ವಾಷಿಂಗ್ಟನ್: ಅಮೆರಿಕದ ಟಾಕ್ ಶೋ ಹೋಸ್ಟ್ ಓಪ್ರಾ ವಿನ್ಫ್ರೇ ಅವರ ಸಹಯೋಗದೊಂದಿಗೆ ರಚಿಸಲಾದ 'ದ ಮಿ ಯು ಕ್ಯಾನ್ ನಾಟ್ ಸೀ' ಎಂಬ ಮಾನಸಿಕ ಆರೋಗ್ಯದ ಕುರಿತಾದ ವಿಷಯಕ್ಕಾಗಿ, ಪ್ರಿನ್ಸ್ ಹ್ಯಾರಿ ತನ್ನ ಸೆಷನ್ ಅನ್ನು ಚಿತ್ರಿಸಲು ಸ್ವಯಂಪ್ರೇರಿತವಾಗಿ ಒಪ್ಪಿಗೆ ನೀಡಿದ್ದಾರೆ.
ಟೌನ್ ಮತ್ತು ಕಂಟ್ರಿ ನಿಯತಕಾಲಿಕೆಗೆ ನೀಡಿದ ಹೊಸ ಸಂದರ್ಶನದಲ್ಲಿ, ಪೋರ್ಟರ್ ಹ್ಯಾರಿಯ ಭಾವನಾತ್ಮಕ ನಿರ್ಧಾರದ ಬಗ್ಗೆ ಮಾತನಾಡಿದರು.
"ಆಸಿಫ್ ಕಪಾಡಿಯಾ ಹ್ಯಾರಿಯೊಂದಿಗೆ ನಿಜವಾಗಿಯೂ ನಿಕಟವಾಗಿ ಕೆಲಸ ಮಾಡುತ್ತಿದ್ದರು. ಇದು ನಿಜಕ್ಕೂ ಆಸಕ್ತಿದಾಯಕವಾಗಿತ್ತು. ಏಕೆಂದರೆ ನಾವು ಈ ಸರಣಿಯಲ್ಲಿ ಇಷ್ಟು ದಿನ ಕೆಲಸ ಮಾಡುತ್ತಿದ್ದೇವೆ. ಏಕೆಂದರೆ ಪ್ರಿನ್ಸ್ ಹ್ಯಾರಿ ಅವರ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಸಾಕಷ್ಟು ತಿಳಿದಿತ್ತು" ಎಂದು ಸಹ ನಿರ್ದೇಶಿಸಿದ ಪೋರ್ಟರ್ ಹೇಳಿದರು.
“ಹ್ಯಾರಿ, ಅವರು ಸ್ವಯಂಪ್ರೇರಿತರಾಗಿ ಈ ಡ್ಯಾಕ್ಯುಮೆಂಟರಿ ಮಾಡಲು ನಿರ್ಧರಿಸಿದ್ದಾರೆ” ಎಂದು ಹೇಳಿದ್ದಾರೆ.
"ಈ ಸೆಷನ್ ಚಿತ್ರೀಕರಿಸಲು ನಮಗೆ ಅವಕಾಶವಿದೆ. ಬಹುಶಃ ಇದು ಕೆಲವು ಜನರಿಗೆ ಸಿಗುವ ಅವಕಾಶ. ಮಾನಸಿಕ ಸ್ವಾಸ್ಥ್ಯವು ನಿರಂತರ ಅನ್ವೇಷಣೆಯಾಗಿದೆ. ನೀವು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮುಂದುವರಿಸಬೇಕು. ಏನನ್ನಾದರೂ ಮಾಡಲು ಸ್ವಯಂ ಆಗಿ ಮುಂದಾಗಬೇಕು" ಎಂದು ಪೋರ್ಟರ್ ಹೇಳಿದ್ದಾರೆ.
ಡಾಕ್ಯುಮೆಂಟರಿಯಲ್ಲಿ ಹ್ಯಾರಿ ಅವರು ರಾಜಮನೆತನದಲ್ಲಿ ತನ್ನ ಪಾಲನೆ ಬಗ್ಗೆ, ದಿವಂಗತ ತಾಯಿ ರಾಜಕುಮಾರಿ ಡಯಾನಾಳ ಬಗ್ಗೆ, ಹೆಂಡತಿ ಮೇಘನ್ ಮಾರ್ಕೆಲ್ ಬಗ್ಗೆ, ಬಳಿಕ ತಂದೆಯಾಗಿ, ಒಬ್ಬ ವ್ಯಕ್ತಿಯಾಗಿ ಅವರು ಹೇಗೆ ಜೀವನ ನಡೆಸುತ್ತಾರೆ. ಅಷ್ಟೇ ಅಲ್ಲದೇ, ಮಾನಸಿಕವಾಗಿ ಎಷ್ಟು ಬಲಶಾಲಿಯಾಗಿ ಬೆಳೆದಿದ್ದಾರೆ ಎಂಬುದರ ಬಗ್ಗೆ ಮಾತನಾಡುತ್ತಾರೆ.
ಇನ್ನು ಪೋರ್ಟರ್ ಮಾತನಾಡಿ, “ನಾವು ಪ್ರತಿ ವಾರವೂ ಸಭೆಗಳನ್ನು ನಡೆಸುತ್ತಿದ್ದೆವು. ನಾವು ಭಾಗವಹಿಸುವವರ ವಿಭಿನ್ನ ತುಣುಕನ್ನು ನೋಡುತ್ತೇವೆ. ನಾವು ಅವರ ಕಥೆಗಳ ಮೂಲಕ ಮಾತನಾಡುತ್ತೇವೆ. ಪ್ರತಿಯೊಂದು ಕಥೆಯು ಸರಣಿಗೆ ಏನನ್ನು ತರುತ್ತದೆ ಎಂಬುದರ ಕುರಿತು ನಾವು ಮಾತನಾಡುತ್ತೇವೆ” ಎಂದು ಹೇಳಿದರು.
ಪ್ರಪಂಚದಾದ್ಯಂತದ ಜನರ ಕಥೆಗಳೊಂದಿಗೆ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಪರಿಶೋಧಿಸುವ 'ದ ಮಿ ಯು ಕ್ಯಾನ್ ನಾಟ್ ಸೀ' ಈಗ ಆ್ಯಪಲ್ ಟಿವಿ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದೆ.