ಲಂಡನ್: ಭಾರತೀಯ ವಿದೇಶಿ ಬಂಡವಾಳ ಹೂಡಿಕೆದಾರರು ದುಬೈ ಹಾಗೂ ಸಿಂಗಾಪೂರ್ ನಗರಗಳಿಗಿಂತಲೂ ಲಂಡನ್ ನಗರದತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ.
2018ರ ಸಾಲಿನಲ್ಲಿ ಇಂಗ್ಲೆಂಡ್, ಅಮೆರಿಕದ 51 ಮತ್ತು ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) 32 ಹೂಡಿಕೆದಾರರನ್ನು ಆಕರ್ಷಿಸಿದ್ದರೇ ಇದೇ ವೇಳೆ ಭಾರತದ 52 ಹೂಡಿಕೆದಾರರನ್ನು ತನ್ನತ್ತ ಸೆಳೆದುಕೊಂಡಿದೆ ಎಂದು ಲಂಡನ್ ಆ್ಯಂಡ್ ಪಾರ್ಟನರ್ (ಎಲ್&ಪಿ) ಸಂಸ್ಥೆಯ ವಿಶ್ಲೇಷಣಾ ವರದಿಯಲ್ಲಿ ಉಲ್ಲೇಖವಾಗಿದೆ.
ಭಾರತೀಯ ಕಂಪನಿಗಳು ಲಂಡನ್‌ನಲ್ಲಿ ಬಂಡವಾಳ ಹೂಡಲು ಹಾಗೂ ತಮ್ಮ ಆಯ್ಕೆಯ ಪರದೆಯನ್ನು ವಿಸ್ತರಿಸುತ್ತಿದ್ದು, ಕಳೆದ ವರ್ಷ 32 ಯೋಜನೆಗಳಿಗೆ ಹಣ ವಿನಿಯೋಗಿಸಿದ್ದವು. ಇದು ಸಾರ್ವಕಾಲಿಕ ಗರಿಷ್ಠವಾಗಿದ್ದು, 2018ರಲ್ಲಿ ಈ ದಾಖಲೆ ಅಳಿಸಿಹಾಕಿದ್ದು, 52 ಪ್ರಾಜೆಕ್ಟ್ಗಳು ಬಂದಿವೆ ಎಂದು ಎಲ್&ಪಿ ಹೇಳಿದೆ.
2017ರಿಂದ 2018ರ ಅವಧಿಯಲ್ಲಿ ಭಾರತದಿಂದ ಲಂಡನ್ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ ಶೇ 255ರಷ್ಟು ಹೆಚ್ಚಳವಾಗಿದೆ. ಇಂಗ್ಲೆಂಡ್ನಲ್ಲಿ ಭಾರತ ಹೂಡಿಕೆಯ ಅಗಾಧತೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 100ರಷ್ಟು ಏರಿಕೆಯಾಗಿದೆ. ಒಟ್ಟಾರೆ ಹೂಡಿಕೆಯಲ್ಲಿ ಶೇ 60ರಷ್ಟು ಬಂಡವಾಳ ಲಂಡನ್ ನಗರ ಕೇಂದ್ರೀಕೃತವಾಗಿದೆ ಎಂದು ಎಫ್ಡಿಐ ಮಾರುಕಟ್ಟೆ ಅಂಕಿಅಂಶಗಳು ತಿಳಿಸುತ್ತವೆ.
ಭಾರತೀಯ ಉದ್ಯಮಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಲಂಡನ್ಗೆ ಆದ್ಯತೆ ನೀಡುತ್ತಿವೆ. ನಮ್ಮ ನಗರಕ್ಕೆ ಹೆಚ್ಚು- ಹೆಚ್ಚು ಮಹತ್ವಾಕಾಂಕ್ಷೆ ಹೊಂದಿರುವ ಕಂಪನಿಗಳು ಆಗಮಿಸಲಿ ಎಂಬ ಉದ್ದೇಶದಿಂದ ಎದುರು ನೋಡುತ್ತಿದ್ದೇವೆ ಎಂದು ಎಲ್&ಪಿಯ ಸಿಇಒ ಲಾರಾ ಸಿಟ್ರಾನ್ ಹೇಳಿದ್ದಾರೆ.