ETV Bharat / international

U - 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​: 4X400m ಮಿಶ್ರ ರಿಲೇಯಲ್ಲಿ​​ ಫೈನಲ್‌ ಪ್ರವೇಶಿಸಿದ ಭಾರತ - ಅಬ್ದುಲ್ ರಜಾಕ್

ಅಬ್ದುಲ್ ರಜಾಕ್, ಪ್ರಿಯಾ ಮೋಹನ್, ಸುಮ್ಮಿ ಮತ್ತು ಕಪಿಲ್ ಅವರನ್ನೊಳಗೊಂಡ 4 ಜನ ರಿಲೇ ಆಟಗಾರರ ಭಾರತ ತಂಡ U-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನಲ್ಲಿ 3: 23.36 ಸಮಯದಲ್ಲಿ ಗುರಿ ತಲುಪುವುದರೊಂದಿಗೆ ಫೈನಲ್ ಪ್ರವೇಶಿಸಿದೆ.

India enters mixed
4X400m ಮಿಶ್ರ ರಿಲೇಯಲ್ಲಿ​​ ಫೈನಲ್‌ ಪ್ರವೇಶಿಸಿದ ಭಾರತ
author img

By

Published : Aug 18, 2021, 4:30 PM IST

ನೈರೋಬಿ: ಭಾರತೀಯ ಮಿಶ್ರ 4x400 ಮೀ ರಿಲೇ ತಂಡವು ಬುಧವಾರ ಇಲ್ಲಿ ತನ್ನ ಬಿರುಗಾಳಿಯಂತಹ ಓಟದ ನಂತರ U-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶ ಪಡೆದಿದೆ.

ಅಬ್ದುಲ್ ರಜಾಕ್, ಪ್ರಿಯಾ ಮೋಹನ್, ಸುಮ್ಮಿ ಮತ್ತು ಕಪಿಲ್ ಅವರನ್ನೊಳಗೊಂಡ 4 ಜನ ಭಾರತೀಯ ರಿಲೇ ಆಟಗಾರರ ತಂಡ U-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನಲ್ಲಿ 3:23.36 ಸಮಯದಲ್ಲಿ ಗುರಿ ಮುಟ್ಟುವುದರೊಂದಿಗೆ ಎರಡನೇ ಅತ್ಯುತ್ತಮ ತಂಡವಾಗಿ ಫೈನಲ್ ಪ್ರವೇಶಿಸಿ ಗಮನ ಸೆಳೆಯಿತು.

ಆದಾಗ್ಯೂ, ನೈಜೀರಿಯಾದ ಕ್ರೀಡಾಪಟುಗಳು 3: 21.66 ರಲ್ಲಿ ತಮ್ಮ ಗುರಿ ತಲುಪುವ ಮೂಲಕ ಸುಧಾರಿಸಿದ್ದರಿಂದ ಈ ದಾಖಲೆಯು ಅಲ್ಪಕಾಲಿಕವಾಗಿತ್ತು. ಇವತ್ತು ಸಂಜೆಯ ಬಳಿಕ ಫೈನಲ್​​ ಪಂದ್ಯಗಳು ನಡೆಯಲಿವೆ.

U-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಈವರೆಗೆ ಭಾರತದ ಸೀಮಾ ಆಂಟಿಲ್ (ಡಿಸ್ಕಸ್ ಥ್ರೋ, 2002), ನವಜೀತ್ ಕೌರ್ ಧಿಲ್ಲೋನ್ (ಡಿಸ್ಕಸ್ ಥ್ರೋ, 2014), ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ (ಜಾವೆಲಿನ್ ಥ್ರೋ, 2016) ಮತ್ತು ಹಿಮಾ ದಾಸ್ (400 ಮೀ, 2018) ಇತರರು ಈ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.