ಲಂಡನ್: ಕೊರೊನಾ ಸೋಂಕಿಗೆ ಕಾರಣವಾಗುವ SARS-CoV-2ಗೆ ಚಿಕಿತ್ಸೆ ನೀಡುವ ಸಂಭಾವ್ಯ ಸೆಲ್ಯುಲಾರ್ ಗುರಿಗಳನ್ನು ಜರ್ಮನ್ ಸಂಶೋಧಕರ ತಂಡವು ಗುರುತಿಸಿದೆ.
ಗೋಥೆ ವಿಶ್ವವಿದ್ಯಾಲಯದ ಜೀವರಾಸಾಯನಿಕ ಮತ್ತು ವೈರಾಲಜಿಸ್ಟ್‌ಗಳ ತಂಡ ಹಾಗೂ ಜರ್ಮನಿಯ ಫ್ರಾಂಕ್‌ಫರ್ಟ್ ವಿಶ್ವವಿದ್ಯಾಲಯ ಆಸ್ಪತ್ರೆ ಸಂಯುಕ್ತಗಳ ಸರಣಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು, ವೈರಸ್ನ ಸಂತಾನೋತ್ಪತ್ತಿ ಕಡಿಮೆ ಆಗಿರುವುದನ್ನು ಕಂಡುಹಿಡಿದಿದೆ.
ಪ್ರಸ್ತುತ ಸಂಶೋಧನೆಗಳ ಆಧಾರದ ಮೇಲೆ ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿ, ಕ್ಲಿನಿಕಲ್ ಪ್ರಯೋಗಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಮೆರಿಕ ಕಂಪನಿಯು ಹೇಳಿದೆ. ಕೆನಡಾದ ಕಂಪನಿಯೊಂದು ವಿಭಿನ್ನ ವಸ್ತುವಿನೊಂದಿಗೆ ಕ್ಲಿನಿಕಲ್ ಅಧ್ಯಯನವನ್ನು ಆರಂಭಿಸುತ್ತಿದೆ.
ಗೊಥೆ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಬಯೋಕೆಮಿಸ್ಟ್ರಿ 2ರಲ್ಲಿ ಅಭಿವೃದ್ಧಿಪಡಿಸಿದ ತಂತ್ರವನ್ನು ಬಳಸಿ ಎರಡೂ ಸಂಸ್ಥೆಗಳ ಸಂಶೋಧಕರು ಜಂಟಿಯಾಗಿ ಕೊರೊನಾ ಸೋಂಕು ಮಾನವ ಕೋಶಗಳನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತೋರಿಸಲು ಸಾಧ್ಯವಾಗಿವೆ.
ಅವರು ಕೆಲವು ತಿಂಗಳ ಹಿಂದೆ ಅಭಿವೃದ್ಧಿಪಡಿಸಿದ ಮೆಪ್ರೊಡ್ ವಿಧಾನವು ಜೀವಕೋಶದೊಳಗಿನ ಸಾವಿರಾರು ಪ್ರೋಟೀನ್‌ಗಳ ಪ್ರಮಾಣ ಮತ್ತು ಸಂಶ್ಲೇಷಣೆಯ ಪ್ರಮಾಣವನ್ನು ನಿರ್ಧರಿಸಲು ಸಾಧ್ಯವಾಗಿಸಿದೆ. ನಾವು ಅಭಿವೃದ್ಧಿಪಡಿಸಿದ ಮೆಪ್ರೊಡ್-ತಂತ್ರಜ್ಞಾನಕ್ಕೆ ಧನ್ಯವಾದಗಳು. ನಾವು ಮೊದಲ ಬಾರಿಗೆ ಸೋಂಕಿನ ಮೇಲೆ ಸೆಲ್ಯುಲಾರ್ ಬದಲಾವಣೆಯನ್ನು ಕೆಲ ಸಮಯದ ನಂತರದಲ್ಲಿ ಹೆಚ್ಚಿನ ವಿವರ ಕಂಡುಕೊಳ್ಳಲು ಸಾಧ್ಯವಾಯಿತು. ನಮ್ಮ ಸಂಶೋಧನೆಗಳ ಸಂಭಾವ್ಯ ವ್ಯಾಪ್ತಿಯ ಬಗ್ಗೆ ನಮಗೆ ಸ್ಪಷ್ಟವಾಗಿ ತಿಳಿದಿತ್ತು ಎಂದು ಗೊಥೆ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಲೇಖಕ ಕ್ರಿಶ್ಚಿಯನ್ ಮಂಚ್ ಹೇಳಿದ್ದಾರೆ.
ಮಾನವನ ದೇಹ ಸೇರಿದ ವೈರಸ್ ಸಂತಾನೋತ್ಪತ್ತಿಯನ್ನು ತಡೆಯವ ಬಗ್ಗೆ ಸಂಶೋಧನೆ ನಡೆಸಿದ್ದು, ಪ್ರತಿರೋಧಕಗಳನ್ನು ಅನ್ವಯಿಸುವ ಮೂಲಕ ಕೋಶಗಳಲ್ಲಿ ವೈರಸ್ ಸಂತಾನೋತ್ಪತ್ತಿಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.