ETV Bharat / international

ಮಹಿಳಾ ದಿನ: ದೇಶದಲ್ಲಿ ಮೊದಲ ಮಹಿಳಾ ಪ್ರತಿಮೆ ನಿರ್ಮಿಸಲು ಸಿಡ್ನಿ ಕ್ರಿಕೆಟ್ ಮೈದಾನ ಪ್ರತಿಜ್ಞೆ - ಪ್ರತಿಮೆ ನಿರ್ಮಿಸಿ ವಿಶೇಷ ಗೌರವ ಸಲ್ಲಿಸಿದ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಈ ಹಿನ್ನೆಲೆಯಲ್ಲಿ ಮಹಿಳಾ ಕ್ರಿಕೆಟ್​ ಆಟಗಾರ್ತಿಯ ಮೊದಲ ಪ್ರತಿಮೆಯನ್ನು ಸ್ಥಾಪಿಸಿ ಸಿಡ್ನಿ ಕ್ರಿಕೆಟ್ ಮಂಡಳಿಯು ಗೌರವ ಸಲ್ಲಿಸಿದೆ.

statue of women's cricketer
ಸಿಡ್ನಿ ಕ್ರಿಕೆಟ್ ಮೈದಾನ
author img

By

Published : Mar 8, 2021, 10:11 AM IST

Updated : Mar 8, 2021, 2:48 PM IST

ಮೆಲ್ಬೋರ್ನ್: ಸಿಡ್ನಿ ಕ್ರಿಕೆಟ್ ಮೈದಾನ (ಎಸ್‌ಸಿಜಿ) ವಿಶ್ವದ ಮಹಿಳಾ ಕ್ರಿಕೆಟಿಗರ ಮೊದಲ ಪ್ರತಿಮೆಯನ್ನು ಸ್ಥಾಪಿಸಲಿದೆ. ಇದುವರೆಗೂ ಜಗತ್ತಿನ ಯಾವುದೇ ಕ್ರಿಕೆಟ್ ಮಂಡಳಿಯು ಮಹಿಳಾ ಕ್ರಿಕೆಟಿಗರ ಕೊಡುಗೆಯನ್ನು ಗುರುತಿಸುವ ಶಿಲ್ಪವನ್ನು ನಿರ್ಮಿಸಿಲ್ಲ.

ಮಾರ್ಚ್ 8ರ ಮಹಿಳಾ ದಿನಾಚರಣೆಯಂದು"ಕ್ರಿಕೆಟ್ ಕಾರ್ಯ ಸಮೂಹದಲ್ಲಿ ಮಹಿಳೆಯರ ಗುರುತಿಸುವಿಕೆ" ಎಂಬ ಹೇಳಿಕೆ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಲಿಂಗ ಅಸಮತೋಲನವನ್ನು ಪರಿಹರಿಸುವ ತನ್ನ ಬದ್ಧತೆಯನ್ನು ಘೋಷಿಸಿತು.

ಪ್ರಮುಖ ಮೊದಲ ಹೆಜ್ಜೆಯಾಗಿ, ಮಹಿಳಾ ಕ್ರಿಕೆಟ್​ ಆಟಗಾರ್ತಿಯ ಮೊದಲ ಪ್ರತಿಮೆಯನ್ನು ಪ್ರಸಿದ್ಧ ಸ್ಥಳದಲ್ಲಿ ಇಡುವುದಾಗಿ ಎಸ್‌ಸಿಜಿ ಪ್ರತಿಜ್ಞೆ ಮಾಡಿದೆ. ಆಸ್ಟ್ರೇಲಿಯಾದಾದ್ಯಂತದ 73 ಪ್ರಸಿದ್ಧ ಪ್ರತಿಮೆಗಳು ಅಥವಾ ಪುರುಷ ಕ್ರಿಕೆಟಿಗರ ಶಿಲ್ಪಗಳಿಗೆ ಹೋಲಿಸಿದರೆ ಈ ಶಿಲ್ಪವು ಮಹಿಳಾ ಕ್ರಿಕೆಟಿಗರಿಗೆ ಮೊದಲನೆಯದಾಗಿದೆ.

"ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು 'ಸವಾಲನ್ನೇ ಆಯ್ಕೆಮಾಡಿ' ಎಂಬ ಧ್ಯೇಯದೊಂದಿಗೆ ಇದೆ. ಈ ಹೇಳಿಕೆ ಉತ್ತೇಜಿಸುವಂತೆ ನಮ್ಮ ಆಟದಾದ್ಯಂತ ಲಿಂಗ ಅಸಮಾನತೆ ಪರಿಹರಿಸಲು ನಾವು ಬದ್ಧ" ಎಂದು ಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಸಿಇಒ ನಿಕ್ ಹಾಕ್ಲೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Last Updated : Mar 8, 2021, 2:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.