ಇಟಲಿ: ಹೋಟೆಲ್ ರೂಂವೊಂದರಲ್ಲಿ ಮಹಿಳಾ ರೋಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶ ಹೊಂದಿದ್ದ ಇಟಾಲಿಯನ್ ವೈದ್ಯ ಡಾ. ಮ್ಯಾಜಿಕ್ ಫ್ಲ್ಯೂಟ್ (ನಿಕ್ನೇಮ್) ಅರೆಬೆತ್ತಲೆಯಾಗಿ ಸಿಕ್ಕಿಬಿದ್ದ ನಂತರ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದಾರೆ.
ಏನಿದು ಘಟನೆ: ಬರಿಯಲ್ಲಿರುವ ಸ್ತ್ರೀರೋಗತಜ್ಞ 60 ವರ್ಷದ ಡಾ. ಜಿಯೋವಾನಿ ಮಿನಿಯೆಲ್ಲೊ ರಹಸ್ಯ ಟಿವಿ ತನಿಖೆಗೆ ಗುರಿಯಾಗಿದ್ದಾರೆ. ಇವರು ತಮ್ಮ ಬಳಿ ಬರುವಂತ ಮಹಿಳಾ ರೋಗಿಗಳಿಗೆ ‘ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಇದೆ. ಇದು ಲೈಂಗಿಕವಾಗಿ ಹರಡುವ ವೈರಸ್ ಆಗಿದೆ. ಇದಕ್ಕೆ ಕ್ಯಾನ್ಸರ್ ಉಂಟುಮಾಡುವ ಶಕ್ತಿಯಿದೆ. ಲೈಂಗಿಕ ಕ್ರಿಯೆ ನಡೆಸುವ ಮೂಲಕ ಇದನ್ನು ಗುಣಪಡಿಸಬಹುದೆಂದು ಹೇಳಿದ್ದಾರೆ.
ಈ ರೋಗಕ್ಕೆ ಲೈಂಗಿಕ ಮೂಲಕ ಲಸಿಕೆ ನೀಡಿದ್ರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಮಿನಿಯೆಲ್ಲೋ ಮಹಿಳಾ ರೋಗಿಗೆ ತಿಳಿಸಿದ್ದಾನೆ. 33 ವರ್ಷದ ಮಹಿಳೆಯೊಬ್ಬರು ತಮ್ಮ ರೋಗಿಗಳನ್ನು ಲೈಂಗಿಕತೆಯಿಂದ ಗುಣಪಡಿಸಲು ಮುಂದಾಗುತ್ತಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.
ಮಾಧ್ಯಮದವರು ರಹಸ್ಯ ಕಾರ್ಯಾಚರಣೆ ನಡೆಸಲು ನಟಿಯೊಬ್ಬರನ್ನು ವೈದ್ಯ ಮಿನಿಯೆಲ್ಲೊ ಬಳಿ ಕಳುಹಿಸಿದ್ದರು. ಆ ನಟಿಗೆ ಅವರು ಹೆಚ್ಪಿವಿಯಿಂದ ಬಳಲುತ್ತಿದ್ದೀರಿ. ಇದು ಲೈಂಗಿಕ ಕ್ರಿಯೆ ಮೂಲಕ ಗುಣಪಡಿಸಬಹುದೆಂದು ಹೇಳಿದ್ದಾರೆ. ಬಳಿಕ ಹೋಟೆಲ್ನಲ್ಲಿ ಭೇಟಿಯಾಗಲು ತಿಳಿಸಿದ್ದಾರೆ. ಅದರಂತೆ ಆ ನಟಿ ಹೋಟೆಲ್ಗೆ ತೆರಳಿದ್ದಾರೆ. ಅಲ್ಲಿ ವೈದ್ಯ ನಟಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅರೆ ಬೆತ್ತಲೆಯಾಗಿದ್ದಾಗ ಮಾಧ್ಯಮದವರು ಎಂಟ್ರಿ ಕೊಟ್ಟಿದ್ದಾರೆ. ಬಳಿಕ ವೈದ್ಯನ ವಂಚನೆಗಳು ಮುಖ್ಯವಾಹಿನಿಗೆ ಬಂದಿವೆ.
ನಟಿಯೊಂದಿಗೆ ಹೋಟೆಲ್ ರೂಂನಲ್ಲಿ ಅರೆಬೆತ್ತಲೆಯಾಗಿ ಸಿಕ್ಕಿಬಿದ್ದ ನಂತರ ವೈದ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.