ETV Bharat / international

ವಾಯುದಾಳಿಯ ಮೂಲಕ ಜಿಹಾದಿ ಉಗ್ರನ ಹತ್ಯೆ: ಇಸ್ರೇಲ್- ಗಾಜಾ ನಡುವೆ ಪರಿಸ್ಥಿತಿ ಉದ್ವಿಗ್ನ - ಜಿಹಾದಿ ಉಗ್ರನ ಹತ್ಯೆ ಸುದ್ದಿ

ಮಂಗಳವಾರ ಈ ಬಗ್ಗೆ ಟ್ವೀಟ್​ ಮಾಡಿರುವ ಇಸ್ರೇಲ್​ ರಕ್ಷಣಾ ಪಡೆ, ಇಂದು ಮುಂಜಾನೆ ನಾವು ಇಸ್ಲಾಮಿಕ್​ ಜಿಹಾದಿ ಕಮಾಂಡರ್​ನನ್ನು ಗಾಜಾದಲ್ಲಿ ಹತ್ಯೆಗೈದಿದ್ದೇವೆ. ಇದಕ್ಕಾಗಿಯೇ ನೀವು ಯಾಕೆ ಜಾಗೃತರಾಗಿರಬೇಕು ಎಂದು ಉಗ್ರರಿಗೆ ಎಚ್ಚರಿಕೆ ನೀಡಿದೆ.

ಇಸ್ರೇಲ್​ ಏರ್​ಸ್ಟ್ರೈಕ್​ನಲ್ಲಿ ಇಸ್ಲಾಮಿಕ್​ ಜೀಹಾದಿ ಉಗ್ರನ ಹತ್ಯೆ
author img

By

Published : Nov 13, 2019, 9:03 AM IST

Updated : Nov 13, 2019, 9:18 AM IST

ಜೆರುಸಲೆಮ್ ​(ಇಸ್ರೇಲ್​): ಇಸ್ರೇಲ್ ಪಡೆಗಳು ಗಾಜಾದಲ್ಲಿ ನಡೆಸಿದ ಏರ್‌ಸ್ಟ್ರೈಕ್​ನಲ್ಲಿ ಪ್ಯಾಲೆಸ್ತೀನ್​ನ ಇಸ್ಲಾಮಿಕ್ ಜಿಹಾದಿ ಸಂಘಟನೆಯ ಪ್ರಮುಖ ಕಮಾಂಡರ್ ಹತ್ಯೆಯಾಗಿದ್ದಾನೆ. ಈ ಘಟನೆಯ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಗಾಜಾ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಈತನೊಂದಿಗೆ ಇತರ 10 ಮಂದಿ ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ಪ್ಯಾಲೆಸ್ತೀನ್​ ಸರ್ಕಾರ ಮಾಹಿತಿ ನೀಡಿದೆ. ಇನ್ನೊಂದೆಡೆ ಇಸ್ರೇಲ್​ ನಡೆಸಿದ ಏರ್‌ಸ್ಟ್ರೈಕ್​ನಲ್ಲಿ ಇಸ್ಲಾಮಿಕ್​ ಜಿಹಾದಿ ನಾಯಕ ಅಕ್ರಮ್​-ಅಲ್​-ಅಜೌರಿ ಮಗ ಸೇರಿದಂತೆ ಕನಿಷ್ಟ ಇಬ್ಬರು ಹತರಾಗಿದ್ದಾರೆ ಎಂದು ಸಿರಿಯಾ ಹೇಳಿದೆ.

ಈ ಬೆಳವಣಿಗೆ ಇಸ್ರೇಲ್ ಮತ್ತು ಗಾಜಾ ಉಗ್ರರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟುಮಾಡಿದೆ. ಗಾಜಾ ನಗರದ ಶಜೈಯಾದಲ್ಲಿರುವ ಮನೆಗಳ ಮೇಲೆ ರಾತ್ರೋ ರಾತ್ರಿ ನಡೆಸಿದ ಏರ್‌​ಸ್ಟ್ರೈಕ್​ನಲ್ಲಿ ಬಹ ಅಬು ಅಲ್-ಅಟಾ ಹತ್ಯೆಯಾಗಿದ್ದಾನೆ. ಆತನ ಪತ್ನಿ ಅಸ್ಮಾ ಅಬು ಅಲ್-ಅಟಾ ಮತ್ತು ಇಸ್ಲಾಮಿಕ್ ಜಿಹಾದ್​ನ ಸಶಸ್ತ್ರ ವಿಭಾಗದ ಇತರ ನಾಲ್ವರು ಉಗ್ರರೂ ಕೂಡಾ ಕೊಲ್ಲಲ್ಪಟ್ಟಿದ್ದಾರೆ. ಇನ್ನು ಇಸ್ರೇಲ್​ ದಾಳಿಯಿಂದಾಗಿ ಸುಮಾರು 45 ಜನ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್​ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

  • Some Israelis won't be going to sleep tonight because Islamic Jihad rockets destroyed their homes.

    IDF soldiers won't be going to sleep tonight because we'll be doing all we can to defend them. pic.twitter.com/QGbqcupxwg

    — Israel Defense Forces (@IDF) November 12, 2019 " class="align-text-top noRightClick twitterSection" data=" ">

ಈ ಬಗ್ಗೆ ಸಮರ್ಥನೆ ನೀಡಿರುವ ಇಸ್ರೇಲ್​ ರಕ್ಷಣಾ ಪಡೆ(ಐಡಿಎಫ್​), ಇಸ್ರೇಲ್​ ನಾಗರಿಕರು ಹಾಗೂ ಸೈನಿಕರ ಮೇಲೆ ಅಬು ಅಲ್-ಅಟಾ ಉಗ್ರ ದಾಳಿ ನಡೆಸಲು ಯತ್ನಿಸುತ್ತಿದ್ದ ಎಂದು ಹೇಳಿದೆ.

ಇನ್ನೊಂದೆಡೆ ದಾಳಿಗೆ ಪ್ರತೀಕಾರ ತೀರಿಸಲು ಮುಂದಾಗಿರುವ ಪ್ಯಾಲೇಸ್ತೀನ್, ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸಿದ್ದು ಹಲವರು ಗಾಯಗೊಂಡಿದ್ದು, ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಇಸ್ರೇಲ್‌ ಫೋಟೋ ಸಮೇತ ಟ್ವೀಟ್‌ ಮಾಡಿ ಮಾಹಿತಿ ಒದಗಿಸಿದೆ.

Intro:Body:

isreal

Conclusion:
Last Updated : Nov 13, 2019, 9:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.