ETV Bharat / international

ರಷ್ಯಾ ದಾಳಿ ಬೆದರಿಕೆ: ಉಕ್ರೇನ್ ತೊರೆಯುವಂತೆ ತನ್ನ ನಾಗರಿಕರಿಗೆ ಜರ್ಮನಿ, ಫ್ರಾನ್ಸ್‌ ಮನವಿ - ಉಕ್ರೆನ್ ಗೆ ಭಾಗಶಃ ವಿಮಾನ ರದ್ದು

ರಷ್ಯಾದಿಂದ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿರುವಾಗ ಆದಷ್ಟು ಬೇಗ ದೇಶ ತೊರೆದು ಬರುವಂತೆ ತನ್ನ ನಾಗರಿಕರಿಗೆ ಜರ್ಮನಿ, ಫ್ರಾನ್ಸ್‌ ಸೂಚಿಸಿವೆ.

germany-urges-citizens-to-leave-ukraine
ಉಕ್ರೇನ್ ತೊರೆಯಲು ತನ್ನ ನಾಗರಿಕರಿಗೆ ಜರ್ಮನಿ ಒತ್ತಾಯ
author img

By

Published : Feb 20, 2022, 9:58 AM IST

ಬರ್ಲಿನ್/ಪ್ಯಾರಿಸ್‌: ಜರ್ಮನಿ ಹಾಗು ಫ್ರಾನ್ಸ್‌ ಸರಕಾರವು ತಮ್ಮ ನಾಗರಿಕರಿಗೆ ಈ ಕೂಡಲೇ ಉಕ್ರೇನ್ ಬಿಡುವಂತೆ ಸೂಚಿಸಿವೆ. ಉಕ್ರೇನಿಗೆ ಪ್ರಯಾಣ ಬೆಳೆಸುವ ಜರ್ಮನಿಯ ವಿಮಾನಯಾನ ಸಂಸ್ಥೆ ಸೋಮವಾರದಿಂದ ಭಾಗಶಃ ವಿಮಾನಯಾನ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ.

ಈ ಮಧ್ಯೆ ಫ್ಲ್ಯಾಗ್ ಕ್ಯಾರಿಯರ್ ಮತ್ತು ಜರ್ಮನಿಯ ಅತಿದೊಡ್ಡ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ, ಫೆಬ್ರವರಿ ಅಂತ್ಯದವರೆಗೆ ಕೀವ್ ಮತ್ತು ಒಡೆಸ್ಸಾಗೆ ತನ್ನ ನಿಯಮಿತ ವಿಮಾನಗಳ ಹಾರಾಟ ಸ್ಥಗಿತಗೊಳಿಸುವುದಾಗಿ ಹೇಳಿದೆ.

ಈಗಾಗಲೇ ಟಿಕೆಟ್ ಕಾಯ್ದಿರಿಸಿದವರಿಗೆ ಶನಿವಾರ ಮತು ಭಾನುವಾರ ನಿಯಮಿತವಾಗಿ ವಿಮಾನಗಳ ಹಾರಾಟ ನಡೆಯಲಿದ್ದು, ಯಾವುದೇ ಪ್ರಯಾಣ ರದ್ದತಿಯಾದರೆ ಈ ಕುರಿತು ಮಾಹಿತಿ ಮತ್ತು ಇತರೆ ವಿಮಾನಯಾನಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಪಶ್ಚಿಮ ಉಕ್ರೇನ್‌ನ ಎಲ್ವಿವ್‌ಗೆ ವಿಮಾನಗಳು ನಿಯಮಿತವಾಗಿ ಹಾರಾಟ ಮುಂದುವರಿಯುತ್ತದೆ ಎಂದು ಲುಫ್ತಾನ್ಸ ಹೇಳಿದೆ.

ಇದನ್ನೂ ಓದಿ: ಬಾಂಬ್ ಸ್ಫೋಟ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಜಮೈತ್ ಉಲೇಮಾ ಇ ಹಿಂದ್ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.