ಲಂಡನ್: 888ನೇ ಬಸವ ಜಯಂತಿ ಪ್ರಯುಕ್ತ ಲಂಡನ್‌ನಲ್ಲಿರುವ ಬಸವಣ್ಣನ ಪ್ರತಿಮೆಗೆ ಇಂಗ್ಲೆಂಡ್ನಲ್ಲಿರುವ ಭಾರತೀಯ ಹೈಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ಅವರು ಇಂದು ಮಾಲಾರ್ಪಣೆ ಮಾಡಿ ನಮಿಸಿದ್ದಾರೆ. ಇವರೊಂದಿಗೆ ಉಪ ಹೈಕಮಿಷನರ್ ಚರಣಜೀತ್ ಸಿಂಗ್ ಕೂಡ ಪ್ರತಿಮೆಗೆ ಗೌರವ ಸಲ್ಲಿಸಿದರು.
ಕಾಯಕ, ದಾಸೋಹ, ಸಮಾನತೆಯ ತತ್ವಗಳನ್ನು ವಿಶ್ವಕ್ಕೆ ಸಾರಿದ 12ನೇ ಶತಮಾನದ ಕ್ರಾಂತಿಕಾರಿ, ತತ್ವಜ್ಞಾನಿ, ಸಾಮಾಜಿಕ ಸುಧಾರಕ, ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು 2015ರ ನವೆಂಬರ್ 14ರಂದು ಬ್ರಿಟನ್ ಸಂಸತ್ತಿನ ಸ್ಪೀಕರ್ ಆರ್.ಟಿ. ಜಾನ್ ಬೆರ್ಕೊ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.
ಇದನ್ನೂ ಓದಿ: 'ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು..' ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣ
ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಯು ಯುನೈಟೆಡ್ ಕಿಂಗ್ಡಮ್ನಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆ ಮಾತ್ರವಲ್ಲ, ಬ್ರಿಟಿಷ್ ಸಂಸತ್ತಿನ ಆವರಣದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮತಿಯೊಂದಿಗೆ ಸ್ಥಾಪಿಸಿದ ಮೊದಲ ಪ್ರತಿಮೆಯಾಗಿದೆ.