ಲಂಡನ್ ಮೃಗಾಲಯವು ಮೂರು ದೈತ್ಯ ಹೆಣ್ಣು ಆಮೆಗಳ ಮಧ್ಯೆ ಓಟದ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಆಮೆಗೆ ಐಷಾರಾಮಿ ಕೊಳಗಳು, ವಿಶೇಷ ಸಸ್ಯವರ್ಗವನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ.
ಸಾಮಾನ್ಯವಾಗಿ ಆಮೆಗಳು ತುಂಬಾ ನಿಧಾನಗತಿಯಲ್ಲಿ ನಡೆಯುತ್ತವೆ. ಗ್ಯಾಲಪಗೋಸ್(ದ್ವೀಪ)ನಿಂದ ಬಂದ ಈ ಆಮೆಗಳು ಓಡಲು ಸಿದ್ಧವಾಗಿವೆ. ಇತರ ಆಮೆಗಳಿಗೆ ಹೋಲಿಸಿದ್ರೆ, ಈ ಪೊಲ್ಲಿ, ಡಾಲಿ, ಪ್ರಿಸಿಲ್ಲಾ ಹೆಸರಿನ ಆಮೆಗಳು ಬಹಳ ವೇಗವಾಗಿ ನಡೆಯುತ್ತವೆ. 26 ವರ್ಷದ ಈ ಆಮೆಗಳಿಗೆ ತರಬೇತಿ ನೀಡಲಾಗಿದ್ದು, ತರಬೇತಿದಾರರು ಹೇಳಿದ ರೀತಿ ಕೇಳುತ್ತವೆ.
ಮೃಗಾಲಯದ ಅಧಿಕಾರಿ ಬೆಂಜಮಿನ್ ಟ್ಯಾಪ್ಲೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸ್ಪರ್ಧೆಗೆ ವ್ಯಾಯಾಮದ ಅಗತ್ಯವಿಲ್ಲ. ಅವುಗಳನ್ನು ಹೊಸ ವಸತಿ ಗೃಹಗಳಿಗೆ ಸೇರಿಸುವ ಸಲುವಾಗಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಈ ಹಿಂದೆ ಈ ಮೂರೂ ಆಮೆಗಳು ಜರ್ಮನಿಯ ಜ್ಯೂರಿಚ್ ಮೃಗಾಲಯದಲ್ಲಿದ್ದವು.