ETV Bharat / international

5 ವರ್ಷ ಮಗು ಬದುಕಿಸಲು 5 ಸಾವಿರ ಜನ ಕ್ಯೂ ನಿಂತರು..! ಭರವಸೆಯೊಂದೇ ಬದುಕಿಸಬಹುದು...

ಲುಕೇಮಿಯಾದಿಂದ ಬಳಲುತ್ತಿದ್ದ ಐದು ವರ್ಷದ ಮಗುವಿಗೆ (ಜೀವಕೋಶ) ದಾನ ಮಾಡಲು ಮಳೆಯ ನಡುವೆ 4,800 ಮಂದಿ ಸರದಿ ಸಾಲಿನಲ್ಲಿ ನಿಂತಿದ್ದರು. ಏಕೆ ಅನ್ನೋದನ್ನು ಮುಂದೆ ಓದಿ.​

ಲುಕೇಮಿಯಾದಿಂದ ಬಳಲುತ್ತಿದ್ದ ಐದು ವರ್ಷದ ಮಗು
author img

By

Published : Mar 6, 2019, 1:37 PM IST

ವರ್ಸೈಸ್ಟರ್‌(ಇಂಗ್ಲೆಂಡ್‌) : ಐದು ವರ್ಷದ ಮಗುವಿಗೆ ಕ್ಯಾನ್ಸರ್. ಯಾರಾದರೂ ಸ್ವಲ್ಪ ಹೆಲ್ಪ್ ಮಾಡಿ ಅಂತ ಕೇಳಿದ್ರೇ, ಧೋ ಎಂದು ಸುರಿಯೋ ಮಳೆಯ ಮಧ್ಯೆಯೇ 5 ಸಾವಿರ ಜನ ಕ್ಯೂನಲ್ಲಿ ನಿಂತು ಮಗುವಿಗೆ ಸಹಾಯ ಮಾಡಲು ಮುಂದಾದ ಘಟನೆ ಇಂಗ್ಲೆಂಡ್‌ನ ವರ್ಸೈಸ್ಟರ್‌ನಲ್ಲಿ ನಡೆದಿದೆ. ನಿಜಕ್ಕೂ ಮಾನವೀಯತೆ ಅಂದ್ರೇ ಏನು ಅಂತ ದರ್ಶನ ಮಾಡಿಸಿದ್ದಾರೆ ಆಂಗ್ಲರು.

ಒಲಿವಿಯಾ ಸಕ್ಸೇಲ್ಬಿ ಮತ್ತು ಜಾಮಿಯಾ-ಲೀ ಎಂಬ ದಂಪತಿಯ ಆಸ್ಕರ್‌ ಸಕ್ಸೇಬೈ-ಲೀ ಎಂಬ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. 2018ರ ಡಿಸೆಂಬರ್‌ನಲ್ಲಿ ವೈದ್ಯರು ಪರೀಕ್ಷಿಸಿದಾಗ, ಮಗುವಿಗೆ ಲುಕೇಮಿಯಾ (ಕ್ಯಾನ್ಸರ್‌) ಇದೆ ಎಂದು ದೃಢವಾಗಿತ್ತು. ಮಗು ಉಳಿಯಬೇಕಿದ್ರೇ, ಸ್ಟೈಮ್‌ಸೆಲ್ಸ್‌ ದಾನ ಮಾಡೋರು ಬೇಕಿತ್ತು. ಮಗುವಿನ ಹೆತ್ತವರು ಹೃದಯ ಕಲಕುವ ರೀತಿ ದಾನಿಗಳಲ್ಲಿ ಮನವಿ ಮಾಡಿದ್ದರು. ಆಗ ಸ್ಟೈಮ್‌ಸೆಲ್ಸ್‌ (ಜೀವಕೋಶ) ದಾನ ಮಾಡಲು ಮಳೆಯಿದ್ದರೂ 4,800 ಮಂದಿ ಸರದಿ ಸಾಲಿನಲ್ಲಿ ನಿಂತಿದ್ದರು.

ಬದುಕುವುದು ದಾನಿಗಳ ಕೈಗಳಲ್ಲಿದೆ ಎಂಬ ಮನವಿಗೆ ಸಾವಿರಾರು ಜನ ತಮ್ಮ ಸ್ಟೈಮ್‌ಸೆಲ್ಸ್ ಹೊಂದಿಕೆಯಾದ್ರೇ, ದಾನ ಮಾಡ್ತೇವೆ ಅಂತ ಮುಂದೆ ಬಂದಿದ್ದರು.

'ನಾವು ಇನ್ಮೇಲೆ ಮಗು ನೋಡ್ತೀವೋ ಇಲ್ವೋ ಅಂದುಕೊಂಡಿದ್ದೆವು. ಆದರೆ, ಆಸ್ಕರ್‌ನ ಮುಗ್ದ ನಗು, ಧೈರ್ಯ ಹಾಗೂ ಬದ್ಧತೆ ನೋಡಿ ನಮ್ಮಷ್ಟಕ್ಕೆ ಪುನಾಃ ನಾವೇ ಶಕ್ತಿ ತಂದುಕೊಂಡೆವು. ಮಗನಿಗೆ ಲುಕೇಮಿಯಾ ಅಂತಾ ತಿಳಿದ ಕ್ಷಣ ಭಯದಲ್ಲಿ ಏನೂ ತಿಳಿಯದಂತವರಾಗಿದ್ದೆವು. ಆದರೆ, ನಾವು ಈ ಹಿಂದೆ ಯಾವತ್ತು ಇಷ್ಟು ಗಟ್ಟಿಯಾಗಿರಲಿಲ್ಲ. ಮಗ ನಾವು ಹೇಗೆ ಧೈರ್ಯದಿಂದ ಹೋರಾಡಬೇಕೆಂದು ಕಲಿಸಿಕೊಟ್ಟಿದ್ದಾನೆ. ಆತ ಒಮ್ಮೆಯೂ ಅಸ್ವಸ್ಥನಾಗಿಲ್ಲ. ಇದು ನಮಗೆ ಅಚ್ಚರಿ ಅಂತಾರೆ ತಂದೆ ಒಲಿವಿಯಾ.

'ಆಸ್ಕರ್‌ ನಗು, ಪ್ರೀತಿ, ಚೈತನ್ಯ ತುಂಬಿದ ಐದು ವರ್ಷ ಮಗು. ಕ್ಯಾನ್ಸರ್‌ಗೆ ತುತ್ತಾದ್ರೇ ಕೆಲವರು ಬೇಗ ಜೀವ ಬಿಡ್ತಾರೆ. ಆದ್ರೇ, ನಮ್ಮ ಮಗು ಮಾತ್ರ ಸಂಪೂರ್ಣ ಬದುಕಲು ಅರ್ಹ. ಬೇರೆ ಮಕ್ಕಳಂತೆ ಆತನೂ ಸಹಜವಾಗಿ ಬದುಕನ್ನ ಆನಂದಿಸಬೇಕು. ಆತ ಈ ರೀತಿ ಬದುಕಲು ಯಾರಾದರೂ ಒಬ್ಬರ ನೆರವು ಬೇಕೆಂದು ಕೇಳಿದೆವು. ಆಗ 4,800ಕ್ಕೂ ಹೆಚ್ಚು ಜನ ಪಿಟ್‌ಮ್ಯಾಸ್ಟನ್‌ ಪ್ರೈಮರಿ ಸ್ಕೂಲ್‌ನ ಸ್ಟೈಮ್‌ಸೆಲ್ಸ್‌ ದಾನ ಮಾಡಲು ಮುಂದೆ ನಿಂತಿದ್ದರು' ಅಂತ ಹೇಳುವಾಗ ಮಗುವಿನ ತಾಯಿ ಜಾಮಿಯಾ-ಲೀ ಕಣ್ಣಂಚಿನಲ್ಲಿ ನೀರು ಜಿನುಗಿತ್ತು.

undefined

'ನಾನು 20 ವರ್ಷದಿಂದ ಪಾಠ ಹೇಳುತ್ತಿರುವೆ. ಆದರೆ, ಆಸ್ಕರ್‌ ರೀತಿ ಮಗು ನಾ ನೋಡಿಲ್ಲ. ಕ್ಯಾನ್ಸರ್‌ ಆಗಿದೆ ಅಂದ್ರೇ ಎಲ್ಲ ಮುಗೀತು ಅಂತ ಅಂದ್ಕೋಳ್ತಾರೆ. ಆದರೆ, ಈ ಮಗುವಿನ ವಿಚಾರದಲ್ಲಿ ಹಾಗೆ ಆಗಲ್ಲ. ನಾವು ಹೋರಾಡಬೇಕು. ಕ್ಯಾನ್ಸರ್‌ ಗೆಲ್ಲಬೇಕು ಅಂತಾರೆ ಆಸ್ಕರ್‌ ಸ್ಕೂಲ್‌ ಟೀಚರ್‌ ಸರಹಾ ಕೀಟಿಂಗ್‌.

ಟೀಚಿಂಗ್‌ ಸಹಾಯಕ ಲೂರಾ ಸೆಂಟಾರ್ ಹೇಳೋದೇನೆಂದ್ರೇ, 'ಆಸ್ಕರ್‌ಗೆ ಕ್ಯಾನ್ಸರ್‌ ಇದ್ರೆ ಅನ್ನೋದನ್ನ ನಂಬಲಾಗುತ್ತಿಲ್ಲ. ಕ್ರಿಸಮಸ್‌ಗಿಂತ ಮೊದಲು ನಾನು ಆತನನ್ನ ನೋಡಿದ್ದೆ. ತುಂಬಾ ಖುಷಿ ಖುಷಿಯಾಗಿದ್ದ. ರಾತ್ರೋರಾತ್ರಿ ಹೀಗಾಗಿದೆ. ಇದನ್ನ ಕೇಳಿ ಹೃದಯ ಒಡೆದಿದೆ. ಆಡುವ ಹುಡುಗ ಬಿದ್ದು ಕಾಲು ಮುರಿದರೆ, ಅದನ್ನ ಪ್ಲಾಸ್ಟರ್‌ನಿಂದ ಫಿಕ್ಸ್‌ ಮಾಡಬಹುದು. ಆದರೆ, ಇದು ಭಿನ್ನ. ಆದರೂ ದಾನಿಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ. ತಿಂಗಳ ಹಿಂದಷ್ಟೇ ಆಸ್ಕರ್‌ ಬರ್ತ್‌ಡೇ. ಹಾಸ್ಪಿಟಲ್‌ಗೆ ತೆರಳಿ ನಮ್ಮ ಶಾಲೆಯ ಮಕ್ಕಳ ಪೋಷಕರೆಲ್ಲ ಗಿಫ್ಟ್‌ ಕೊಟ್ಟು, ಆತ ಬೇಗ ಚೇತರಿಸಿಕೊಳ್ಳಲಿ ಅಂತ ಹಾರೈಸಿದ್ದರು ಅಂತಾರೆ '

ಭರವಸೆ ಮಾತ್ರ ಈ ಮಗುವನ್ನ ಬದುಕಿಸಬಹುದೇನೋ.. ಆಸ್ಕರ್‌ಗಿದು ತುಂಬಾ ಕಷ್ಟದ ಸಮಯ. ಮತ್ತೆ ಆತ ಆರೋಗ್ಯಕರವಾಗಿ ಖುಷಿ ಖುಷಿಯಾಗಿ ಎಲ್ಲರ ಮುಂದೆ ಕಾಣಿಸಿಕೊಳ್ಳಲಿ ಅನ್ನೋ ಪ್ರಾರ್ಥನೆ ಈಗ ಇಂಗ್ಲೆಂಡ್‌ನಾದ್ಯಂತ ಅಷ್ಟೇ ಅಲ್ಲ, ವಿಶ್ವದ ಸಾಕಷ್ಟು ಮಕ್ಕಳ ಪೋಷಕರು ಮಾಡಿಕೊಳ್ಳುತ್ತಿದ್ದಾರಂತೆ. ಆದಷ್ಟು ಬೇಗ ಆಸ್ಕರ್‌ ಆರೋಗ್ಯವಂತನಾಗಲಿ. Get Well Soon Oscar.

Intro:Body:

More-than-5-thousand-people-come-to-survive-5-years-old-baby

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.