ಲಂಡನ್: ಲಂಡನ್ ಸೇತುವೆ ಬಳಿ ನಡೆದ ಉಗ್ರದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್(ಐಸಿಸ್) ಹೊತ್ತುಕೊಂಡಿದೆ.
ಶುಕ್ರವಾರ ಲಂಡನ್ ಸೇತುವೆ ಬಳಿ ನಡೆದಿದ್ದ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು. 28 ವರ್ಷದ ದಾಳಿಕೋರ ಉಸ್ಮಾನ್ ಖಾನ್ ಇಸ್ಲಾಮಿಕ್ ಸ್ಟೇಟ್ಗೆ ಸೇರಿದವನು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಲಂಡನ್ ಬ್ರಿಡ್ಜ್ ಮೇಲೆ ಚಾಕು ಇರಿತ.. ಇಬ್ಬರ ಸಾವು, ಹಲವು ಮಂದಿಗೆ ಗಾಯ
ಲಂಡನ್ ಸೇತುವೆ ಸಮೀಪ ನಡೆದ ದಾಳಿಯನ್ನ ನಾವೇ ನಡೆಸಿದ್ದು ಎಂದಿರುವ ಇಸ್ಲಾಮಿಕ್ ಸ್ಟೇಟ್, ದಾಳಿಯ ಬಗ್ಗೆ ಯಾವುದೇ ಸ್ಪಷ್ಟ ಮತ್ತು ಪೂರಕ ದಾಖಲೆಯನ್ನು ತೋರಿಸಿಲ್ಲ. ಜಿಹಾದಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಗುಂಪಿನ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಐಸಿಸ್ ದಾಳಿಯ ಹಿಂದಿನ ಕಾರಣವನ್ನೂ ಬಹಿರಂಗಪಡಿಸಿದೆ.
ಪೆರೋಲ್ನಲ್ಲಿ ಜೈಲಿನಿಂದ ಹೊರಬಂದಿದ್ದ ಉಗ್ರ ಉಸ್ಮಾನ್ ಖಾನ್ ಶುಕ್ರವಾರ ಲಂಡನ್ ಸೇತುವೆ ಸಮೀಪದಲ್ಲಿ ಇಬ್ಬರನ್ನು ಚಾಕು ಇರಿದು ಸಾಯಿಸಿದ್ದ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಕೇಂಬ್ರಿಡ್ಜ್ ವಿವಿಯ ವಿದ್ಯಾರ್ಥಿಗಳನ್ನು ಈ ದಾಳಿಯಲ್ಲಿ ಗುರಿಯಾಗಿಸಲಾಗಿತ್ತು.