ETV Bharat / international

ರಷ್ಯಾ- ಉಕ್ರೇನ್​ ನಡುವಣ 2ನೇ ಸುತ್ತಿನ ಮಾತುಕತೆ: ನಾಗರಿಕರ ರಕ್ಷಣೆಗೆ ಮಾನವೀಯ ಕಾರಿಡಾರ್‌ ಸ್ಥಾಪನೆ

ಮಾಸ್ಕೋ ಮತ್ತು ಕೀವ್ ನಾಗರಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು 'ಮಾನವೀಯ ಕಾರಿಡಾರ್‌ಗಳನ್ನು' ಸ್ಥಾಪಿಸಿದ್ದು, ಯುದ್ಧದ ಸ್ಥಳಗಳಿಗೆ ಔಷಧಗಳು ಮತ್ತು ಆಹಾರವನ್ನು ತಲುಪಿಸಲು ಮಾನವೀಯ ಕಾರ್ಯ ಸಾಗುತ್ತಿದೆ.

ಮಾನವೀಯ ಕಾರಿಡಾರ್‌
ಮಾನವೀಯ ಕಾರಿಡಾರ್‌
author img

By

Published : Mar 4, 2022, 7:19 AM IST

ಮಾಸ್ಕೋ: ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಮಾಸ್ಕೋ ಮತ್ತು ಕೀವ್ ನಾಗರಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು ಎರಡು ದೇಶಗಳು 'ಮಾನವೀಯ ಕಾರಿಡಾರ್‌ಗಳನ್ನು' ಸ್ಥಾಪಿಸಿದ್ದು, ಯುದ್ಧದ ಸ್ಥಳಗಳಿಗೆ ಔಷಧಗಳು ಮತ್ತು ಆಹಾರವನ್ನು ತಲುಪಿಸಲು ಮಾನವೀಯ ಕಾರ್ಯ ಸಾಗುತ್ತಿದೆ ಎಂದು ಉಕ್ರೇನ್​ ನಿಯೋಗದ ಸದಸ್ಯ ಮಿಖಾಯಿಲ್ ಪೊಡೊಲ್ಯಾಕ್ ಹೇಳಿದ್ದಾರೆ.

ಉಕ್ರೇನ್​ನಲ್ಲಿ ಸಾರ್ವಜನಿಕರ ಸ್ಥಳಾಂತರ ಕಾರ್ಯ ನಡೆಯುತ್ತಿರುವ ವಲಯಗಳಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಆರ್‌ಟಿ ವರದಿ ಮಾಡಿದೆ. ಪೊಡೊಲ್ಯಾಕ್ ನೀಡಿರುವ ಮಾಹಿತಿ ಪ್ರಕಾರ, ಕೀವ್ ಮತ್ತು ಮಾಸ್ಕೋದ ಪ್ರತಿನಿಧಿಗಳ ನಡುವಿನ ಮಾತುಕತೆಯ ಸಮಯದಲ್ಲಿ ಮಾನವೀಯ ಅಂಶಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಜೊತೆಗೆ ಇಲ್ಲಿನ ಜನರಿಗೆ ಮಾನವೀಯ ಕಾರಿಡಾರ್‌ಗಳ ಕುರಿತು ತಿಳಿವಳಿಕೆ ಕೂಡಾ ನೀಡಲಾಗುತ್ತಿದೆ .

ಇದನ್ನೂ ಓದಿ: ಉಕ್ರೇನ್​ನಲ್ಲಿ ಭಾರತೀಯರ ರಕ್ಷಣೆಗೆ ಮಾನವೀಯ ಕಾರಿಡಾರ್ ರಚನೆ: ರಷ್ಯಾ

ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನಡೆದ ಮಾತುಕತೆಯಲ್ಲಿ ಮೂರು ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ, ಮಿಲಿಟರಿ ಸಮಸ್ಯೆ, ಅಂತಾರಾಷ್ಟ್ರೀಯ ಮಾನವೀಯತೆ ಮತ್ತು ಭವಿಷ್ಯದ ರಾಜಕೀಯ ಇತ್ಯರ್ಥದ ಕುರಿತು ಚರ್ಚಿಸಲಾಗಿದೆ ಎಂದು ರಷ್ಯಾದ ನಿಯೋಗದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.