ಕೀವ್(ಉಕ್ರೇನ್): ಕಳೆದ ಏಳು ದಿನಗಳಿಂದ ಉಕ್ರೇನ್‌ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ದಾಳಿಯ ಹಿನ್ನೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಉಕ್ರೇನ್ ತುರ್ತು ಸೇವಾ ವಿಭಾಗ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಉಕ್ರೇನ್‌ನ ಹಲವು ಭಾಗಗಳಲ್ಲಿ ಸಾರಿಗೆ ಸೌಲಭ್ಯಗಳು, ಆಸ್ಪತ್ರೆಗಳು, ಶಿಶು ವಿಹಾರ, ವಸತಿ ಕಟ್ಟಡಗಳು ಸಂಪೂರ್ಣವಾಗಿ ನೆಲಸಮವಾಗಿದೆ. ಬಾಂಬ್, ಶೆಲ್ ದಾಳಿಗಳಿಂದಾಗಿ ಮಕ್ಕಳು, ಮಹಿಳೆಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ತುರ್ತು ಸೇವಾ ವಿಭಾಗ ಕಳವಳ ವ್ಯಕ್ತಪಡಿಸಿದೆ.
ರಷ್ಯಾದ 6 ಸಾವಿರ ಯೋಧರ ಸಾವು: ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷರು ರಷ್ಯಾ ಮಿಲಿಟರಿ ಪಡೆಯ 6 ಸಾವಿರ ಯೋಧರನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ನೋಡಿ: ರಷ್ಯಾದ ಭೀಕರ ದಾಳಿಗೆ ಉಕ್ರೇನ್ ತತ್ತರ, ಕೀವ್‌ನಲ್ಲಿ ವಾಣಿಜ್ಯ ಕಟ್ಟಡಗಳು ಧ್ವಂಸ