಾಳಿಗೆ ಮೃತಪಟ್ಟ ಹಾವೇರಿಯ ನವೀನ್ ಅವರ ಸ್ನೇಹಿತ ಪಂಜಾಬ್ನ ಲವಕೇಶ್ ಉಕ್ರೇನ್‌ನಲ್ಲಿ ಸಿಲುಕಿದ್ದು, ಅಲ್ಲಿಯ ರಣಭೀಕರತೆಯ ಬಗ್ಗೆ 'ಈಟಿವಿ ಭಾರತ್' ಜೊತೆ ಮಾತನಾಡಿ ವಿವರಿಸಿದ್ದಾರೆ.
ನವೀನ್ ಮೃತಪಟ್ಟ ಮತ್ತು ನಾವು ನೆಲೆಸಿರುವ ಖಾರ್ಕಿವ್ನ ಈ ಪ್ರದೇಶ ರಷ್ಯಾ ದಾಳಿಯಿಂದ ನಲುಗಿದೆ. ಅಲ್ಲದೇ ಇಲ್ಲಿಯ ಭಾರತೀಯರ ಸ್ಥಿತಿ ದಯನೀಯವಾಗಿದೆ. ಸರಿಯಾದ ಆಹಾರ, ನೀರು ಇಲ್ಲದೇ ಪರದಾಡಬೇಕಿದೆ. ಉತ್ತಮ ಆಹಾರ ತಿಂದು ಒಂದು ವಾರ ಕಳೆದಿದೆ ಎಂದು ಅಲ್ಲಿನ ಭೀಕರತೆಯನ್ನು ಲವಕೇಶ್ ಬಿಚ್ಚಿಟ್ಟಿದ್ದಾರೆ.
ಈ ಭಾಗದಲ್ಲಿ ರಷ್ಯಾದ ಶೆಲ್ ದಾಳಿ ತೀವ್ರವಾಗಿದೆ. ನವೀನ್ ಕೂಡ ಇದೇ ಶೆಲ್ ದಾಳಿಗೆ ದಾರುಣವಾಗಿ ಮೃತಪಟ್ಟರು. ಇಲ್ಲಿಯ ಪರಿಸ್ಥಿತಿ ಕ್ಷಣಕ್ಷಣವೂ ಬಿಗಡಾಯಿಸುತ್ತಿದೆ. ನಾವು ಇಲ್ಲಿಂದ ತಪ್ಪಿಸಿಕೊಂಡು ಗಡಿ ದಾಟುವುದು ಕಷ್ಟಕರವಾಗಿದೆ. ಹಾಗಾಗಿ ಆದಷ್ಟು ಬೇಗ ಭಾರತೀಯರನ್ನು ಇಲ್ಲಿಂದ ಸ್ಥಳಾಂತರ ಮಾಡಲು ದೂತಾವಾಸ ಕಚೇರಿ ಮತ್ತು ಭಾರತ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮೃತ ನವೀನ್ ಸ್ನೇಹಿತ ಲವಕೇಶ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು: ಪೋಷಕರಿಗೆ ಕರೆ ಮಾಡಿ ಧೈರ್ಯ ತುಂಬಿದ ಮೋದಿ