ನವದೆಹಲಿ: ಭಾರತಕ್ಕೆ 8 ಹೆಚ್ಚು ಸಾಮರ್ಥ್ಯದ ಆಮ್ಲಜನಕ ಉತ್ಪಾದಕಗಳು, 2,000 ರೋಗಿಗಳಿಗೆ ಐದು ದಿನಗಳವರೆಗೆ ಸಾಕಾಗುವಷ್ಟು ದ್ರವ ಆಮ್ಲಜನಕ ಜೊತೆಗೆ 28 ವೆಂಟಿಲೇಟರ್‌ಗಳು ಮತ್ತು ಐಸಿಯುಗಳಿಗೆ ಉಪಕರಣಗಳನ್ನು ಒದಗಿಸುವುದಾಗಿ ಫ್ರಾನ್ಸ್ ತಿಳಿಸಿದೆ.
"ಮುಂದಿನ ಕೆಲ ದಿನಗಳಲ್ಲಿ, ಫ್ರಾನ್ಸ್ ಭಾರತಕ್ಕೆ ತಕ್ಷಣದ ಪರಿಹಾರ ಮಾತ್ರವಲ್ಲದೆ ದೀರ್ಘ ಪರಿಹಾರವನ್ನೂ ಒದಗಿಸಲಿದೆ. 250 ಬೆಡ್ಗಳಿಗೆ ಒಂದು ವರ್ಷದವರೆಗೆ ಆಮ್ಲಜನಕ ಪೂರೈಸುವ 8 ಹೆಚ್ಚು ಸಾಮರ್ಥ್ಯದ ಆಮ್ಲಜನಕ ಉತ್ಪಾದಕಗಳು, 2,000 ರೋಗಿಗಳಿಗೆ 5 ದಿನಗಳವರೆಗೆ ದ್ರವ ಆಮ್ಲಜನಕ ಪೂರೈಸಬಲ್ಲ 28 ವೆಂಟಿಲೇಟರ್‌ಗಳು ಮತ್ತು ಐಸಿಯು ಉಪಕರಣಗಳನ್ನು ನೀಡಲಿದೆ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಟ್ವೀಟ್ ಮಾಡಿದ್ದಾರೆ.
-
#FranceStandsWithIndia
— Emmanuel Lenain (@FranceinIndia) April 26, 2021 " class="align-text-top noRightClick twitterSection" data="
In the next few days, 🇫🇷 will deliver to 🇮🇳 not only immediate relief but also long-term capacities:
- 8 high capacity oxygen generators, each providing yearlong O2 for 250 beds
- Liquid O2 for 2000 patients for 5 days
- 28 ventilators & equipment for ICUs
">#FranceStandsWithIndia
— Emmanuel Lenain (@FranceinIndia) April 26, 2021
In the next few days, 🇫🇷 will deliver to 🇮🇳 not only immediate relief but also long-term capacities:
- 8 high capacity oxygen generators, each providing yearlong O2 for 250 beds
- Liquid O2 for 2000 patients for 5 days
- 28 ventilators & equipment for ICUs#FranceStandsWithIndia
— Emmanuel Lenain (@FranceinIndia) April 26, 2021
In the next few days, 🇫🇷 will deliver to 🇮🇳 not only immediate relief but also long-term capacities:
- 8 high capacity oxygen generators, each providing yearlong O2 for 250 beds
- Liquid O2 for 2000 patients for 5 days
- 28 ventilators & equipment for ICUs
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪ್ರಾರಂಭಿಸಿರುವ ಬೃಹತ್ ಒಗ್ಗಟ್ಟು ಪ್ರದರ್ಶನ ಕಾರ್ಯಕ್ರಮವು, ಭಾರತದ ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸುವುದು ಮತ್ತು ಆರೋಗ್ಯ ವ್ಯವಸ್ಥೆಯ ದೀರ್ಘಕಾಲಿನ ಅಭಿವೃದ್ದಿಪಡಿಸುವ ಗುರಿಯನ್ನು ಹೊಂದಿದೆ ಎಂದು ಲೆನೈನ್ ಹೇಳಿದ್ದಾರೆ.
ದೇಶದಲ್ಲಿ ಒಂದೇ ದಿನ ಮೂರು ಲಕ್ಷಕ್ಕಿಂತಲೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾದ ಬಳಿಕ ಫ್ರೆಂಚ್ ಸಹಾಯ ಹಸ್ತಚಾಚಲು ಮುಂದಾಗಿದೆ.