ETV Bharat / international

ಭಾರತ ಸೇರಿದಂತೆ 5 ದೇಶಗಳಿಂದ ಬರುವವರಿಗೆ ಕಡ್ಡಾಯ ಹೋಟೆಲ್​ ಕ್ವಾರಂಟೈನ್ ವಿಧಿಸಿದ ಐರ್ಲೆಂಡ್‌

ಐರ್ಲೆಂಡ್‌ನ ಕಡ್ಡಾಯ ಹೋಟೆಲ್​ ಕ್ವಾರಂಟೈನ್ ಪಟ್ಟಿಗೆ ಸೇರ್ಪಡೆಗೊಳ್ಳುವ ಐದು ದೇಶಗಳಲ್ಲಿ ಭಾರತವೂ ಸೇರಿದೆ. ಭಾರತದೊಂದಿಗೆ ಜಾರ್ಜಿಯಾ, ಇರಾನ್, ಮಂಗೋಲಿಯಾ, ಕೋಸ್ಟಾ ರಿಕಾ ದೇಶಗಳು ಈ ಪಟ್ಟಿಯಲ್ಲಿವೆ.

India added to Ireland mandatory quarantine list from May 4

author img

By

Published : May 1, 2021, 8:13 PM IST

ಐರ್ಲೆಂಡ್: ಮಂಗಳವಾರದಿಂದ ಐರ್ಲೆಂಡ್‌ನ ಕಡ್ಡಾಯ ಹೋಟೆಲ್​​ ಕ್ವಾರಂಟೈನ್ ಪಟ್ಟಿಗೆ ಸೇರ್ಪಡೆಗೊಳ್ಳುವ ಐದು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಐರಿಶ್ ಸರ್ಕಾರ ಪ್ರಕಟಿಸಿದೆ.

"ನಿರ್ದಿಷ್ಟವಾಗಿ ಗೊತ್ತುಪಡಿಸಿದ ದೇಶಗಳಿಂದ ಐರ್ಲೆಂಡ್‌ಗೆ ಪ್ರಯಾಣ ಬೆಳೆಸುವವರು ಕಡ್ಡಾಯವಾಗಿ ಹೋಟೆಲ್​ ಕ್ಯಾರೆಂಟೈನ್‌ಗೆ ಒಳಪಡಬೇಕಾಗುತ್ತದೆ. ಪ್ರಯಾಣದ ಮುಂಚಿತವಾಗಿ ಇದನ್ನು ಮೊದಲೇ ಕಾಯ್ದಿರಿಸಬೇಕು" ಎಂದು ಶುಕ್ರವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಕ್ವಾರಂಟೈನ್ ಅವಧಿಯಲ್ಲಿ ಪ್ರಯಾಣಿಕರು ತಮ್ಮ ವಾಸ್ತವ್ಯಕ್ಕಾಗಿ ಮೊದಲೇ ಪಾವತಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯ ಪ್ರಕಾರ, ಮುಂಚಿತವಾಗಿ ಬುಕ್ಕಿಂಗ್​ ಮಾಡದೇ ಐರ್ಲೆಂಡ್‌ಗೆ ಪ್ರಯಾಣಿಸುವುದು ಅಪರಾಧವಾಗಿರಲಿದೆ.

ಭಾರತದೊಂದಿಗೆ ಜಾರ್ಜಿಯಾ, ಇರಾನ್, ಮಂಗೋಲಿಯಾ, ಕೋಸ್ಟಾ ರಿಕಾ ದೇಶಗಳು ಈ ಪಟ್ಟಿಯಲ್ಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.